Advertisement

ಸ್ವೀಪ್‌ ಪರಿಣಾಮಕಾರಿ ಅನುಷ್ಟಾನದಿಂದ ಮತದಾನ ಪ್ರಮಾಣ ಹೆಚಳ್ಚ

11:53 AM Apr 03, 2018 | Team Udayavani |

ಕಲಬುರಗಿ: ದೇಶದಾದ್ಯಂತ ಈ ಹಿಂದೆ ನಡೆದಿರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಸ್ವೀಪ್‌ ಕಾರ್ಯಕ್ರಮ ಹಮ್ಮಿಕೊಂಡ ಪ್ರಯುಕ್ತ ಮತದಾನದಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ. ಈ ಸಲದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಯೂ ಮತದಾನದ ಪ್ರಮಾಣ ಹೆಚ್ಚಿಸಲು ಜಾಗೃತಿ ಮೂಡಿಸುವಂತೆ ಕೇಂದ್ರ ಚುನಾವಣಾ
ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ ಸಿನ್ಹಾ ಸೂಚಿಸಿದರು.

Advertisement

ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ಕಚೇರಿಯಿಂದ ಹಮ್ಮಿಕೊಂಡಿದ್ದ ವಿಡಿಯೋ ಕಾರ್ನ್‌ರೆನ್ಸ್‌ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತೊಂದರೆಗಳಿದ್ದರೆ ನಿವಾರಿಸಬೇಕು. ಮತದಾರರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ನೈತಿಕ ಮತದಾನ ಮಾಡುವ ಹಾಗೆ ಬೂತ್‌ ಮಟ್ಟದಲ್ಲಿ ಮತದಾರರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸ್ವೀಪ್‌ ಸಮಿತಿ ಜಿಲ್ಲೆಯಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ನೋಂದಣಿಯಾಗದ ಯುವ ಮತದಾರರನ್ನು ಗುರುತಿಸಿ ಮುಂದಿನ ವಾರದೊಳಗಾಗಿ ಶಿಬಿರ ಹಮ್ಮಿಕೊಂಡು ನೋಂದಣಿ ಮಾಡಿಸಲು ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಮತದಾರರಿಂದ ಅಣುಕು ಮತದಾನ ಮಾಡಿಸುವ ಮೂಲಕ ಇಲೆಕ್ಟ್ರಾನಿಕ್‌ ಮತಯಂತ್ರ ಮತ್ತು ಮತಖಾತ್ರಿ ಯಂತ್ರ (ವಿವಿ ಪ್ಯಾಟ್‌)ಗಳ ಅರಿವು ಜಾಗೃತಿ ಮೂಡಿಸಬೇಕು. 

ಅಂಗವಿಕಲರಿಗೆ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆಯಾಗದಂತೆ ಸುಗಮ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಮತದಾರರು ತಮ್ಮ ಮೊಬೈಲ್‌ಗ‌ಳ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳುವ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ಕಲಬುರಗಿ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಬೂತ್‌ ಮಟ್ಟದಲ್ಲಿ ವಿವಿ ಪ್ಯಾಟ್‌ ಅರಿವು ಮೂಡಿಸಲು “ಪರಿಚಯ’ ಎಂಬ ಕಾರ್ಯಕ್ರಮವನ್ನು ಪ್ರಸಕ್ತ ತಿಂಗಳು ಎರಡು ವಾರಗಳ ಅವಧಿಯಲ್ಲಿ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ 2267 ಮತಗಟ್ಟೆಗಳಲ್ಲಿ ಬೂತ್‌ ಮಟ್ಟದ ಜಾಗೃತಿ ಗುಂಪುಗಳ ಮುಖಾಂತರ ಅಣುಕು ಮತದಾನ ಮಾಡಿಸಲಾಗುವುದು. ಕಳೆದ ಚುನಾವಣೆಗಳಲ್ಲಿ ಮಹಿಳಾ ಮತದಾರರ ಮತದಾನದ ಪ್ರಮಾಣ ತುಂಬಾ ಕಡಿಮೆ ಇರುವ ಕಾರಣ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ವಿನೂತನ ಸ್ವೀಪ್‌ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ.

Advertisement

ಮಹಿಳಾ ಮತದಾರರ ಕೈಯಲ್ಲಿ ಚುನಾವಣಾ ಲೋಗೋ ಮೆಹಂದಿ ಹಾಕುವುದು, ರಂಗೋಲಿ, ಫ್ಯಾಶನ್‌ ಶೋ, ಮತದಾನದ ದಿನದಂದು ಪ್ರಥಮ ಮತದಾನ ಮಾಡಿದ ಮಹಿಳೆಯರಿಗೆ ಕಾಣಿಕೆ ನೀಡಲಾಗುವುದು ಎಂದು ಹೇಳಿದರು. ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಸ್ವೀಪ್‌ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next