ಬೆಂಗಳೂರು: ಅಶ್ಲೀಲ ವಿಡಿಯೋ ವೀಕ್ಷಣೆ, ಫೋರ್ನ್ ವೆಬ್‌ಸೈಟ್‌ಗಳಲ್ಲಿ ಚಾಟಿಂಗ್ ಮಾಡುವುದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿ ದೌರ್ಜನ್ಯ ಎಸಗುತ್ತಿದ್ದ ಪತಿಯ ವಿರುದ್ಧ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಒಂದನೇ ಎಸಿಎಂಎಂ ಕೋರ್ಟ್ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಗರದ ಮಹಿಳೆ ತನ್ನ ಪತಿ ನಿತ್ಯ ಪೋರ್ನ್ ವೆಬ್ ಸೈಟ್‌ನಲ್ಲಿ ವಿಡಿಯೋ ನೋಡುತ್ತಾನೆ.
ಜತೆಗೆ ವೆಬ್‌ಸೈಟ್‌ನಲ್ಲಿ ಯುವತಿಯರ ಜತೆ ಚಾಟಿಂಗ್ ಮಾಡುತ್ತಾನೆ. ಲೈಂಗಿಕ ಕಾರ್ಯಕರ್ತೆಯರ ಜತೆ ಸಂಪರ್ಕ ಹೊಂದಿದ್ದಾನೆ. ಇದರೊಂದಿಗೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ವಿಚ್ಛೇದಿತ ಎಂದು ಪ್ರೊಫೈಲ್ ಹಾಕಿಕೊಂಡು ಮಹಿಳೆಯರ ಚಾಟಿಂಗ್ ನಡೆಸುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಇದನ್ನೂ ಓದಿ:- ಮಂಗಳೂರು: ಐಡಿಯಲ್ ಐಸ್ ಕ್ರೀಮ್ ಸಂಸ್ಥಾಪಕ ಪ್ರಭಾಕರ್ ಕಾಮತ್ ನಿಧನ
ಲೋಕ್ಯಾಂಟೋ ಆ್ಯಪ್, ಟೆಲಿಗ್ರಾಂ ಆ್ಯಪ್‌ನಲ್ಲಿ ಖಾತೆ ತೆರೆದು ಲೈಂಗಿಕ ಕಾರ್ಯಕರ್ತೆಯರ ಜತೆ ಚಾಟಿಂಗ್ ಮಾಡುತ್ತಾನೆ. ಅಪರಿಚಿತ ವ್ಯಕ್ತಿಗೆ ಖಾಸಗಿ ಪೋಟೋಗಳನ್ನು ಕಳುಹಿಸಿ ಅಶ್ಲೀಲವಾಗಿ ಸಂಭಾಷಣೆ ನಡೆಸುತ್ತಾನೆ. ಬೇರೆ ಹುಡುಗಿಯರ ಜತೆ ಫೊàಟೋ ತೆಗೆಸಿಕೊಂಡು ದಂಪತಿ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದು ಪತಿಯ ವಿರುದ್ಧ ಗಂಭೀರವಾಗಿ ಆರೋಪಿಸಿ ಮಹಿಳೆ ಬಸವನಗುಡಿ ಮಹಿಳಾ ಠಾಣೆ ಮೆಟ್ಟಿಲೇರಿದ್ದರು.
ಆದರೆ, ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿ ದ್ದರಿಂದ ಕೋರ್ಟ್ ಮೊರೆ ಹೋಗಿದ್ದು, ಇದೀಗ ಕೋರ್ಟ್ ಸೂಚನೆ ಮೇರೆಗೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.