ಎಲ್ಲಿದೆ: 16ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಗಾಯತ್ರಿದೇವಿ ಪಾರ್ಕ್ ವಿಸ್ತರಣೆ, ಮಲ್ಲೇಶ್ವರ
ಸ್ಮರಣಾರ್ಥ: ಪಿಟೀಲು ವಾದಕ ತಿರುಮಕೂಡಲು ಚೌಡಯ್ಯ (ಟಿ. ಚೌಡಯ್ಯ)
ಉದ್ದೇಶ: ಶ್ರೇಷ್ಠ ಸಂಗೀತಗಾರ ಚೌಡಯ್ಯ ಅವರ ಸಾಧನೆಯನ್ನು ಅಜರಾಮರಗೊಳಿಸುವ, ಸಂಗೀತ ಮತ್ತು ಇತರ ಪ್ರದರ್ಶನ ಕಲೆಗಳ ಪ್ರದರ್ಶನಕ್ಕೆ ವೇದಿಕೆ ರೂಪಿಸುವ ಉದ್ದೇಶದಿಂದ.
ಹಿಂದಿನ ಶಕ್ತಿ: ಬಿಡಿಎ ಅಧ್ಯಕ್ಷರಾಗಿದ್ದ ಕೆ.ಕೆ. ಮೂರ್ತಿ (ಅವರ ತಂದೆ ಕೆ. ಪುಟ್ಟುರಾವ್ ಮತ್ತು ಚೌಡಯ್ಯ ಇಬ್ಬರೂ ಆಪ್ತ ಸ್ನೇಹಿತರು) ಈ ಸ್ಮಾರಕ ಭವನ ನಿರ್ಮಿಸುವ ಕನಸು ಕಂಡವರು. ಜನರಿಂದ ದೇಣಿಗೆ ಪಡೆದು, ಗಾಯತ್ರಿ ಪಾರ್ಕ್ ಸಮೀಪದ ಸ್ಥಳವನ್ನು ಕಾರ್ಪೋರೇಷನ್‌ನಿಂದ 99 ವರ್ಷಕ್ಕೆ ಭೋಗ್ಯಕ್ಕೆ ತೆಗೆದುಕೊಂಡರು. ನಿರ್ಮಾಣಕ್ಕಾಗಿ ಸಿಂಡಿಕೇಟ್ ಬ್ಯಾಂಕ್ 5 ಲಕ್ಷ ರೂ. ಸಾಲ ನೀಡಿತ್ತು. ಆಗಿನ ಮುಖ್ಯಮಂತ್ರಿ ಗುಂಡೂರಾವ್ ಅವರು ಇಪ್ಪತ್ತು ಲಕ್ಷ ರೂ. ಅನುದಾನ ನೀಡಿದರು. ಇವರೆಲ್ಲರ ನೆರವಿನಿಂದ ಕಟ್ಟಡ ನಿರ್ಮಾಣಗೊಂಡಿತು.
ವಾಸ್ತುಶಿಲ್ಪಿ: ಎಸ್.ಎನ್. ಮೂರ್ತಿ
ಅಂದಾಜು ವೆಚ್ಚ: 36 ಲಕ್ಷ ರೂ.
ಲೋಕಾರ್ಪಣೆ: 1980
ಪಿಟೀಲಿನ ಆಕಾರ: ಕಟ್ಟಡ ನಿರ್ಮಾಣಕ್ಕೆ ಏಳು ವರ್ಷ ಸಮಯ ಬೇಕಾಯ್ತು. ನುರಿತ ವಾಸ್ತುಶಿಲ್ಪಿ ಎಸ್.ಎನ್. ಮೂರ್ತಿ ಅವರ ಮಾರ್ಗದರ್ಶನದಲ್ಲಿ, ಏಳು ತಂತಿಗಳ ಪಿಟೀಲಿನ ಆಕಾರದಲ್ಲಿ ಭವನ ನಿರ್ಮಿಸಲು, ಏಳೆಂಟು ಬಾರಿ ಕಟ್ಟಡವನ್ನು ಭಾಗಶಃ ಒಡೆದು ಕಟ್ಟಲಾಗಿದೆ. ಕಟ್ಟಡದ ಮೇಲೆ ಅಲ್ಯುಮಿನಿಯಂ ತಂತಿ, ಕೀಲಿ ಜೋಡಿಸಿ, ವಾದ್ಯದ ನೈಜ ಸ್ಪರ್ಶ ನೀಡಲಾಗಿದೆ.
ಆಸನ ಸಾಮರ್ಥ್ಯ: 1100
ನಿರ್ವಹಣೆ: ಅಕಾಡೆಮಿ ಆಫ್ ಮ್ಯೂಸಿಕ್