Advertisement

ಜಿಲ್ಲೆ ಸಂಪೂರ್ಣ ಬಂದ್‌; ಇಂದು ದಿನಸಿ ಅಂಗಡಿ ವ್ಯವಹಾರಕ್ಕೆ ಅವಕಾಶ

12:22 AM Mar 31, 2020 | Sriram |

ಮಂಗಳೂರು/ಮಣಿಪಾಲ: ಸಂಪೂರ್ಣ ಲಾಕ್‌ಡೌನ್‌ ಆದೇಶಕ್ಕೆ ಸ್ಪಂದಿಸಿ 3ನೇ ದಿನವಾದ ಸೋಮವಾರವೂ ಜಿಲ್ಲೆಯಾದ್ಯಂತ ಬಂದ್‌ ವಾತಾವರಣವಿತ್ತು. ಅಂಗಡಿ ಮುಂಗಟ್ಟುಗಳು ಸ್ಥಗಿತಗೊಂಡಿದ್ದು, ವಾಹನ ಸಂಚಾರ ಅತ್ಯಂತ ವಿರಳವಾಗಿತ್ತು. ಜನರು ಮನೆಯೊಳಗೆ ಇದ್ದು, ಕೋವಿಡ್‌ 19 ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದರು.
ಮಂಗಳೂರು ನಗರದಲ್ಲಿ ಜನ ಮತ್ತು ವಾಹನ ಸಂಚಾರ ವಿರಳವಾಗಿತ್ತು. ಜನರು ಸಂಪೂರ್ಣ ಬಂದ್‌ಗೆ ಹೊಂದಿಕೊಂಡಿದ್ದು, ಮನೆಗಳಲ್ಲೇ ಉಳಿದರು. ಬಿ.ಸಿ. ರೋಡ್‌, ಪುತ್ತೂರು, ಸುಳ್ಯ ಪೇಟೆಗಳಲ್ಲಿಯೂ ಬಂದ್‌ಗೆ ಉತ್ತಮ ಸ್ಪಂದನೆ ದೊರೆತಿದೆ. ಬೆಳ್ತಂಗಡಿಯಲ್ಲಿ ಮಾತ್ರ ಸಂತೆ ಮಾರು ಕಟ್ಟೆಯಲ್ಲಿ ವ್ಯಾಪಾರಿಗಳು ಅಂಗಡಿ ತೆರೆದು ವ್ಯಾಪಾರ ಆರಂಭಿಸಿದರೂ ತಹಶೀಲ್ದಾರ್‌ ಅವರ ಸಕಾಲಿಕ ಕ್ರಮದ ಬಳಿಕ
ಸ್ಥಗಿತಗೊಂಡಿತು.

Advertisement

ಜಿಲ್ಲೆಯ ಗ್ರಾಮಾಂತರ ಭಾಗ ಸಂಪೂರ್ಣ ಬಂದ್‌ಗೆ ಸಹಕರಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಬಿ.ಸಿ. ರೋಡ್‌, ಪುತ್ತೂರುಗಳಲ್ಲಿ ಇಲಾಖಾಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು. ಹಲವು ಕಡೆಗಳಲ್ಲಿ ಆರೋಗ್ಯ ಇಲಾಖೆಯ ಮೂಲಕ ಅಗಿ °ಶಾಮಕ ದಳದವರು ವೈರಾಣು ನಿವಾರಕ ಔಷಧ ಸಿಂಪಡಣೆ ನಡೆಸಿದರು.

ವಾಹನಗಳು ಜಪ್ತಿ
ಮಂಗಳೂರು ಸಿಟಿ ಪೊಲೀಸ್‌ ವ್ಯಾಪ್ತಿಯಲ್ಲಿ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಸೋಮವಾರದಿಂದ ಪೊಲೀಸರು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅನಗತ್ಯವಾಗಿ ರಸ್ತೆಗೆ ಇಳಿದ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ.
ಪೊಲೀಸ್‌ ಆಯುಕ್ತ ಡಾ| ಹರ್ಷ ಅವರ ಸೂಚನೆಯಂತೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈ ವಿಷಯ ತಿಳಿದ ಬಹುತೇಕ ವಾಹನದವರು ನಗರ ಸುತ್ತಾಟಕ್ಕೆ ಬ್ರೇಕ್‌ ಹಾಕಿದ್ದಾರೆ.

