Advertisement

ಮತ ಕೇಳಿದ ಜಲಮಂಡಳಿಸಿಬ್ಬಂದಿಗೆ ಅಮಾನತು ಶಿಕ್ಷೆ

11:52 AM Apr 19, 2018 | |

ಯಲಹಂಕ: ಕ್ಷೇತ್ರದಲ್ಲಿ ಪಕ್ಷವೊಂದರ ಚುನಾವಣಾ ಪ್ರಚಾರ ವಾಹನ ಏರಿ ಮತ ಯಾಚನೆಗೆ ಸಾಥ್‌ ನೀಡಿದ ಜಲಮಂಡಳಿ
ಸಿಬ್ಬಂದಿಯನ್ನು ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಅಮಾನತು ಮಾಡಲಾಗಿದೆ. ಬಾಗಲಗುಂಟೆಯ ಜಲಮಂಡಳಿ ಉಪ ವಿಭಾಗದಲ್ಲಿ ಫಿಟ್ಟರ್‌ ಆಗಿರುವ ಎನ್‌.ಮಲ್ಲಯ್ಯ ಅಮಾನತುಗೊಂಡ ಸಿಬ್ಬಂದಿ. ಯಲಹಂಕ ವಿಧಾನಸಭಾ ಕ್ಷೇತ್ರದ ಹೆಸರಘಟ್ಟ ಹೋಬಳಿಯ ತರಬನಹಳ್ಳಿಯಲ್ಲಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಬುಧವಾರ ತೆರೆದ ವಾಹನದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಎನ್‌. ಮಲ್ಲಯ್ಯ ಶಾಸಕರಿದ್ದ ವಾಹನ ಏರಿ ತಾವೂ ಪ್ರಚಾರ ನಡೆಸಿದ್ದಾರೆ. ಕರ್ತವ್ಯದ ಸಮಯದಲ್ಲಿ ರಾಜಕೀಯ ಪಕ್ಷವೊಂದರ ಪರ ಪ್ರಚಾರ ಮಾಡುವ ಮೂಲಕ ಮಲ್ಲಯ್ಯ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಚಿತ್ರ ಸಹಿತ ದೂರು ಬಂದಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಮಲ್ಲಯ್ಯನನ್ನು ಅಮಾನತು ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

Advertisement

ತನ್ನ ವಿರುದ್ಧದ ದೂರಿಗೆ ಸಮಜಾಯಿಷಿ ನೀಡಿರುವ ಮಲ್ಲಯ್ಯ, “ತರಬನಹಳ್ಳಿಗೆ ನೀರು ಸರಿಯಾಗಿ ಬಿಡುತ್ತಿಲ್ಲವಂತೆ ಎಂದು ಕೇಳುತ್ತಾ ಶಾಸಕರೇ ನನ್ನನ್ನು ವಾಹನಕ್ಕೆ ಹತ್ತಿಸಿಕೊಂಡರು. ತರಬನಹಳ್ಳಿಗೆ ನೀರು ಬಿಡುವ ಕೆಲಸ ನಾನ್ನದಲ್ಲ ಎಂದು ಹೇಳಿ ನಾನು ವಾಹನದಿಂದ ಇಳಿದೆ ಎಂದು ತಿಳಿಸಿದ್ದಾನೆ. ಆದರೆ ಈ ಸಮಜಾಯಿಷಿ ಒಪ್ಪದ ಚುನಾವಣಾಧಿಕಾರಿಗಳು ಶಿಸ್ತು ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next