Advertisement

ಸ್ಮಶಾನದ ಗುಂಡಿಗಿಳಿದು ಶವದ ಗಂಟಲು ದ್ರವ ತೆಗೆದ ಗಟ್ಟಿಗಿತ್ತಿ!

07:12 AM May 13, 2020 | Lakshmi GovindaRaj |

ಹಾವೇರಿ: ಮಹಿಳಾ ಲ್ಯಾಬ್‌ ಟೆಕ್ನಿಶಿಯನ್‌ (ಪ್ರಯೋಗಾಲಯದ ತಂತ್ರಜ್ಞೆ) ಸ್ಮಶಾನದ ಗುಂಡಿಗೆ ಇಳಿದು ಶವದ ಗಂಟಲು ದ್ರವ ತೆಗೆದ ಅಪರೂಪದ ಘಟನೆ ಸವಣೂರು ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿ ನಡೆದಿದೆ. ಸ್ಮಶಾನದ  ಗುಳಿಯಲ್ಲಿಟ್ಟಿದ್ದ ಶವದ ಬಾಯಿ ತೆಗೆದು ಗಂಟಲುದ್ರವ ಸಂಗ್ರಹಿಸಿದ ಆ ಗಟ್ಟಿಗಿತ್ತಿ ಕೊರೊನಾ ವಾರಿಯರ್‌ ಶೋಭಾ. ಹಿರೇಮುಗದೂರು ಗ್ರಾಮದಲ್ಲಿ ಸೋಮವಾರ 70 ವರ್ಷದ ವ್ಯಕ್ತಿಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು.

Advertisement

ಕುಟುಂಬದವರು ಮಂಗಳವಾರ ಶವವನ್ನು ಸ್ಮಶಾನಕ್ಕೆ ಒಯ್ದು, ಹೊಂಡ ತೆಗೆದು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಮಣ್ಣು ಹಾಕುವುದೊಂದೇ ಬಾಕಿ ಇತ್ತು. ಇತ್ತ ವೃದಟಛಿ ಮೃತಪಟ್ಟ ಮಾಹಿತಿ ತಡವಾಗಿ ತಿಳಿದ ಶೋಭಾ ಅವರು ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹಿಸಲು ನೇರವಾಗಿ ಸ್ಮಶಾನಕ್ಕೇ ತೆರಳಿದ್ದಾರೆ. ಪಿಪಿಇ ಕಿಟ್‌ ಹಾಕಿಕೊಂಡು ಹಾಗೂ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಬಂದವರೇ ಹೊಂಡ ದಲ್ಲಿ ಇಳಿದು ಶವದ ಗಂಟಲು ದ್ರವ  ಸಂಗ್ರಹಿಸಿಕೊಂಡು ಹೋದರು. ಅಷ್ಟಕ್ಕೂ ಶೋಭಾ ಅವರು ಶೂಶ್ರೂಷಕಿಯೂ ಅಲ್ಲ.

ಆರೋಗ್ಯ ಕಾರ್ಯಕರ್ತೆಯೂ ಅಲ್ಲ. ಸವಣೂರು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಬ್‌ ಟೆಕ್ನಿಶಿಯನ್‌. ಇತ್ತೀಚೆಗೆ  ಸವಣೂರಿನಲ್ಲಿ ಎರಡು ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರಿಗೆ ತಪಾಸಣೆ ಮಾಡಿದ್ದ ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದರು. ಕೊರೊನಾ ಪಾಸಿಟಿವ್‌ ಕಂಡು ಬಂದ ಪ್ರದೇಶದಲ್ಲಿ  ಯಾರೇ ಮೃತಪಟ್ಟರೂ ಅವರ ಗಂಟಲು ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲೇಬೇಕು. ಹೀಗಾಗಿ ಶೋಭಾ ಅವರೇ ಈ ಸಾಹಸಕ್ಕಿಳಿದು ಗಂಟಲು ಮಾದರಿ ಸಂಗ್ರಹಿಸಿದರು. ಲ್ಯಾಬ್‌ ಟೆಕ್ನಿಶಿಯನ್‌ ಶೋಭಾರ ಧೈರ್ಯವನ್ನು ಅಲ್ಲಿ  ನೆರೆದವರೆಲ್ಲ ಕೊಂಡಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next