ಬೆಂಗಳೂರು: ತಡರಾತ್ರಿ ಸಿನಿಮಾ ವೀಕ್ಷಣೆಗೆ ಬಂದ ಮಹಿಳೆಯೊಬ್ಬರು ವ್ಯಾಲೆಟ್ ವಿಚಾರಕ್ಕೆ ಸೆಕ್ಯೂರಿಟಿ ಗಾರ್ಡ್ ಹಾಗೂ ಸ್ವಚ್ಛತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಅಶೋಕನಗರದ ಗರುಡ ಮಾಲ್‌ನಲ್ಲಿ ನಡೆದಿದೆ. ಈ ಸಂಬಂಧ ದೂರು ಮತ್ತು ಪ್ರತಿದೂರು ದಾಖಲಾಗಿದೆ.
ಘಟನೆ ಸಂಬಂಧ ನೇತ್ರಾ ಎಂಬವರು ಮಾಲ್‌ನ ಸ್ವತ್ಛತಾ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ಗಾರ್ಡ್ ವಿರುದ್ಧ ದೂರು ನೀಡಿದ್ದಾರೆ. ಮತ್ತೂಂದೆಡೆ ಸ್ವಚ್ಛತಾ ಸಿಬ್ಬಂದಿ ನೇತ್ರಾ ವಿರುದ್ಧ ಹಲ್ಲೆ ಆರೋಪದಡಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಡಿ.9ರಂದು ರಾತ್ರಿ 10.30ಕ್ಕೆ ನೇತ್ರಾ ಗರುಡ ಮಾಲ್‌ನ ಪಿವಿಆರ್‌ನಲ್ಲಿ ಅನಿಮಲ್ ಸಿನಿಮಾ ವೀಕ್ಷಣೆಗೆ ಬಂದಿದ್ದಾರೆ. ಸಿನಿಮಾ ಮುಗಿಸಿ ಹೊರ ಬರುವಾಗ ಸಿನಿಮಾ ಹಾಲ್‌ನಲ್ಲೇ ವ್ಯಾಲೆಟ್ ಮರೆತು ಹೋಗಿದ್ದರು. ಬಳಿಕ ಸ್ವಚ್ಛತಾ ಸಿಬ್ಬಂದಿಗೆ ಸಿನಿಮಾ ಹಾಲ್ ಸ್ವತ್ಛಗೊಳಿಸುವಾಗ ವ್ಯಾಲೆಟ್ ಸಿಕ್ಕಿದೆ. ಅದನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಆ ಬಳಿಕ ವ್ಯಾಲೆಟ್ ಗಾಗಿ ನಸುಕಿನ 3 ಗಂಟೆಗೆ ತನ್ನ ಪರಿಚಯಸ್ಥರ ಜತೆ ಮತ್ತೆ ಮಾಲ್ ಬಳಿ ಬಂದ ನೇತ್ರಾ ಸೆಕ್ಯೂರಿಟಿ ಗಾರ್ಡ್‌ಗೆ ವ್ಯಾಲೆಟ್ ಕಳುವಾಗಿರುವ ಬಗ್ಗೆ ತಿಳಿಸಿದ್ದಾರೆ.
ಆಗ ಸೆಕ್ಯೂರಿಟಿ ಗಾರ್ಡ್ ನಿಯಮಾನುಸಾರ ಕೆಲ ಐಡೆಂಟಿಟಿ ಮಾಹಿತಿ ಕೇಳಿದ್ದಾರೆ. ಆ ಮಾಹಿತಿ ನೀಡಲು ನಿರಾಕರಿಸಿದ ನೇತ್ರಾ, ಸೆಕ್ಯೂರಿಟಿ ಗಾರ್ಡ್ ಜತೆ ವಾಗ್ವಾದ ನಡೆಸಿದ್ದಾರೆ. ಅದು ವಿಕೋಪಕ್ಕೆ ಹೋದಾಗ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕಾಲಿನಿಂದ ಒದ್ದು, ಕಪಾಳಮೋಕ್ಷ ಮಾಡಿದ್ದಾರೆ. ಆಗ ಸ್ವತ್ಛತಾ ಸಿಬ್ಬಂದಿ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ್ದಾರೆ. ಅವರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದೇ ವೇಳೆ ಭದ್ರತಾ ಸಿಬ್ಬಂದಿ ತಪ್ಪಾಯ್ತು ಕ್ಷಮಿಸಿ ಎಂದು ಕಾಲಿಗೆ ಬಿದ್ದರೂ, ಆತನಿಗೆ ಕಾಲಿನಲ್ಲಿ ಒದ್ದು ನೇತ್ರಾ ದರ್ಪ ತೋರಿದ್ದಾರೆ ಎಂದು ಮಾಲ್ ಸಿಬ್ಬಂದಿ ಆರೋಪಿಸಿದ್ದಾರೆ.
ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನೇತ್ರಾ ಹಾಗೂ ಸೆಕ್ಯೂರಿಟಿ ಗಾರ್ಡ್ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನೇತ್ರಾ ತನ್ನ ವ್ಯಾಲೆಟ್‌ನಲ್ಲಿದ್ದ 8 ಸಾವಿರ ರೂ. ಕಳುವಾಗಿದೆ ಎಂದು ತಿಳಿಸಿ, ಠಾಣೆಗೆ ಬಂದು ದೂರು ನೀಡಿದ್ದಾರೆ. ಮತ್ತೂಂದೆಡೆ ಮಾಲ್‌ನ ಸಿಬ್ಬಂದಿಯೂ ನೇತ್ರಾ ವಿರುದ್ಧ ಹಲ್ಲೆ, ನಿಂದನೆ ಆರೋಪದಡಿ ಪ್ರತಿ ದೂರು ದಾಖಲಿಸಿದ್ದಾರೆ.
ಕೂಡಲೇ ನಾವು ಹೇಳುವ ಖಾತೆಗೆ ಹಣ ಹಾಕುವಂತೆ ಸೂಚಿಸಿದ್ದಾರೆ. ಅವರ ಮಾತು ನಂಬಿದ ತಾರಕ್, ದುಷ್ಕರ್ಮಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ 1.98 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ಆ ನಂತರ ವಂಚಕರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಬಳಿಕ ತಾವೂ ವಂಚನೆಗೊಳಗಾಗಿದ್ದೇನೆ ಎಂದು ತಿಳಿದ ತಾರಕ್ ಶಾ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಸಿಕೊಂಡು ವಂಚಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಸೆನ್ ಪೊಲೀಸರು ಹೇಳಿದರು.