Advertisement

ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಿದ್ಧ

07:38 PM Nov 06, 2019 | mahesh |

ಮಾಣಿ: ನೇತ್ರಾವತಿ ನದಿಯಿಂದ ಸರ್ವಋತು ಜಲ ಪೂರೈಕೆ ಮಾಣಿ ಬಹುಗ್ರಾಮ ಕುಡಿಯುವ ನೀರಿನ 19.18 ಕೋಟಿ ರೂ. ಮೊತ್ತದ ಯೋಜನೆ ನ. 8 ರಂದು ಲೋಕಾರ್ಪಣೆಗೊಳ್ಳಲಿದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮದಡಿ 2014ರ ಫೆ. 26ರಂದು ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿತ್ತು. ಟೆಂಡರ್‌ ಪ್ರಕ್ರಿಯೆ ಬಳಿಕ ಮಂಗಳೂರು ಕಾವೂರಿನ ಅಮರ್‌ ಇನ್‌ಫ್ರಾ ಪ್ರೊಜೆಕ್ಟ್ ಗುತ್ತಿಗೆಯನ್ನು ವಹಿಸಿಕೊಂಡಿತ್ತು. 2017ರ ಮೇ 23ರಂದು ಯೋಜನೆಯ ಕಾಮಗಾರಿಗೆ ಚಾಲನೆ ದೊರೆತು ಇದೀಗ ಮುಕ್ತಾಯಕ್ಕೆ ಬಂದಿದ್ದು, ನೀರು ಸರಬರಾಜು ಪರೀಕ್ಷಾರ್ಥ ತಪಾಸಣೆ ಕೆಲಸಗಳು ಪ್ರಗತಿಯಲ್ಲಿದೆ.

Advertisement

6 ಗ್ರಾಮಗಳು
ಮಾಣಿ, ಪೆರಾಜೆ, ಅನಂ ತಾಡಿ, ನೆಟ್ಲಮುಟ್ನೂರು, ಕಡೇ ಶ್ವಾಲ್ಯ, ಬರಿಮಾರು ಗ್ರಾಮ ಗಳು, 51 ಜನವಸತಿ ಪ್ರದೇಶ, 25,215 ಜನಸಂಖ್ಯೆಗೆ ಪೂರಕ ವಾಗಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಕಡೇಶ್ವಾಲ್ಯ ಗ್ರಾಮದ ಕಾಗೆಕಾನ ಪ್ರದೇಶದ ನದಿ ಆಳದ ಅಂಚಿನಲ್ಲಿ ನೀರೆತ್ತುವ ಸ್ಥಾವರ ನಿರ್ಮಿಸಲಾಗಿದೆ.

175 ಅಶ್ವಶಕ್ತಿಯ ಪಂಪ್‌, 6 ಮೀ. ವ್ಯಾಸದ ಜ್ಯಾಕ್‌ವೆಲ್‌ ನಿರ್ಮಾಣ, ಪೆರಾಜೆ ಗ್ರಾಮದ ಗಡಿ ಯಾರ ದಲ್ಲಿ 36 ಲಕ್ಷ ಲೀ. ನೀರಿನ ಶುದ್ಧೀಕರಣ ಘಟಕ, ಜೋಗಿ ಬೆಟ್ಟಿನಲ್ಲಿ 4.50 ಲಕ್ಷ ಲೀ. ಜಲ ಸಂಗ್ರಹಣ ಟ್ಯಾಂಕ್‌, 70 ಸಾ. ಲೀ. ಮೇಲ್ಮ ಟ್ಟದ ವಾಶ್‌ ವಾಟರ್‌ ಟ್ಯಾಂಕ್‌ ನಿರ್ಮಾಣ, ಪರ್ಲೊಟ್ಟುನಲ್ಲಿ 50 ಸಾವಿರ ಲೀ. ನೆಲ ಮಟ್ಟದ ಜಲ ಸಂಗ್ರಹಗಾರ ಹೊಂದಿದೆ. ಯೋಜನೆ ಪೂರ್ವ ಅನುಷ್ಠಾನದಲ್ಲಿದ್ದ ಗ್ರಾಮ ಮಟ್ಟದ ನೀರು ಪೂರೈ ಕೆಯ 59 ಘಟಕಗಳು ಇದೇ ನೀರನ್ನು ಬಳಸಿಕೊಳ್ಳು ವಂತೆ ಯೋಜನೆ ರೂಪಿಸಲಾಗಿದೆ.

