Advertisement

ಮಲಯಾಳಂಗೆ “ದಿ ವಿಲನ್‌’

10:54 AM Jul 29, 2017 | Team Udayavani |

ಶಿವರಾಜಕುಮಾರ್‌-ಸುದೀಪ್‌ ಕಾಂಬಿನೇಶನ್‌ನ “ದಿ ವಿಲನ್‌’ ಚಿತ್ರ ಮೊನ್ನೆಯಷ್ಟೇ ಲಂಡನ್‌ ಚಿತ್ರೀಕರಣ ಬೆಂಗಳೂರಿಗೆ ವಾಪಸ್ಸಾಗಿದೆ. ಇನ್ನೂ ಸಾಕಷ್ಟು ದಿನಗಳ ಚಿತ್ರೀಕರಣ  ಬಾಕಿ ಇದೆ. ಸದ್ಯ ಕನ್ನಡದಲ್ಲಷ್ಟೇ “ದಿ ವಿಲನ್‌’ ತಯಾರಾಗುತ್ತಿದ್ದು, ಮುಂದೆ ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲೂ “ದಿ ವಿಲನ್‌’ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ಹಾಗಾದರೆ, ಮಲಯಾಳಂ, ತಮಿಳಿನಲ್ಲಿ ಯಾರು ನಟಿಸುತ್ತಾರೆ, ಇದೇ ಕಾಂಬಿನೇಶನ್‌ ಮುಂದುವರಿಯುತ್ತಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. 

Advertisement

ಮೂಲಗಳ ಪ್ರಕಾರ, ಮಲಯಾಳಂ, ತಮಿಳು, ತೆಲುಗಿನಲ್ಲಿ ಮೋಹನ್‌ ಲಾಲ್‌ ನಟಿಸಲಿದ್ದಾರಂತೆ. ಹಾಗಾದರೆ ಯಾವ ನಟ ಬದಲಾಗುತ್ತಾನೆಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.  “ದಿ ವಿಲನ್‌’ನಲ್ಲಿ ಶಿವರಾಜಕುಮಾರ್‌ ಮಾಡುತ್ತಿರುವ ಪಾತ್ರವನ್ನು ಬೇರೆ ಭಾಷೆಯಲ್ಲಿ ಮೋಹನ್‌ ಲಾಲ್‌ ಮಾಡಲಿದ್ದು, ಸುದೀಪ್‌ ಹಾಗೂ ಮೋಹನ್‌ ಲಾಲ್‌ ಕಾಂಬಿನೇಶನ್‌ನಲ್ಲಿ ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ “ದಿ ವಿಲನ್‌’ ಮೂಡಿಬರಲಿದೆ ಎಂಬ ಲೇಟೆಸ್ಟ್‌ ಸುದ್ದಿಯೊಂದು ಓಡಾಡುತ್ತಿದೆ.

ಹಾಗಂತ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಬದಲಾಗಿ, ಗಾಂಧಿನಗರದಲ್ಲಿ “ದಿ ವಿಲನ್‌’ ಪರಭಾಷಾ ವರ್ಶನ್‌ಗೆ ಮೋಹನ್‌ ಲಾಲ್‌ ಬರಲಿದ್ದಾರೆಂಬ ಸುದ್ದಿಯಂತೂ ಜೋರು ಸದ್ದು ಮಾಡುತ್ತಿದೆ. ಸದ್ಯ ಲಂಡನ್‌ನಿಂದ “ದಿ ವಿಲನ್‌’ ತಂಡ ಬಂದಿದ್ದು, ಲೇಹ್‌ ಲಡಾಕ್‌ನಲ್ಲಿ ಚಿತ್ರೀಕರಣಕ್ಕೆ ಹೊರಡಲು ಅಣಿಯಾಗುತ್ತಿದೆ. ಸುಮಾರು 130 ದಿನಗಳ ಶೆಡ್ನೂಲ್‌ ಹಾಕಿಕೊಳ್ಳಲಾಗಿದ್ದು, ಡಿಸೆಂಬರ್‌ ಹೊತ್ತಿಗೆ ಸಿನಿಮಾ ಮುಗಿಸಿ, ತೆರೆಗೆ ತರುವ ಆಲೋಚನೆ ಪ್ರೇಮ್‌ಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next