Advertisement
2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ 387ನೇ ರ್‍ಯಾಂಕ್ ಪಡೆದು, ಬಳಿಕ 69ನೇ ಬ್ಯಾಚ್‌ನ ಐಆರ್‌ಸಿ ತರಬೇತಿಯಲ್ಲಿ ಅತ್ಯುತ್ತಮ ಸವ್ಯಸಾಚಿ ಸಾಧನೆಗಾಗಿ ಹಣಕಾಸು ಸಚಿವರ ಚಿನ್ನದ ಪದಕ ಪಡೆದ ಕೀರ್ತಿ ಮಿಚೆಲ್ ಕ್ವೀನಿ ಡಿ’ ಕೋಸ್ತಾ ಅವರದು. ಪ್ರೀತಿ ಭಟ್ ಅವರಿಗೆ ನೀಡಿದ ಸಂದರ್ಶನದಲ್ಲಿ ಪರೀಕ್ಷಾ ಸಿದ್ಧತೆ ಕುರಿತು ಹೇಳಿದ್ದಾರೆ. ಇವರು ಈಗ ಮುಂಬಯಿ ಜಿಎಸ್‌ಟಿ ವಿಭಾಗದ ಸಹಾಯಕ ಆಯುಕ್ತರು.ನಿಮ್ಮ ಪ್ರಕಾರ ಶಿಕ್ಷಣ ಅಂದರೆ ಏನು?
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಾಗ ಆದಷ್ಟು ಚಿಕ್ಕ ನೋಟ್ಸ್‌ಗಳನ್ನು ಮಾಡಿಕೊಳ್ಳಿ. ಇದು ನಿಮಗೆ ಮನನ ಮಾಡಲು ಸಹಾಯ ಮಾಡುತ್ತದೆ. ತುಂಬಾ ಹೊತ್ತು ಓದಿ ಬೋರ್ ಆದಲ್ಲಿ ವಿಷಯಗಳನ್ನು ಬದ ಲಿಸಿ ಅಥವಾ ಅದಕ್ಕೆ ಸಂಬಂಧಪಟ್ಟ ಸೈಟ್ಸ್, ವೆಬ್‌ಸೈಟ್‌ಗಳನ್ನು ನೋಡಿ ಇದರಿಂದ ಗಮನ ಬೇರೆ ಕಡೆ ಹೋಗದೇ, ಓದಿಗೆ ಸಂಬಂಧಪಟ್ಟ ಇನ್ನೊಂದು ಮೂಲ ದೊರಕಿದಂತಾಗುತ್ತದೆ. ಬಿಡುವು ಮಾಡಿಕೊಂಡು ಹಳೆಯ ಪ್ರಶ್ನೆ ಪತ್ರಿಕೆ ಬಿಡಿಸಿ. ಇದರಿಂದ ನಿಮ್ಮ ಪರೀಕ್ಷೆಗೆ ನೀವು ಅರ್ಧ ಸಿದ್ಧವಾಗಿರುತ್ತೀರಿ. ಆಗ ನಿರಂತರ ಓದಿದಾಗಲೂ ಬೋರ್ ಆಗುವುದಿಲ್ಲ.
Related Articles
ವರ್ಷದ ತಯಾರಿ ಅಗತ್ಯ. ವೇಳಾಪಟ್ಟಿಗೆ ಕಾಯದೆ ಮೊದಲಿನಿಂದಲೇ ಸಿದ್ಧತೆ ಮಾಡಿಕೊಳ್ಳಿ. ತುಂಬಾ ಹೊತ್ತು ಓದಲು ಸಾಧ್ಯವಾಗದಿದ್ದಲಿ ಬೀಡುವು ಮಾಡಿಕೊಂಡು ನಿಮ್ಮ ಆಸಕ್ತಿ ವಿಷಯದ ಕಡೆ ಗಮನ ವಹಿಸಿ. ಕೆಲವರಿಗೆ ಗೇಮ್ಸ್‌ಗಳಲ್ಲಿ ತುಂಬಾ ಆಸಕ್ತಿ , ಅಂಥವರು ಓದಿನ ಬಿಡುವಿನಲ್ಲಿ ಸ್ವಲ್ಪ ಸಮಯ ಆಟವಾಡಿ ಅಥವಾ ಒಂದು ಚಿಕ್ಕ ವಾಕ್ ಹೋಗಿ ಬರು ವುದರಿಂದ ಮನಸ್ಸು ಹಗುರವಾಗುತ್ತದೆ. ಆಗ ನಿಮಗೆ ಹೆಚ್ಚು ಹೆಚ್ಚು ಓದಲು ಮನಸ್ಸು ಸಿದ್ಧಗೊಳ್ಳುತ್ತದೆ.