ಫ‌ಲಾನುಭವಿ ಪ್ರದೇಶಗಳು, ಜನಸಂಖ್ಯೆ
ಕಡೇಶ್ವಾಲ್ಯ ಗ್ರಾಮ ಖಂಡಿಗ ವಲಯದ 17 ಜನವಸತಿ ಪ್ರದೇಶದ ಜನಸಂಖ್ಯೆ -5,030
ಬರಿಮಾರು, ಮಾಣಿ, ಪೆರಾಜೆ ಗ್ರಾಮಗಳ ಬುರ್ದು ವಲಯದ 12 ಜನವಸತಿ ಪ್ರದೇಶದ ಜನಸಂಖ್ಯೆ-5,418 ಅನಂತಾಡಿ, ನೆಟ್ಲಮುಟ್ನೂರು, ಮಾಣಿ, ಪೆರಾಜೆ ಗ್ರಾಮಗಳ ಕೊಂಬಿಲಾ ವಲಯದ 22 ಜನವಸತಿ ಪ್ರದೇಶದ ಜನಸಂಖ್ಯೆ -10,326 ಹೆಚ್ಚುವರಿ ಸೇರ್ಪಡೆ ಜನಸಂಖ್ಯೆ-4,441

ನಿರೀಕ್ಷೆಯಂತೆ ಮುಕ್ತಾಯ ಹಂತಕ್ಕೆ
ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಿರೀಕ್ಷೆಯಂತೆ ಮುಕ್ತಾಯ ಹಂತಕ್ಕೆ ಬಂದಿದೆ. ಪರೀಕ್ಷಾರ್ಥ ನೀರು ಹರಿಸುವ ಕೆಲಸ ನಡೆದಿದೆ. ಕೆಲವು ಪೈಪ್‌ಲೈನ್‌ ಸಹಿತ ಸಣ್ಣಪುಟ್ಟ ನಿರ್ವಹಣೆ ಕೆಲಸಗಳನ್ನು ಪೂರ್ತಿ ಮಾಡಲಾಗುವುದು. ಒಟ್ಟು ಕೆಲಸದ ಮುಂದಿನ ಐದು ವರ್ಷಗಳ ನಿರ್ವಹಣೆಯನ್ನು ಇದೇ ಗುತ್ತಿಗೆದಾರರು ಮಾಡಲಿದ್ದಾರೆ.
 - ಮಹೇಶ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಬಂಟ್ವಾಳ

Advertisement

 ಮಂಜೂರಾತಿ ಸಂತೃಪ್ತಿ ತಂದಿದೆ
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಶಾಸಕತ್ವದ ಅವಧಿಯಲ್ಲಿ 2014-15ರ ಅವಧಿಯಲ್ಲಿ ಪ್ರಸ್ತಾವನೆಯಾಗಿ 2016-17ರ ಸಾಲಿನಲ್ಲಿ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಅದರಲ್ಲಿ ಸಂಗಬೆಟ್ಟು, ಕರೋಪಾಡಿ ಅನುಷ್ಠಾನ ಆಗಿದೆ. ಮಾಣಿ ಸಿದ್ಧವಾಗಿದೆ. ನರಿಕೊಂಬು, ಸರಪಾಡಿ ಪ್ರಗತಿಪಥದಲ್ಲಿದೆ. ರಾಜ್ಯದಲ್ಲಿಯೇ ಪ್ರಥಮ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ದೊರೆತಿರುವುದು ಸಂತೃಪ್ತಿ ತಂದಿದೆ.
 - ಬಿ. ರಮಾನಾಥ ರೈ, ಮಾಜಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next