Advertisement

ಈ ವಿಮಾನದ ರೆಕ್ಕೆ ಫ‌ುಟ್‌ಬಾಲ್‌ ಮೈದಾನದಷ್ಟು !

03:02 AM Apr 15, 2019 | Team Udayavani |

ನ್ಯೂಯಾರ್ಕ್‌: ರಾಕೆಟ್‌ಗಳನ್ನು ಕಕ್ಷೆಗೆ ತಲುಪಿಸಲು ಸುಲಭವಾಗಿಸುವ ಉದ್ದೇಶದಿಂದ ಅಮೆರಿಕದ ಸ್ಟ್ರಾಟೋಲಾಂಚ್‌ ಎಂಬ ಕಂಪೆನಿ ವಿಶ್ವದ ಅತ್ಯಂತ ದೊಡ್ಡ ವಿಮಾನವೊಂದನ್ನು ಪ್ರಾಯೋಗಿಕವಾಗಿ ಹಾರಾಟ ನಡೆಸಿದೆ. ರವಿವಾರ ಕೆಲವು ಗಂಟೆಗಳ ಕಾಲ ಈ ವಿಮಾನ ಹಾರಾಟ ನಡೆಸಿದೆ. ಇದರ ರೆಕ್ಕೆಗಳು ಒಂದು ಫ‌ುಟ್‌ಬಾಲ್‌ ಮೈದಾನದಷ್ಟು ದೊಡ್ಡದಾಗಿ ಅಂದರೆ 385 ಅಡಿ ಉದ್ದವಿವೆ.

Advertisement

ಇದು ಆರು ಎಂಜಿನ್‌ ಹೊಂದಿದ್ದು, 15 ಸಾವಿರ ಅಡಿ ಎತ್ತರದವರೆಗೆ ಪ್ರಯಾಣಿಸಿದೆ ಮತ್ತು ಗಂಟೆಗೆ 170 ಮೈಲು (274 ಕಿ.ಮೀ.) ವೇಗದಲ್ಲಿ ಸಂಚರಿಸಿದೆ. ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್‌ ಅಲೆನ್‌ 2011ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಆದರೆ ಅವರ ಮರಣಾನಂತರ ಸಂಸ್ಥೆಯ ಭವಿಷ್ಯವೇ ಮಂಕಾಗಿತ್ತು. ಈ ನಡುವೆ ಅಮೆರಿಕ ಸರಕಾರ ವಿಶೇಷ ಮುತುವರ್ಜಿ ಹೊಂದಿದ್ದರಿಂದ ಇದರ ಪ್ರಯೋಗ ನಡೆಸಲಾಗಿದೆ. ಒಮ್ಮೆಗೆ ಮೂರು ರಾಕೆಟ್‌ಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

ರಾಕೆಟ್‌ ಉಡಾವಣೆ ಸಾಮರ್ಥ್ಯ
ಈ ವಿಮಾನ ಮೂರು ರಾಕೆಟ್‌ಗಳನ್ನು ಉಡಾವಣೆ ಮಾಡಬಹುದಾದ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ವಿಶೇಷವಾಗಿ ರೆಕ್ಕೆಗಳಲ್ಲಿ ರಾಕೆಟ್‌ ಉಡಾಹಕಗಳನ್ನು ವಿನ್ಯಾಸ ಮಾಡಲಾಗಿದ್ದು, ಇಲ್ಲೇ ದಹನ ಆರಂಭಿಸಿ ಬಾಹ್ಯಾಕಾಶಕ್ಕೆ ರಾಕೆಟ್‌ ನೆಗೆಯಲಿದೆ. ಸಣ್ಣ ಸ್ಯಾಟಲೈಟ್‌ಗಳನ್ನು ಈ ರಾಕೆಟ್‌ ಮೂಲಕ ಉಡಾವಣೆ ಮಾಡಬಹುದಾಗಿದೆ.

ವೆಚ್ಚ ಕಡಿಮೆ
ಈ ವಿಮಾನ ಯಶಸ್ವಿಯಾದಲ್ಲಿ ಉಪಗ್ರಹ ಉಡಾವಣೆಯಲ್ಲಿ ಕಡಿಮೆ ಇಂಧನ ವ್ಯಯವಾಗಲಿದೆ. ಇದರಿಂದ ಸಹಜವಾಗಿಯೇ ಉಡಾವಣೆ ವೆಚ್ಚವೂ ಕಡಿಮೆಯಾಗಲಿದೆ.

ವಿಮಾನದ ವೈಶಿಷ್ಟ 
– 28 ಚಕ್ರಗಳು, 6 ಎಂಜಿನ್‌ಗಳು
– ಫ‌ುಟ್‌ಬಾಲ್‌ ಮೈದಾನಕ್ಕೂ ಹೆಚ್ಚು ಉದ್ದದ ರೆಕ್ಕೆ
– 2 ವಿಮಾನಗಳನ್ನು ಜೋಡಿಸಿದಂಥ ಮಾದರಿ
– ಒಮ್ಮೆಗೆ 3 ರಾಕೆಟ್‌ ಕಕ್ಷೆಗೆ ಸೇರಿಸುವ ಸಾಮರ್ಥ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next