Advertisement
ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಆರಂಭಿಸಿ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ನೀರು ಪ್ರಯಾಣಿಕರಿಗೆ ಸಿಗಲೆಂದು ಉಪ್ಪಿನಂಗಡಿಯಲ್ಲೂ ಯೋಜನೆ ಜಾರಿ ಗೊಳಿಸಲಾಗಿತ್ತು. ಎರಡು ವರ್ಷಗಳ ಹಿಂದೆ ಹೊರ ರಾಜ್ಯದ ಗುತ್ತಿಗೆದಾರರೊಬ್ಬರು ಕಾಟಾಚಾರಕ್ಕೆ ಎಂಬಂತೆ ಕಳಪೆ ಕಾಮಗಾರಿ ನಿರ್ವಹಿಸಿ, ಅದರ ಭಾವಚಿತ್ರಗಳನ್ನು ಸರಕಾರಕ್ಕೆ ಸಲ್ಲಿಸಿ, ಬಿಲ್ ಪಡೆದಿದ್ದಾರೆ. ಅಧಿಕಾರಿಗಳು ಕಾಮಗಾರಿಯನ್ನು ಪರಿಶೀ ಲಿಸದೆ ಮಂಜೂರಾತಿ ನೀಡಿದ್ದಾರೆ. ಇದೇ ಅವಾಂತರಕ್ಕೆ ಕಾರಣ ಎಂಬುದು ಸ್ಥಳೀಯರ ಆರೋಪ.
ಸರಕಾರದ ಎಲ್ಲ ಯೋಜನೆಗಳಿಗೆ ಆನ್‌ಲೈನ್‌ನಲ್ಲೇ ಅರ್ಜಿ ಸ್ವೀಕಾರ ಮಾಡಿ, ಟೆಂಡರ್ ನೀಡುವುದರಿಂದ ಇಂತಹ ಯೋಜನೆಗಳು ಸಮಸ್ಯೆಗಳ ಆಗರವಾಗಿ ಹಣ ಪೋಲಾಗುತ್ತಿದೆ. ಪ್ರತಿಯೊಂದು ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲು ಸ್ಥಳೀಯರಿಗೆ ಗುತ್ತಿಗೆ ನೀಡಿದರೆ ಒಳಿತು.
– ಅಬ್ದುಲ್ ರಹಿಮಾನ್, ಗ್ರಾ.ಪಂ. ಅಧ್ಯಕ್ಷ, ಉಪ್ಪಿನಂಗಡಿ