Advertisement

ಲೈಂಗಿಕ ಕ್ರಿಯೆಗೆ ಪತಿಯಿಂದ ಬಲವಂತ ಎಂದು ಆರೋಪಿಸಿ ಮಹಿಳೆ ದೂರು

11:51 AM Sep 01, 2017 | |

ಬೆಂಗಳೂರು: ಪತಿಯು ಲೈಂಗಿಕ ಕ್ರಿಯೆಗೆ ವಿಪರೀತ ಒತ್ತಾಯಿಸುತ್ತಿದ್ದು ಕಿರುಕುಳ ನೀಡುತ್ತಿದ್ದಾರೆ, ಇದಕ್ಕೆ ಪತಿಯ ಪೋಷಕರು ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಪ್ರಸಂಗ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಮಲ್ಲೇಶಪಾಳ್ಯದ ನಿವಾಸಿ ಕಮಲ ( ಹೆಸರು ಬದಲಿಸಲಾಗಿದೆ) ಎಂಬುವವರು, ತನ್ನ ಪತಿ,  ಆತನ ತಂದೆ, ತಾಯಿ,  ಸಹೋದರಿಯ ವಿರುದ್ಧ ಭೈಯಪ್ಪನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ನಾಲ್ವರ ವಿರುದ್ಧವೂ ಸೆಕ್ಷನ್‌ 498(ಎ) ಅಡಿಯಲ್ಲಿ ಎಫ್ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. 

2008ರಲ್ಲಿ ನಮ್ಮಿಬ್ಬರ ಮದುವೆಯಾಗಿದ್ದು, ಎರಡು ವರ್ಷಗಳ ನಂತರ ನನ್ನ ಪತಿ ನನ್ನ ವಿರುದ್ಧ ವಿನಾಕಾರಣ ಆರೋಪಗಳನ್ನು ಮಾಡುತ್ತಾ ದೈಹಿಕ ಹಾಗೂ ಮಾನಸಿಕ ಹಿಂಸೆ ನಡೆಸುತ್ತಿದ್ದಾರೆ. ಅಲ್ಲದೆ ಲೈಂಗಿಕ ಕ್ರಿಯೆಗೆ ವಿಪರೀತ ಒತ್ತಾಯ ಮಾಡುತ್ತಿರುತ್ತಾರೆ. ಸಹಕರಿಸದಿದ್ದರೆ  ಕಿರುಕುಳ ನೀಡುತ್ತಾರೆ. ಅದೇ ರೀತಿ ಆತನ ಪೋಷಕರು ಹಾಗೂ ಸಹೋದರಿ ವಿವಿಧ ಕಾರಣಗಳಿಗೆ ಕಿರುಕುಳ ನೀಡುತ್ತಿದ್ದು, ಈ ಸಂಬಂಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ ಎಂದು ಪೊಲೀಸರು ತಿಳಿಸಿದರು.

ದೂರುದಾರ ಮಹಿಳೆ  ಎರಡು ವರ್ಷಗಳ  ಹಿಂದೆ ಗಂಡನಿಂದ ಬೇರೆಯಾಗಿ ತಾಯಿ ಮನೆಯಲ್ಲಿ ನೆಲೆಸಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಹಿಳೆಯ ಪತಿ ಕೂಡ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆ ಬಳಿಕ ಈ ಪ್ರಕರಣವನ್ನು ಹೆಬ್ಟಾಳ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next