ಚುನಾವಣಾ ಸಾಮಾನ್ಯ ವೀಕ್ಷಕರು ರವಿವಾರ ಸಭೆ ನಡೆಸಿದರು.
Advertisement
ಚುನಾವಣೆ ವೀಕ್ಷಕರು ವಿಧಾನಸಭೆವಾರು ಪ್ರತಿಶತ ಮತದಾನ, ಅತೀ ಹೆಚ್ಚು ಮತ್ತು ಕಡಿಮೆ ಮತದಾನ, ಮತದಾರರ ರಿಜಿಸ್ಟರ್ ಸೇರಿದಂತೆ ಮತದಾನದ ಸಮಗ್ರ ಮಾಹಿತಿಯನ್ನು ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು, ಏಜೆಂಟರಿಗೆ ನೀಡಿದರು. ಅಲ್ಲದೇ ಜಿಲ್ಲೆಯ 1,129 ಮತಗಟ್ಟೆಗಳಲ್ಲಿ ಚುನಾವಣೆ ಸುಸೂತ್ರವಾಗಿ ನಡೆದಿದ್ದು, ಯಾವುದೇ ಮತಗಟ್ಟೆಯಲ್ಲಿ ಮರುಮತದಾನದ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಮೇ 15ರಂದು ನಗರದಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ 2 ಕೊಠಡಿಗಳಿದ್ದು, ಒಟ್ಟು 14 ಮೇಜುಗಳು ಮತ್ತು ಮತದಾನ ಖಾತ್ರಿ ಯಂತ್ರದ ಮತ ಚೀಟಿಗಳನ್ನು ಎಣಿಸಲು ಹಾಗೂ ಪೋಸ್ಟಲ್ ಬ್ಯಾಲೆಟ್‌ಗಳನ್ನು ಎಣಿಕೆ ಮಾಡುವ ಸಲುವಾಗಿ ಒಂದು ಕೌಂಟರ್ ಇರುತ್ತದೆ. ಒಂದು ಮೇಜು ಚುನಾವಣಾ ಅಧಿಕಾರಿ/ ಸಹಾಯಕ ಚುನಾವಣಾ ಅಧಿಕಾರಿಗೆ ಮೀಸಲಾಗಿರುತ್ತದೆ ಎಂದು ಚುನಾವಣಾ ವೀಕ್ಷಕರು ಮಾಹಿತಿ ನೀಡಿದರು.
ಬೀರೇಂದ್ರ ಭೂಷಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುರಪುರ ಚುನಾವಣಾಧಿಕಾರಿ ಪ್ರವೀಣಾ ಪ್ರಿಯಾ ಎನ್. ಡೇವಿಡ್, ಶಹಾಪುರ ಚುನಾವಣಾಧಿ ಕಾರಿ ನವೀನ್ ಜೋಸೆಫ್, ಸಹಾಯಕ ಚುನಾವಣಾಧಿಕಾರಿ ಹಾಗೂ
ಅಭ್ಯರ್ಥಿಗಳು, ಏಜೆಂಟರು ಉಪಸ್ಥಿತರಿದ್ದರು. ಯಾದಗಿರಿ ಕ್ಷೇತ್ರದ ಸಾಮಾನ್ಯ ವೀಕ್ಷಕ ಡಾ| ಶಕೀಲ್ ಪಿ. ಅಹ್ಮದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಧಿಕಾರಿ ಮಂಜುನಾಥ ಜಿ. ಎನ್., ಸಹಾಯಕ ಚುನಾವಣಾಧಿ ಕಾರಿ ಹಾಗೂ ಅಭ್ಯರ್ಥಿಗಳು/ ಏಜೆಂಟರು ಇದ್ದರು.
Related Articles
Advertisement