Advertisement
ಕುವೆಟ್ಟು ಗ್ರಾ.ಪಂ.ನ ಗುರುವಾಯನಕೆರೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಫಿಲ್ಟರ್ 2012ರಲ್ಲಿ ಅಳವಡಿಸಲಾಗಿತ್ತು. ಅನಂತರದ ದಿನಗಳಲ್ಲಿ ಗ್ರಾ.ಪಂ. ವತಿಯಿಂದ ನೀರು ನೀಡಲಾಗುತ್ತಿದ್ದರೂ ನಿರ್ವಹಣೆ ನಿರ್ಲಕ್ಷಿಸಿದ್ದರಿಂದ ನೀರು ಕಟ್ಟಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಬೇಸಿನ್‌ನಿಂದ ಹುಳಗಳು ಹೊರಬರುತ್ತಿದ್ದು, ಗಬ್ಬು ವಾಸನೆಯಿಂದ ಹತ್ತಿರ ನಿಲ್ಲದಂತ ಪರಿಸ್ಥಿತಿಯಿದೆ. ಬಸ್ ನಿಲ್ದಾಣದಲ್ಲಿ ಸೊಳ್ಳೆ ಕಾಟದಿಂದ ರೋಗ ಭೀತಿ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗಡಿ ಮುಂಗಟ್ಟು ಮುಂಭಾಗ ರಸ್ತೆ ಬದಿ ತೆರೆದ ಚರಂಡಿಗಳಿಂದಾಗಿ ತ್ಯಾಜ್ಯ ಸೇರಿಕೊಂಡು ಚರಂಡಿ ಕಟ್ಟಿ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಈಗಾಗಲೇ ಸಂಬಂಧಪಟ್ಟ ಇಲಾಖೆಯಿಂದ ಚರಂಡಿ ದುರಸ್ತಿಪಡಿಸಿದ್ದರೂ ಕೆಲವು ಅಂಗಡಿ ಮುಂಗಟ್ಟು ನವರ ನಿರ್ಲಕ್ಷ್ಯದಿಂದ ಅಂಗಡಿ ಮುಂಭಾಗದ ಕಸ ತೆರವುಗೊಳಿಸದಿರುವುದರಿಂದ ಸಮಸ್ಯೆ ತೀವ್ರವಾಗಿದೆ. ಪ್ರತಿ ಅಂಗಡಿ ಮುಂಭಾಗ ಕಸದ ಬುಟ್ಟಿ ಅಳವಡಿಸಿದಲ್ಲಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಲಿದೆ. ಸ್ವತ್ಛತೆ ಯೆಡೆಗೆ ಸಾರ್ವಜನಿಕರೂ ಮಹತ್ವ ನೀಡಬೇಕಿದೆ.
Related Articles
ಪೇಟೆಯ ಪಾಂಡುರಂಗ ಮಂದಿರ ಎದುರುಗಡೆ ಚರಂಡಿಗೆ ಜು.15ರಂದು ಸಂಜೆ ಕೊಜಪಾಡಿಯ ನಿವಾಸಿ ಮಹಿಳೆಯೊಬ್ಬರು ಬಿದ್ದು ಕಾಲಿಗೆ ಗಾಯವಾಗಿತ್ತು. ರಸ್ತೆ ಅಂಚಿನಲ್ಲಿ ಬಸ್ ನಿಲುಗಡೆ ಮಾಡುವುದರಿಂದ ನಡೆದಾಡಲು ಸಮಸ್ಯೆಯಾಗಿ ಪರಿಣಮಿಸಿದೆ. ಈ ಸ್ಥಳದಲ್ಲಿ ಚರಂಡಿಗೆ ಹಾಸುಕಲ್ಲು ಅಳವಡಿಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ.
Advertisement
ಶೀಘ್ರ ಕ್ರಮಕಳೆದ ಬಾರಿ ಆಟೋ ಚಾಲಕರು , ಸ್ಥಳೀಯರ ಸಹಾಯದಿಂದ ನೀರಿನ ತೊಟ್ಟಿ ಸ್ವತ್ಛಗೊಳಿಸಲಾಗಿತ್ತು. ಕೆಟ್ಟು ಹೋಗಿರುವ ವಿಚಾರ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಸ್ವತ್ಛಗೊಳಿಸಲಾಗುವುದು. ಅಂಗಡಿ ಮುಂಭಾಗ ತ್ಯಾಜ್ಯ ಎಸೆದಲ್ಲಿ ನೋಟಿಸ್ ನೀಡಿ ತೆರವಿಗೆ ಸೂಚಿಸಲಾಗುವುದು. ಈಗಾಗಲೇ ತ್ಯಾಜ್ಯ ಸಂಗ್ರಹಣೆಗೆ ಒತ್ತು ನೀಡಲಾಗಿದೆ.
– ಅಶೋಕ್ ಕೋಟ್ಯಾನ್, ಕುವೆಟ್ಟು ಗ್ರಾ.ಪಂ. ಅಧ್ಯಕ್ಷರು