Advertisement

ಪ್ರಿಯಕರನ ಜತೆ ಹೋಟೆಲ್ ರೂಂನಲ್ಲಿ ಪತ್ನಿ: ದಿಢೀರ್ ಬಂದ ಪತಿ… ಮುಂದೇನಾಯ್ತು!

10:11 PM Sep 11, 2020 | Nagendra Trasi |

ಲಕ್ನೋ: ಪತ್ನಿ ಪ್ರಿಯಕರನ ಜತೆ ಹೋಟೆಲ್ ರೂಂವೊಂದರಲ್ಲಿ ಇದ್ದಾಗಲೇ ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಪತ್ನಿಯನ್ನು ನೋಡಿದ ಪತಿ ತಕ್ಷಣವೇ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಹೊಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.

Advertisement

ಆಗ್ರಾದ ಥಾನಾ ತಾಜ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ವೊಂದರಲ್ಲಿ ಈ ಘಟನೆ ನಡೆದಿದೆ. ಪತ್ನಿಯ ಕಳ್ಳಾಟದ ಸುಳಿವು ಸಿಕ್ಕಿದ್ದ ಪತಿ ನೇರವಾಗಿ ಹೋಟೆಲ್ ಕೋಣೆಗೆ ಬಂದಾಗ ಪತ್ನಿ ದಿಕ್ಕು ತೋಚದೆ ನಿಂತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪತ್ನಿ ಬೆಡ್ ಮೇಲೆ ಕುಳಿತಿರುವುದನ್ನು ಗಮನಿಸಿದ ಪತಿ ಚಪ್ಪಲಿಯಿಂದ ಹೊಡೆದಿದ್ದಾನೆ. ಈ ವೇಳೆ ಪ್ರಿಯಕರ ಕೋಣೆಯಿಂದ ಪರಾರಿಯಾಗಿದ್ದ. ಪತ್ನಿಯೂ ಕೂಡಾ ಪತಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದು ವಿಡಿಯೋದಲ್ಲಿದೆ.

ಪತಿ ತನ್ನೊಂದಿಗೆ ಪರಿಚಿತ ವ್ಯಕ್ತಿಯನ್ನು ಕರೆತಂದಿದ್ದು, ಆತ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ. ಈ ಪ್ರಕರಣದ ಬಗ್ಗೆ ಯಾವುದೇ ದೂರು ಬಾರದ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರಾದಲ್ಲಿ ಪ್ರವಾಸೋದ್ಯಮ ಬಹಳ ಕಾಲದಿಂದ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದಾಗಿ ಬಹುತೇಕ ಹೋಟೆಲ್ ಮಾಲೀಕರು ವೇಶ್ಯಾವಾಟಿಕೆಗೆ ಹೋಟೆಲ್ ರೂಂಗಳನ್ನು ನೀಡುತ್ತಿದ್ದಾರೆ. ಒಂದು ವೇಳೆ ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಂದಾದರು ಕೂಡಾ ಮಾಲೀಕರ ಹೆಸರು ಬದಲಾಗಿರುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next