ಇಂದು ಅವಶ್ಯ ವಸ್ತು ಖರೀದಿಗೆ ಅವಕಾಶ
ಮಾ. 31ರಂದು ಬೆಳಗ್ಗೆ 6ರಿಂದ ಅಪರಾಹ್ನ 3ರ ವರೆಗೆ ದಿನಸಿ ಅಂಗಡಿಗಳು ತೆರೆಯಲಿದ್ದು, ಅವಶ್ಯ ವಸ್ತು ಖರೀದಿಗೆ ಅವಕಾಶವಿದೆ. ಆದರೆ ಆಹಾರ ಸಾಮಗ್ರಿ  ಖರೀದಿಸಲು ಒಂದು ಮನೆಯಿಂದ ಕುಟುಂಬದ ಒಬ್ಬ ಸದಸ್ಯ ಮಾತ್ರ ಅಂಗಡಿಗೆ ತೆರಳಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಡಳಿತ ಈಗಾಗಲೇ ಎಚ್ಚರಿಸಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಎಚ್ಚರಿಕೆ
ಯಾವುದೇ ದಿನಸಿ, ತರಕಾರಿ ಅಂಗಡಿಯವರು ನಿಗದಿತ ದರಕ್ಕಿಂತ ಹೆಚ್ಚು ದರಕ್ಕೆ  ವಸ್ತುಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ಆ ಬಗ್ಗೆ ದೂರು ಬಂದಲ್ಲಿ ಅಂಗಡಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

Advertisement

ನಿರಾಶ್ರಿತರಿಗೆ ಸರಕಾರದಿಂದಲೇ ಆಹಾರ ಪೂರೈಕೆ
ಭಿಕ್ಷುಕರು, ಅನಾಥರು, ನಿರಾಶ್ರಿತರು ಮತ್ತು ದೂರದ ಪ್ರದೇಶದಿಂದ ಬಂದು ನೆಲೆಸಿರುವವರಿಗೆ “ಎ’ ದರ್ಜೆಯ ದೇವಸ್ಥಾನ ಮತ್ತು ಇಂದಿರಾ ಕ್ಯಾಂಟೀನ್‌ ಮೂಲಕ ಸರಕಾರವೇ ಆಹಾರ ವಿತರಣೆ ಆರಂಭಿಸಿದೆ. ನಗರದ  ನೆಹರೂ ಮೈದಾನ ಸುತ್ತಮುತ್ತ ಇದ್ದ ಸುಮಾರು  1,500ಕ್ಕೂ ಅಧಿಕ ನಿರಾಶ್ರಿತರಿಗೆ ಪುರಭವನದ ಮಿನಿ ಹಾಲ್‌, ನಂತೂರು, ಅಶೋಕನಗರ ಮತ್ತು ಉರ್ವದ ವಿದ್ಯಾರ್ಥಿನಿಲಯಗಳಲ್ಲಿ ಆಶ್ರ ಯ ಕಲ್ಪಿಸಲಾಗಿದೆ. ಅವರಿಗೆ ಅಲ್ಲೇ ಅಹಾರ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ಹಾಲು ಖರೀದಿ ಆರಂಭ
ಜಿಲ್ಲೆಯಲ್ಲಿ ಹಾಲು ಉತ್ಪಾದಕರಿಂದ ಹಾಲು ಖರೀದಿ ಸೋಮವಾರ ಸಂಜೆಯಿಂದಲೇ ಆರಂಭವಾಗಿದೆ. ಮಂಗಳವಾರದಿಂದ ನಿತ್ಯ ಹಾಲು ಖರೀದಿ ಮುಂದುವರಿಯಲಿದ್ದು, ಹಾಲು ಮಾರಾಟ ಕೂಡ ಇರಲಿದೆ.

ಹಾಲು, ದಿನಪತ್ರಿಕೆ ನಿರಾತಂಕ
ಸೋಮವಾರ ಬೆಳಗ್ಗೆಯೂ ಹಾಲು ಮಾರಾಟ ಎಂದಿನಂತೆ ನಡೆಯಿತು. ಮುಂಜಾನೆ ಯಿಂದ ನಗರದ ಹಾಲು ಮಾರಾಟ ಕೇಂದ್ರಗಳಿಗೆ ಆಗಮಿಸಿದ ಗ್ರಾಹ ಕರು ಖರೀದಿ ನಡೆಸಿದರು. ಬಹುತೇಕ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅನು ಷ್ಠಾನಗೊಂಡಿತ್ತಾದರೂ ಕೆಲವೆಡೆ ಅನುಸರಣೆಯಾಗಿಲ್ಲ. ದಿನಪತ್ರಿಕೆ ಸಾಗಾಟ, ವಿತರಣೆ ಎಂದಿನಂತೆ ನಡೆಯುತ್ತಿದ್ದು, ಔಷಧ ಅಂಗಡಿಗಳು ತೆರೆದಿದ್ದವು. ಪೆಟ್ರೋಲ್‌ ಬಂಕ್‌ಗಳು ಕಾರ್ಯನಿರ್ವಹಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next