Advertisement

ಲಿಂಗತ್ವ ಅಲ್ಪಸಂಖ್ಯಾಕರಿಗೆ ಧ್ವನಿಭಾಷಿಕ ಚಿಕಿತ್ಸೆಯ ಪಾತ್ರ

11:26 PM Aug 24, 2019 | Sriram |

ಕಳೆದ ಸಂಚಿಕೆಯಿಂದ-ಪುರುಷರು ಮತ್ತು ಮಹಿಳೆಯರದು ಎಂದು ಸ್ಥಾಪಿತವಾಗಿರುವ ಸಂವಹನ ವಿಧಾನಗಳನ್ನು ಆಯಾ ಲಿಂಗದ ನಿರ್ದಿಷ್ಟ ಲಕ್ಷಣ ಎಂಬುದಾಗಿ ಭಾವಿಸಲಾಗುತ್ತದೆ. ಸ್ತ್ರೀಯರದು ಕೀರಲಾದ ಉನ್ನತ ಸ್ಥಾಯಿಯ ಸ್ವರ, ಪುರುಷರದು ಕೆಳ ಸ್ಥಾಯಿಯ ಸ್ವರ ಎಂದು ಸ್ವೀಕೃತವಾಗಿರುತ್ತದೆ; ಇದೇವೇಳೆ ಪುರುಷರಿಗೆ ಹೋಲಿಸಿದರೆ ಸ್ತ್ರೀಯರದು ಮೃದು ಮತ್ತು ಸ್ಪಷ್ಟವಾದ ಮಾತುಗಾರಿಕೆ ಎನ್ನಲಾಗುತ್ತದೆ. ದೈಹಿಕ ಹಾವಭಾವಗಳು, ಕೈಕರಣಗಳು, ಎದುರಿನ ಮಾತುಗಾರನಿಂದ ಇರಿಸಿಕೊಳ್ಳುವ ಅಂತರ, ಕಣೊ°àಟ ಮತ್ತು ನಗು ಕೂಡ ಪುರುಷರು ಮತ್ತು ಸ್ತ್ರೀಯರಲ್ಲಿ ಭಿನ್ನವಾಗಿರುತ್ತವೆ. ಲಿಂಗತ್ವ ಅಲ್ಪಸಂಖ್ಯಾಕರಿಗೆ ಧ್ವನಿಭಾಷಿಕ ಚಿಕಿತ್ಸೆಯು ಸಂವಹನದ ಈ ಅಂಶಗಳ ಬಗೆಗೂ ಗಮನ ಹರಿಸುತ್ತದೆ. ಈ ಬದಲಾವಣೆಗಳು ಆಯಾ ಲಿಂಗದ ಹೆಚ್ಚು ಚೆನ್ನಾದ ಪ್ರತಿನಿಧೀಕರಣಕ್ಕೆ ಸಹಾಯ ಮಾಡುತ್ತವೆ; ಪರಿಣಾಮವಾಗಿ ಆತ್ಮವಿಶ್ವಾಸ, ಕಲ್ಯಾಣ ಮತ್ತು ಜೀವನ ಗುಣಮಟ್ಟವೂ ವೃದ್ಧಿಸುತ್ತದೆ.

Advertisement

ಲಿಂಗತ್ವ ಅಲ್ಪಸಂಖ್ಯಾಕರಿಗಾಗಿ ಲಭ್ಯವಿರುವ ಧ್ವನಿ ಭಾಷಿಕ ಚಿಕಿತ್ಸೆಯು ಅವರು ಸಮಾಜದಲ್ಲಿ ಉತ್ತಮವಾಗಿ ಬೆರೆಯಲು ಸಹಾಯ ಮಾಡುತ್ತದೆ. ಧ್ವನಿ ಭಾಷಿಕ ಚಿಕಿತ್ಸಕ /ಭಾಷಾ ಚಿಕಿತ್ಸಕರು ಈ ಲಿಂಗತ್ವ ಅಲ್ಪಸಂಖ್ಯಾಕರನ್ನು ವಿಶ್ಲೇಷಿಸಲು ಮತ್ತು ನಿರ್ವಹಿಸಲು ತರಬೇತಿ ಹೊಂದಿ ಪ್ರಮಾಣೀಕೃತರಾಗಿರುತ್ತಾರೆ.

ಲಿಂಗತ್ವ ಅಲ್ಪಸಂಖ್ಯಾಕರ ಬಗ್ಗೆ ಯಾವುದೇ ತಾರತಮ್ಯ ಅಥವಾ ಹೇವರಿಕೆ ಇಲ್ಲದೆ ಅಗತ್ಯವಾದ ಚಿಕಿತ್ಸೆಯನ್ನು ಅವರು ಒದಗಿಸುತ್ತಾರೆ. ಪ್ರತೀ ವರ್ಷ ಎಪ್ರಿಲ್‌ 16ನ್ನು “ವಿಶ್ವ ಧ್ವನಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಧ್ವನಿಯ ಪ್ರಾಮುಖ್ಯದ ಬಗ್ಗೆ ಜನಸಮುದಾಯದಲ್ಲಿ ಅರಿವನ್ನು ವೃದ್ಧಿಸುವುದು ಈ ದಿನಾಚರಣೆಯ ಗುರಿಗಳಲ್ಲಿ ಒಂದಾಗಿದೆ. “ವಿಶ್ವ ಧ್ವನಿ ದಿನ’ ಮಾತ್ರವಲ್ಲದೆ ವರ್ಷದುದ್ದಕ್ಕೂ ನಾವು ನಮ್ಮ ನಮ್ಮದೇ ಧ್ವನಿ ಮತ್ತು ಜನ ಸಮುದಾಯದ ಧ್ವನಿಯ ಬಗ್ಗೆ ಸಹಾನುಭೂತಿ ಮತ್ತು ಪ್ರೀತಿಯುಳ್ಳವರಾಗಿರೋಣ. ಇದು ನಮ್ಮ ಧ್ವನಿಯನ್ನು ಗುರುತಿಸಿ ಸಂತೋಷವಾಗಿ ಜೀವಿಸಲು ಸಹಕಾರಿಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next