Advertisement

ದೃಷ್ಟಿಯೇ ಏಕೆ ಸ್ವಾವಲಂಬನೆಯ ಪಾಠಕ್ಕೆ! ಇವರ ಬದುಕಿಗೆ “ಸುಗಂಧ’ಬೆಳಕು ತುಂಬಿತು

07:17 PM Jan 23, 2022 | Team Udayavani |

ಮಹಾನಗರ: ಸ್ವಾವಲಂಬಿ ಬದುಕಿನ ಕನಸ ಕಂಡು ಏಳು ವರ್ಷಗಳ ಹಿಂದೆ ಮಂಗಳೂರಿಗೆ ಆಗಮಿಸಿದ ದೃಷ್ಟಿ ಹೀನ ಕಲಾವಿದರ ತಂಡವೊಂದರ ಕನಸಿಗೆ ಈಗ ಜೀವ ಬಂದಿದೆ. ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘವನ್ನು ಹುಟ್ಟುಹಾಕಿ ಜಿಲ್ಲಾದ್ಯಂತ ತಮ್ಮ ಗಾಯನ ಸುಧೆ ಹರಿಸತೊಡಗಿದ್ದಾರೆ.

Advertisement

ಕಲಾ ಸಂಘದ ಎ.ಎನ್‌. ಯೋಗೀಶ್‌, ಕೃಷ್ಣ, ಮಂಜುನಾಥ, ಜ್ಯೋತಿ ಶೃಂಗೇರಿ, ಪ್ರವೀಣ್‌, ಸತೀಶ್‌, ಕೆ.ಎಸ್‌. ಮಂಜು ನಾಥ್‌, ಅನಿಲ್‌ ಕುಮಾರ್‌, ಮಾರುತಿ ಈ ತಂಡದ ಸದಸ್ಯರು.

ಸದ್ಯ ಕೊರೊನಾ ಹಿನ್ನೆಲೆಯಲ್ಲಿ ತಂಡದ ಗಾಯನ ಸುಧೆಗೆ ತಡೆ ಬಿದ್ದಿದೆ. ಕಲಾವಿದರಿಗೆ ಬೇಡಿಕೆ ಕುಸಿದಿದ್ದು, ನಿತ್ಯದ ಬದುಕಿಗೆ ಕೊಂಚ ಸಮಸ್ಯೆ ಆಗಿದೆ. ಹಾಗೆಂದು ಈ ತಂಡದ ಸದಸ್ಯರು ಕೈಕಟ್ಟಿ ಕುಳಿತಿಲ್ಲ. ಬದಲಾಗಿ, ಅದು ಉದ್ಯಮದ ಹಾದಿ ಹಿಡಿದಿದ್ದಾರೆ. ಫಿನಾಯಿಲ್‌, ಸೋಫ್‌ ಆಯಿಲ್‌ನಂಥ ಉ ತ್ಪನ್ನಗಳನ್ನು ಸ್ವತಃ ತಯಾರಿಸಿ ಗ್ರಾಹಕರಿಗೆ ತಲುಪಿಸತೊಡಗಿದ್ದಾರೆ.

ತಂಡದ ಸದಸ್ಯರೆಲ್ಲ ವಿವಿಧ ಜಿಲ್ಲೆಯವರು. ಬಾಲ್ಯದಲ್ಲಿ ವಿಶೇಷ ಅಂಧರ ಶಾಲೆಯಲ್ಲಿ ಕಲಿಯುವಾಗ ಪಠ್ಯೇತರ ಚಟುವಟಿಕೆಯ ಭಾಗವಾಗಿ ಫಿನಾಯಿಲ್‌ ತಯಾರಿಕೆ, ಸಾಬೂನು ಆಯಿಲ್‌ ತಯಾರಿಕೆ ಕಲಿಯಲಾಗಿತ್ತು. ಅದೇ ಸಂಕಷ್ಟ ಸಮಯದಲ್ಲಿ ಕೈ ಹಿಡಿದಿದೆ.