Advertisement
ಪೋಷಕರ ಸಹಾಯ ಯಾವ ರೀತಿ ಅಗತ್ಯ?ಮೊದಲಿಗೆ ನೀವು ಏನು ಮಾಡಬೇಕೆಂದು ಬಯ ಸಿದ್ದೀರಿ ಎಂಬುದನ್ನು ಅರ್ಥವಾಗುವ ಹಾಗೆ ಹೇಳಿ. ನೀವು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ ಅಥವಾ ಈ ಪ್ರೋಸೆಸ್ ಮುಗಿಯಲು ನೀವು ಎಷ್ಟು ದಿನ ವ್ಯಯಿಸಬೇಕಾಗಬಹುದು ಎಂಬುದನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ. ಆಗ ಪೋಷಕರು ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ. ಪರೀಕ್ಷಾರ್ಥಿಗಳಿಗೆ ನಿಮ್ಮ ಸಲಹೆ?
ಆಸಕ್ತಿ ವಿಷಯಗಳನ್ನು ಮಾತ್ರ ಆಯ್ದುಕೊಳ್ಳಿ. 2 ಆಯ್ಕೆಗಳು ಒಳ್ಳೆಯದಲ್ಲ. ಅಧ್ಯಯನ ಆರಂಭಿಸಿದ ಬಳಿಕ ಮಾಡುತ್ತೇನೆ ಎಂಬ ಛಲವಿರಲಿ. ಅದಲ್ಲದೆ ಯಾವಾಗಲೂ ಬದುಕಿನಲ್ಲಿ ಗೆಲ್ಲುತ್ತೇವೆ ಎನ್ನುವ ಹಂಬಲ ವಿರಲಿ ಆದರೆ ಸೋತರೆ ಪ್ರಯತ್ನ ಬಿಡಬಾರದು. ಎಷ್ಟರ ಮಟ್ಟಿಗೆ ಆಗುತ್ತದೆಯೋ ಅಷ್ಟರ ಮಟ್ಟಿಗೆ ನಿಮ್ಮ ಪ್ರಯತ್ನವಿರಲಿ. ಸೋಲು ಅಥವಾ ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಿ. ಪರಿಚಯ
ಮಿಚೆಲ್ ಕ್ವೀನಿ ಡಿ’ ಕೋಸ್ತಾ ಅವರು ಮಂಗಳೂರು ತಾಲೂಕಿನ ನೀರುಡೆ ಎಂಬ ಹಳ್ಳಿಯ ನಿಡ್ಡೋಡಿ ಮೂಲದವರಾದ ಇವರು ನೀರುಡೆಯಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ತಮ್ಮ ಎಂಜಿನಿಯರಿಂಗ್ ಪದವಿ ಮುಗಿಸಿದವರು. ಪಬ್ಲಿಕ್ ಅಡ್‌ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು 2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ 387ನೇ ರ್‍ಯಾಂಕ್ ಪಡೆದರು. ಅನಂತರ 69ನೇ ಬ್ಯಾಚ್‌ನ ಐಆರ್‌ಸಿ ತರಬೇತಿಯಲ್ಲಿ ಅತ್ಯುತ್ತಮ ಸವ್ಯಸಾಚಿ ಸಾಧನೆಗಾಗಿ ಹಣಕಾಸು ಸಚಿವರ ಚಿನ್ನದ ಪದಕ ಪಡೆದುಕೊಂಡಿದ್ದಾರೆ.