Advertisement
ಬಂಟ್ವಾಳ-ಮೂಡುಬಿದಿರೆ ರಾಜ್ಯ ರಸ್ತೆಯ ಬಂಡಸಾಲೆ-ಸೊರ್ನಾಡು ನಡುವೆ ಎರಡು ರಸ್ತೆ ತಿರುವುಗಳಿದ್ದು ಅವುಗಳ ಆರಂಭದಲ್ಲಿ ಎರಡೂ ಕಡೆಯಿಂದ ರಸ್ತೆ ತಿರುವಿನ ಎಚ್ಚರಿಕೆ ಚಿಹ್ನೆಯ ಸೂಚನ ಫಲಕಗಳನ್ನು ಅಳವಡಿಸಲಾಗಿದೆ. ಆದರೆ ರಸ್ತೆ ಪಕ್ಕದಲ್ಲಿರುವ ರಬ್ಬರ್ ತೋಟದ ಮಾಲಕರು ಕಳೆ ಬೆಳೆ ತಡೆಯಲು ಬೆಳೆಸಿರುವ ಈ ಬಳ್ಳಿ ರಸ್ತೆ ಬದಿಯುದ್ದಕ್ಕೂ ಹರಡಿ ಸೂಚನಫಲಕದ ಕಂಬದ ಮೇಲೇರಿ ಸೂಚನ ಫಲಕವನ್ನು ಮರೆ ಮಾಡಿದೆ.
ಇಷ್ಟೇ ರಬ್ಬರ್ ತೋಟದಲ್ಲಿ ಬೆಳೆಸಿದ ಕಳೆ ನಾಶಕ ಬಳ್ಳಿಗಳು ಎಲ್ಲೆಡೆಯೂ ಹಬ್ಬಿ ಈ ಫಲಕಗಳನ್ನು ಆವರಿಸಿದೆ. ಜತೆಗೆ ಬಳ್ಳಿಗಳು
ರಸ್ತೆ ಬದಿಯಲ್ಲಿ ಆವರಿಸಿ ಪಾದಚಾರಿಗಳಿಗೆ ನಡೆದಾಡಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸವುದರಿಂದ ವಾಹನಗಳು ಸರಾಗವಾಗಿ ಸಾಗಲು ಅನನುಕೂಲವಾಗುತ್ತಿದೆ. ಜಿಲ್ಲಾ ರಸ್ತೆ, ಗ್ರಾಮೀಣ ರಸ್ತೆ ಬದಿ ರಬ್ಬರ್ ತೋಟ ಇರುವ ಕಡೆ ಸಂಚರಿಸುವಾಗ ಕಂಡುಬರುವ ಈ ಬಳ್ಳಿ ಸಸ್ಯ ಜೀವ ವೈವಿಧ್ಯಗಳಿಗೂ ಅಪಾಯಕಾರಿಯಾಗಿದೆ. ರಬ್ಬರ್ ಬೆಳೆಯುವಾಗ ಮೊದಲ ಮೂರು ನಾಲ್ಕು ವರ್ಷ ಮಣ್ಣು ಸವಕಳಿ ತಡೆಗೆ ಅಗತ್ಯವೆಂದು ಬೆಳೆಸಿದ ಈ ಬಳ್ಳಿ ಮರ ಬೆಳೆದ ಅನಂತರ ತೋಟದಿಂದ ಹೊರಬಂದು ಇಡೀ ಸಸ್ಯವರ್ಗಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಈ ಬಳ್ಳಿ ಇರುವಲ್ಲಿ ಅದರದ್ದೇ ಸರ್ವಾಧಿಕಾರ.
Related Articles
ಪರಿಗಣಿಸಬೇಕಾಗಿದೆ.
Advertisement
ರಸ್ತೆ ಬದಿ ಇರುವ ಪೊದೆ, ಗಿಡಗಂಟಿಗಳು, ಮರದ ಗೆಲ್ಲುಗಳನ್ನು ಯಾವಾಗಲಾದರೂ ಒಮ್ಮೆ ಕಡಿದು ಸ್ವಚ್ಛಗೊಳಿಸಲಾಗುತ್ತದೆ.ಆದರೆ ಈ ಬಳ್ಳಿಗಳನ್ನು ಕಡಿದು ವಾಹನ ಸಂಚಾರವನ್ನು ಸುಗಮಗೊಳಿಸುವ ಗೋಜಿಗೆ ಹೋಗುವುದಿಲ್ಲ. ಆದುದರಿಂದ ತಿರುವುಗಳಲ್ಲಿ ಎದುರುಗಡೆಯಿಂದ ಬರುವ ವಾಹನಗಳು ಸರಿಯಾಗಿ ಕಾಣದೆ ಅಪಘಾತವಾಗುವ ಸಂಭವನೀಯತೆ ಇದೆ. ರಸ್ತೆ ಬದಿಯ ಗಿಡಗಂಟಿಗಳನ್ನು ಕಡಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವಲ್ಲಿ ಸಂಬಂಧಿಸಿದ ಇಲಾಖೆ
ಗಮನಕೊಡಬೇಕಾಗಿದೆ. ಹಾವು ಬದುಕುವುದೇ ಇಲ್ಲ ಎಂದರೆ…
ರಬ್ಬರ್ ತೋಟ ಮಾಡಿದವರಲ್ಲಿ ಈ ಜಾತಿಯ ಬಳ್ಳಿ ಇರುವಾಗ ಅದರಲ್ಲಿ ಟ್ಯಾಪಿಂಗ್ ಗಾಗಿ ನಸುಕಿನಲ್ಲಿ ಓಡಾಡುವಾಗ ಹಾವು ಸಿಗಲಾರದೇ ಎಂದರೆ ಇಲ್ಲಿ ಹಾವು ಬದುಕುವುದೇ ಇಲ್ಲ ಎನ್ನುತ್ತಾರೆ!. ಸಸ್ಯ, ಹಾವು, ಪ್ರಾಣಿ,ಪಕ್ಷಿ ಮುಂತಾದ ಜೀವ
ವೈವಿಧ್ಯಗಳ ಬದುಕಿಗೆ ಸಂಚಕಾರವಾದ ಜತೆಗೆ ನೈರ್ಮಲ್ಯಕ್ಕೂ ತೊಂದರೆಯಾದ ಈ ಬಳ್ಳಿಯನ್ನು ಸಾರ್ವಜನಿಕ ಭೂಮಿಯಲ್ಲಿ ಬೆಳೆಯಲು ಬಿಡುವುದು ತಪ್ಪು ಎಂದೂ ಹಲವರು ಹೇಳುತ್ತಿದ್ದಾರೆ.