Advertisement

ದೋಟಿಹಾಳ: ಬೆಂಕಿಯಿಂದ ಬಾಣಲೆಗೆ ಬಿದ್ದ ಕುಟುಂಬ; ಸಂತ್ರಸ್ತರ ಅಳಲು

04:43 PM May 13, 2024 | Team Udayavani |

ಉದಯವಾಣಿ ಸಮಾಚಾರ
ದೋಟಿಹಾಳ: 2018ರಲ್ಲಿ ಕುಷ್ಟಗಿ-ಕ್ಯಾದಿಗುಪ್ಪಾ 5 ಮಿ. ಮೀ ರಸ್ತೆಯನ್ನು 7ಮಿ ಮೀ ರಸ್ತೆಯನ್ನಾಗಿ ಅಗಲೀಕರಣ ಮಾಡಲು ಆದೇಶ ನೀಡಲಾಗಿತ್ತು. ಈ ವೇಳೆ ರಸ್ತೆ ಪಕ್ಕದ ಮನೆಗಳ ಮಾಲೀಕರಿಗೆ ದೋಟಿಹಾಳ ಗ್ರಾಪಂನವರು ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡಬೇಕೆಂದರು. ಸರ್ವ ಸದಸ್ಯರು, ಗ್ರಾಮದ ಮುಖಂಡರು ರಸ್ತೆ ಅಗಲೀಕರಣ ವೇಳೆ ಮನೆ ಕಳೆದುಕೊಂಡವರಿಗೆ ಗ್ರಾಪಂನಿಂದ ನಿವೇಶನ ನೀಡುವುದಾಗಿಯೂ ಬಾಂಡ್‌ಗಳಲ್ಲಿ ಬರೆದು ಕೊಟ್ಟರು. ಆದರೆ ಆದೇಶ ಮಾಡಿ ಆರು ವರ್ಷ ಕಳೆದರೂ ರಸ್ತೆ ಅಗಲೀಕರಣವೂ ಆಗಲಿಲ್ಲ..ಮನೆ ಕಳೆದುಕೊಂಡವರಿಗೆ ನಿವೇಶನವೂ ಸಿಗಲಿಲ್ಲ..ಮನೆ ಕಳೆದುಕೊಂಡವರು ತಗಡಿನ ಮನೆಯಲ್ಲೇ ಇಂದಿಗೂ ಜೀವ ಸವೆಸುತ್ತಿದ್ದಾರೆ.

Advertisement

ಹೌದು. ಸಂಶುದ್ದೀನ್‌ ಕಾಲೇಗಾರ ಎಂಬುವರು ರಸ್ತೆ ಅಗಲೀಕರಣಕ್ಕಾಗಿ ಮನೆ ಕಳೆದುಕೊಂಡಿದ್ದಾರೆ. ಹೀಗಾಗಿ ಕಳೆದ 6-7 ವರ್ಷಗಳಿಂದ ತಗಡಿನ ಮನೆಯಲ್ಲೇ ಜೀವನ ನಡೆಸುತ್ತಿದ್ದಾರೆ.ತಗಡಿನ ಮನೆಯಲ್ಲಿ ಉರಿ ಝಳದಲ್ಲಿ ಜೀವನ ಸಾಗಿಸುತ್ತಿರುವ ಈ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಈ ರಸ್ತೆ ನಿಯಮದ ಪ್ರಕಾರ ರಸ್ತೆ ಅಗಲೀ ಕರಣವಾಗಲಿಲ್ಲ. ಕೆಲವರು ರಸ್ತೆ
ಅಗಲೀಕರಣದ ನೆಪದಲ್ಲಿ ಮನೆಗಳ ಗೋಡೆಗಳನ್ನು ಕೆಡವಿದ್ದರಿಂದ ಬೀದಿಗೆ ಬರು ವಂತಾಗಿದೆ. ರಸ್ತೆ ಅಗಲೀಕರಣವಾಗಿಲ್ಲ. ಇಂದಿಗೂ ಈ ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗುತ್ತಿದ್ದು, ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ದಿಟ್ಟ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಮೂಕಪೇಕ್ಷಕರಾಗಿದ್ದಾರೆ.

ನಾನು ಈ ತಾಲೂಕಿಗೆ ಬಂದು 6-7 ತಿಂಗಳಾಯಿತು. ಇದರ ಬಗ್ಗೆ ಮಾಹಿತಿ ಇಲ್ಲ. ನಮ್ಮ ಸಿಬ್ಬಂದಿ ಜತೆ ಚರ್ಚೆ ಮಾಡಿ ಇದಕ್ಕೊಂದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
*ರಾಜಶೇಖರಗೌಡ ಪಾಟೀಲ್‌,
ಲೋಕೋಪಯೋಗಿ ಇಲಾಖೆ ಅಧಿಕಾರಿ, ಕುಷ್ಟಗಿ

ರಸ್ತೆ ಅಗಲೀಕರಣ ಮಾಡುತ್ತೇವೆ ಎಂದು ಹೇಳಿ ನಮ್ಮ ಮನೆಯ ಗೋಡೆ ಕೆಡವಿದರು. ಈ ವೇಳೆ ಗ್ರಾಪಂನಿಂದ ಮನೆ ಕಳೆದುಕೊಂಡವರಿಗೆ ನಿವೇಶನ ನೀಡುತ್ತೇವೆ ಎಂದು ಬಾಂಡ್‌ ಬರೆದುಕೊಟ್ಟರು. ಆದರೆ ಇದುವರೆಗೂ ನಮಗೆ ನಿವೇಶನ ನೀಡಿಲ್ಲ. ಇಂತಹ ಉರಿ ಬಿಸಿಲಿನ ಝಳದಲ್ಲಿ ಜೀವನ ನಡೆಸುತ್ತಿದ್ದೇವೆ.
*ಸಂಶುದ್ದೀನ್‌ ಕಾಲೇಗಾರ
ಮನೆ ಕಳೆದುಕೊಂಡ ಸಂತ್ರಸ

ರಸ್ತೆ ಅಗಲೀಕರಣ ವೇಳೆ ಮನೆ ಕಳೆದು ಕೊಂಡ ಸಂಶುದ್ದೀನ್‌ ಕಾಲೆಗಾರ ಅವರಿಗೆ ಆಶ್ರಯ ಯೋಜನೆ ಮನೆ ಮಂಜೂರು ಮಾಡಿದ್ದೇವೆ.

Advertisement

ಮುತ್ತಣ್ಣ ಛಲವಾದಿ
ಗ್ರಾಪಂ ಪಿಡಿಒ ದೋಟಿಹಾಳ

■ ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next