Advertisement

ಕೆರೆ ಹೆಸರು ಬದಲಾಯಿಸಲು ಗ್ರಾಮಸ್ಥ ರ ಒತ್ತಾಯ

09:39 PM Jan 05, 2022 | Team Udayavani |

ಯಲಬುರ್ಗಾ: ತಾಲೂಕಿನ ತರಲಕಟ್ಟಿ ಗ್ರಾಮ ವ್ಯಾಪ್ತಿಯಲ್ಲಿರುವ ಕೆರೆಗೆ ನಿಲೋಗಲ್‌ ಕೆರೆ ಎಂಬ ಹೆಸರಿನಿಂದ ಕರೆಯುತ್ತಿರುವುದು ಸರಿಯಲ್ಲ. ಶೀಘ್ರದಲ್ಲೇ ಇದಕ್ಕೆ ತರಲಕಟ್ಟಿ ಕೆರೆ ಎಂದು ದಾಖಲೆಗಳಲ್ಲಿ ನಮೂದಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಅವರಿಗೆ ರೈತ ಮುಖಂಡರು, ಗ್ರಾಮಸ್ಥರು ಮನವಿ ಸಲ್ಲಿಸಿದರು.

Advertisement

ರೈತ ಮುಖಂಡ ಶ್ರೀಕಾಂತಗೌಡ ಮಾಲಿಪಾಟೀಲ್‌ ಮಾತನಾಡಿ, ತರಲಕಟ್ಟಿ ಗ್ರಾಮದ ನೂರಾರು ಎಕರೆ ಜಮೀನು ಕೆರೆ ನಿರ್ಮಾಣಕ್ಕೆ ಸ್ವಾ ಧೀನಪಡಿಸಿಕೊಂಡಿದ್ದು ತರಲಕಟ್ಟಿ ಸೀಮಾದ ಭೂಮಿಯೇ ಹೊರತು ನೀಲೋಗಲ್‌ ಗ್ರಾಮದ ಒಂದು ಇಂಚು ಭೂಮಿ ಸಹ ಕೆರೆ ನಿರ್ಮಾಣಕ್ಕೆ ಬಳಸಿಲ್ಲ. ಅದಕ್ಕೆ ನೀಲೋಗಲ್‌ ಕೆರೆಯಂದು ಕರೆಯುವುದು ತಪ್ಪು, ತರಲಕಟ್ಟಿ ಕೆರೆಗೆ ನಿಲೋಗಲ್‌ ಕೆರೆಯಂದು ಕರೆಯುವುದನ್ನು ಬಿಡಬೇಕು. ಸರ್ಕಾರ 1983ರ ಸಂದರ್ಭದಲ್ಲಿ ರಾಯಚೂರು ಜಿಲ್ಲೆ ಇದ್ದ ವೇಳೆ ಯಲಬುರ್ಗಾ ತಾಲೂಕಿನ ತರಲಕಟ್ಟಿ ಭೂಮಿ ಸ್ವಾಧೀನಕ್ಕೆ ಮುಂದಾದಾಗ ಸುತ್ತೋಲೆಯಲ್ಲಿ ತರಲಕಟ್ಟಿ ಎಂದು ದಾಖಲೆಗಳಲ್ಲಿ ಇವೆ. ತರಲಕಟ್ಟಿ ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡುವುದರಿಂದ ನಿಲೋಗಲ್‌ ಜನತೆಗೆ ಅನುಕೂಲವಾಗಲಿದೆ ಎಂದು ದಾಖಲೆಗಳಲ್ಲಿದೇ ವಿನಃ ನಿಲೋಗಲ್‌ ಕೆರೆ ಎಂದು ಇಲ್ಲ.

ಆದ್ದರಿಂದ ಸಣ್ಣ ನೀರಾವರಿ ಇಲಾಖೆಯವರ ದಾಖಲಾತಿಯಲ್ಲಿ ನಿಲೋಗಲ್ಲ ಕೆರೆ ಎಂದು ನಾಮಕರಣ ಮಾಡಿದ್ದಾರೆ. ಈಗ ಇದನ್ನು ರದ್ದು ಪಡಿಸಿ ತರಲಕಟ್ಟಿ ಕೆರೆ ಎಂದು ನಾಮಕರಣ ಮಾಡಬೇಕು. ಒಂದು ವೇಳೆ ಹೆಸರು ಬದಲಾವಣೆ ಮಾಡದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ನೀಲೋಗಲ್‌ ಕೆರೆ ಎಂದು ಕರೆಯುವುದಾದರೆ ತರಲಕಟ್ಟಿಯಲ್ಲಿ ಕೆರೆ ಕಾಮಗಾರಿ ನಿರ್ವಹಿಸಲು ಬಿಡುವುದಿಲ್ಲ. ನಮ್ಮ ಭೂಮಿ ನಮ್ಮ ಕೆರೆ ಇದನ್ನು ಅಧಿ ಕಾರಿಗಳು, ಸಚಿವರು ಅರ್ಥ ಮಾಡಿಕೊಳ್ಳಬೇಕು. ಸಚಿವರು ಸಣ್ಣ ನೀರಾವರಿ ಇಲಾಖೆ ಅ ಧಿಕಾರಿಗಳಿಗೆ ತಿಳಿಸಿ ಹೆಸರು ಬದಲಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಕೆರೆಗೆ ಭೂಮಿಗೆ ಕಳೆದುಕೊಂಡ ರೈತರಿಗೆ ಕೂಡಲೇ ಪರಿಹಾರ ನೀಡಲು ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಮನವಿ ಸ್ವೀಕರಿಸಿ ಮಾತನಾಡಿ, ಶೀಘ್ರದಲ್ಲೇ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಮುಂದಾಗುತ್ತೇನೆ ಎಂಬ ಭರವಸೆ ನೀಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಗೌಡ ಮಾಲಿಪಾಟೀಲ್‌, ಚಂದ್ರಶೇಖರಗೌಡ ಮಾಲಿಪಾಟೀಲ್‌, ಶಂಕ್ರಪ್ಪ ವಜ್ರಬಂಡಿ, ಕರಿಯಪ್ಪ ನಂದಿಹಾಳ, ಮಲ್ಲೇಶ ಕೋನಸಾಗರ, ಹನುಮೇಶ ಬುಡಶೆಟ್ನಾಳ, ಹನುಮಂತಪ್ಪ ಚನ್ನದಾಸರ, ಹನುಮಂತಪ್ಪ ತಳವಾರ, ಗಂಗನಗೌಡ ಮಾಲಿಪಾಟೀಲ್‌, ಮಲ್ಲಪ್ಪ ಹಡಪದ ಸೇರಿ ಇತರರು ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next