Advertisement
ಸಿದ್ದರಾಮಯ್ಯಗೆ ಸ್ವಾಗತ: ಮುಖ್ಯಮಂತ್ರಿಯವರ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಹಲವು ಮುಖಂಡರು ಬೆಳಗ್ಗಿನಿಂದಲೇ ಸಿದ್ದರಾಮಯ್ಯ ಬರುವಿಕೆಯನ್ನು ಎದುರು ನೋಡುತ್ತಾ ಕುಳಿತಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ಸಿದ್ದರಾಮಯ್ಯ ಆಗಮಿಸಿದ ಕೂಡಲೇ ಜೈಕಾರ ಕೂಗಿ ಸಂಭ್ರಮದಿಂದ ಬರಮಾಡಿಕೊಂಡರು. ಮನೆ ದೇವರು ಸಿದ್ದರಾಮೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮತಗಟ್ಟೆಗೆ ಬಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪುತ್ರ ಡಾ. ಯತೀಂದ್ರರೊಂದಿಗೆ ಬಂದು ಹಕ್ಕು ಚಲಾಯಿಸಿದರು.
Related Articles
Advertisement
ಹೆಳವರ ಹುಂಡಿ, ಗೆಜ್ಜಗನಹಳ್ಳಿಯ ಮತಗಟ್ಟೆಯಲ್ಲೂ ಉದ್ದನೆಯ ಸಾಲಿತ್ತು. ಆದರೆ, ನಗರ್ಲೆ ಮತಗಟ್ಟೆಯಲ್ಲಿ ಮಧ್ಯಾಹ್ನ 1.40 ಆದರೂ ಮತದಾರರು ಹೆಚ್ಚಿರಲಿಲ್ಲ. ನಂಜನಗೂಡು ಕ್ಷೇತ್ರದ ಹೊರಳವಾಡಿ ಹೊಸೂರಿನ ಮತಗಟ್ಟೆಯ ಒಟ್ಟು 367 ಮತದಾರರ ಪೈಕಿ ಮಧ್ಯಾಹ್ನ 2 ಗಂಟೆಯಾದರೂ ಕೇವಲ 57 ಮಂದಿ ಮತ ಚಲಾಯಿಸಿದ್ದರು. ಹೀಗಾಗಿ ಅಲ್ಲಿನ ಮತಗಟ್ಟೆ ಸಿಬ್ಬಂದಿ ಜನರಿಲ್ಲದೆ ಆರಾಮಾಗಿದ್ದರು.
ಚಾಮುಂಡೇಶ್ವರಿ ಕ್ಷೇತ್ರದ ಮಂಡಕಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಉತ್ತಮ ಮತದಾನ ಕಂಡುಬಂದಿತು. ಮಧ್ಯಾಹ್ನ 2.45ರ ವೇಳೆಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ್ದ ಎರಡು ಮತಗಟ್ಟೆಗಳಲ್ಲಿ ಮತಗಟ್ಟೆ ಸಂಖ್ಯೆ 247ರಲ್ಲಿ ಒಟ್ಟು 1233 ಮತದಾರರ ಪೈಕಿ 850 ಮಂದಿ ಮತದಾನ ಮಾಡಿದ್ದರೆ, ಮತಗಟ್ಟೆ ಸಂಖ್ಯೆ 248ರಲ್ಲಿನ 783 ಮತದಾರರ ಪೈಕಿ 545 ಮಂದಿ ಹಕ್ಕು ಚಲಾಯಿಸಿದ್ದರು. ಗೆಜ್ಜಗಳ್ಳಿಯ ಮತಗಟ್ಟೆ ಬಳಿಯೂ ಉದ್ದನೆಯ ಸರದಿಕಂಡು ಬಂದಿತು.
ಕಳೆದ ಚುನಾವಣೆಯಲ್ಲಿ ಚೆನ್ನಾಗಿಯೇ ಇದ್ದೆ, ನಾನೇ ಬಂದು ಮತ ಹಾಕಿದ್ದೆ. ಆದರೆ, ನಾಲ್ಕು ವರ್ಷಗಳ ಹಿಂದೆ ನಾಯಿ ಕಡಿತದಿಂದ ಕಾಲುಗಳ ಸ್ವಾಧೀನ ಕಳೆದುಕೊಂಡು ತಿರುಗಾಡಲು ಸಾಧ್ಯವಿಲ್ಲದಂತಾಗಿದೆ, ಆದರೂ ನನ್ನ ಹಕ್ಕು ಚಲಾಯಿಸಬೇಕು ಎಂದು ಬಂದಿದ್ದೇನೆ.-ಸಣ್ಣಯ್ಯ, ವರುಣಾ ಕ್ಷೇತ್ರದ ಬನ್ನಹಳ್ಳಿಹುಂಡಿ ಮತಗಟ್ಟೆ