Advertisement

ವಿದ್ಯುತ್‌ ಬಿಲ್‌ ಕಡಿತಕ್ಕೆ ಇದೆ ದಾರಿ

01:34 AM Aug 03, 2019 | Team Udayavani |

ಇತ್ತೀಚೆಗೆ ರಾಜ್ಯದಲ್ಲಿ ವಿದ್ಯುತ್‌ ಬೆಲೆ ಹೆಚ್ಚಿಸಲಾಗಿದೆ. ಹೀಗಾಗಿ ಮನೆಯ ವಿದ್ಯುತ್‌ ಖರ್ಚನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಅಗತ್ಯ. ಮಾತ್ರವಲ್ಲ ದಿನೇ ದಿನೇ ವಿದ್ಯುತ್‌ ಬೇಡಿಕೆ ಹೆಚ್ಚುತ್ತಿರುವುದರಿಂದ ನಾವು ಕೂಡಾ ಒಂದಷ್ಟು ಉಳಿತಾಯ ಮಾಡುವತ್ತ ಗಮನಹರಿಸುವುದು ಉತ್ತಮ. ‘ಒಂದು ಯೂನಿಟ್ ವಿದ್ಯುತ್‌ ಉಳಿತಾಯ ಎರಡು ಯೂನಿಟ್ ಉತ್ಪಾದನೆಗೆ ಸಮ’ ಎನ್ನುವ ಮಾತಿದೆ. ನಾವು ಮನಸ್ಸು ಮಾಡಿದರೆ ಈ ಕೆಲಸ ಕಷ್ಟವೇನಲ್ಲ. ಅದಕ್ಕಾಗಿ ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು.

Advertisement

ಸೋಲಾರ್‌: ವಿದ್ಯುತ್‌ ಖರ್ಚನ್ನು ಉಳಿಸುವ ಅತ್ಯುತ್ತಮ ಮಾರ್ಗ ಎಂದರೆ ಮನೆಗೆ ಸೋಲಾರ್‌ ಅಳವಡಿಸುವುದು. ಆರಂಭದಲ್ಲಿ ಅಳವಡಿಕೆ ಖರ್ಚು ಬಿಟ್ಟರೆ ಮತ್ತೆ ಹೆಚ್ಚಿನ ವೆಚ್ಚ ಮಾಡಬೇಕಾಗಿಲ್ಲ ಎನ್ನುವುದೇ ಇದರ ದೊಡ್ಡ ವಿಶೇಷತೆ. ಸಾಮಾನ್ಯವಾಗಿ ವರ್ಷದ 300 ದಿನವೂ ಸೂರ್ಯಪ್ರಕಾಶ ಲಭ್ಯವಿರುತ್ತದೆ. ಹೀಗಾಗಿ ಬೆಳಕಿನ ಮೂಲದ ಬಗ್ಗೆ ಚಿಂತೆ ಇಲ್ಲ. ಸೋಲಾರ್‌ ಪ್ಯಾನಲ್ಗಳು ಬೆಳಕನ್ನು ಚೈತನ್ಯವಾಗಿ ಪರಿವರ್ತಿಸಿ ನಮಗೆ ಒದಗಿಸುತ್ತವೆ. ಮನೆಯ ಛಾವಣಿಗೆ ಸೋಲಾರ್‌ ಪ್ಯಾನಲ್ ಅಳವಡಿಸಿದರೆ ಸಾಕು. ಇನ್ನೊಂದು ವಿಶೇಷತೆ ಎಂದರೆ ಪ್ಯಾನಲ್ ಅಳವಡಿಸಲು ಆಗಬಹುದಾದ ಖರ್ಚನ್ನು ವಿದ್ಯುತ್‌ ಬಿಲ್ನಿಂದ ಉಳಿತಾಯ ಮಾಡಿ ಕೆಲವೇ ವರ್ಷಗಳಲ್ಲಿ ಸರಿದೂಗಿಸಬಹುದು ಎನ್ನುತ್ತಾರೆ ತಜ್ಞರು. 1ಕೆಡಬ್ಲ್ಯುಪಿ ಸೋಲಾರ್‌ ಪ್ಯಾನಲ್ ಪ್ರತಿದಿನ ಸರಾಸರಿ 4.5 ಕೆಡಬ್ಲ್ಯುಎಚ್‌ನಷ್ಟು ವಿದ್ಯುತ್‌ ಉತ್ಪಾದಿಸಬಲ್ಲದು(ದಿನದಲ್ಲಿ 5.5 ಗಂಟೆ ಬೆಳಕು ಇದ್ದರೆ). ಹೀಗಾಗಿ ಸೋಲಾರ್‌ ಅಳವಡಿಕೆಯತ್ತ ನಿಮ್ಮ ಚಿತ್ತ ಹರಿಸಬಹುದು.

•ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next