50ರಿಂದ 60 ಲೀ. ಫಿನಾಯಿಲ್‌
ಗಾಯನ ಪ್ರದರ್ಶನ ಇಲ್ಲದ ವೇಳೆ ಜಪ್ಪಿನಮೊಗರು ಬಳಿ ಇರುವ ತಮ್ಮ ಮನೆಯಲ್ಲಿ ಪ್ರತೀ ದಿನ ಸುಮಾರು 50ರಿಂದ 60 ಲೀಟರ್‌ ಫಿನಾಯಿಲ್‌, ಸೋಫ್‌ ಆಯಿಲ್‌ ತಯಾರು ಮಾಡುತ್ತಾರೆ. ಆ ಉತ್ಪನ್ನಕ್ಕೆ “ಸುಗಂಧ’ ಎಂದೂ ಹೆಸರಿಟ್ಟಿದ್ದಾರೆ. ಈ ಉತ್ಪನ್ನಗಳನ್ನು ಹತ್ತಿರದ ಮನೆಗಳಿಗೆ, ಕಚೇರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ತಮ್ಮ ಸಂಗೀತ ಕಾರ್ಯಕ್ರಮದಲ್ಲೂ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟು ಮಾರುತ್ತಾರೆ. ಆದರೆ, ಕೊರೊನಾ ಏರಿಕೆ ಬಳಿಕ ಖರೀದಿ ಕಡಿಮೆಯಾಗಿದೆ ಎನ್ನುತ್ತಾರೆ ಕಲಾವಿದರು.

Advertisement

ಮೊದಲನೇ ಅಲೆಯ ಬಳಿಕ ಇವರಿಗೆ ಗಾಯನ ಕಾರ್ಯಕ್ರಮ ಸಿಕ್ಕಿದ್ದು ಕಡಿಮೆ. ನಿತ್ಯದ ಬದುಕೂ ಕೊಂಚ ಕಷ್ಟವೆನಿಸಿದಾಗ, ಹಲವು ಜನರಲ್ಲಿ ಹಾಡುಗಾರಿಕೆಗೆ ಅವಕಾಶ ಕೋರಲಾಯಿತು. ಹಲವು ಸಂಘ ಸಂಸ್ಥೆಗಳೂ ಸಹಾಯ ವಿಸ್ತರಿಸಿದವು. ಆಗ ತುಂಬಾ ದಿನಗಳ ಕಾಲ ಸಹಾಯ ಕೇಳುವುದು ಸರಿಯಲ್ಲ ಎಂದು ಅರಿತ ಸದಸ್ಯರು ಸೊÌàದ್ಯೋಗಕ್ಕೆ ಮುಂದಾದರು.

ಜನರ ಪ್ರೋತ್ಸಾಹ ದೊಡ್ಡದು
ನಾವು ಸ್ನೇಹಿತರು ಸ್ವಂತ ಬದುಕು ಕಟ್ಟಿಕೊಳ್ಳಲು 7 ವರ್ಷಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದೆವು. ನಮಗೆ ದೃಷ್ಟಿ ಇರದಿದ್ದರೂ ತಾರತಮ್ಯ ತೋರದೇ ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಪ್ರೋತ್ಸಾಹಿಸಿದರು. ಕೊರೊನಾ ಮೊದಲ ಅಲೆ ಬಳಿಕ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ಕಡಿಮೆಯಾಗಿ ಸೊÌàದ್ಯೋಗಕ್ಕೆ ಮೊರೆ ಹೋದೆವು. ಅವಕಾಶ ಸಿಕ್ಕರೆ ಸಂಗೀತ ಕಾರ್ಯಕ್ರಮ ನೀಡುತ್ತೇವೆ.
– ಎ.ಎನ್‌. ಯೋಗೀಶ್‌, ಕಲಾವಿದರು, ಶಾರದಾ ಅಂಧರ
ಗೀತ ಗಾಯನ ಕಲಾ ಸಂಘ

-ನವೀನ್‌ ಭಟ್‌ ಇಳಂತಿಲ

 

Advertisement

Udayavani is now on Telegram. Click here to join our channel and stay updated with the latest news.

Next