Advertisement

ಸಿಎಂ ಎದುರು ಕಣ್ಣೀರಿಟ್ಟ ಸಂತ್ರಸ್ತರು

11:21 PM Aug 27, 2019 | Team Udayavani |

ಚಿಕ್ಕಮಗಳೂರು: ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿ ವೀಕ್ಷಿಸಿ, ನೆರೆ ಸಂತ್ರಸ್ತರ ಅಹವಾಲು ಆಲಿಸಿದರು.

Advertisement

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಂ.ಪಿ.ಕುಮಾರ ಸ್ವಾಮಿ, ಟಿ.ಡಿ.ರಾಜೇಗೌಡ, ವಿಧಾನಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಅವರೊಂದಿಗೆ ಮಲೆಮನೆ ಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿ, ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ವೀಕ್ಷಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.

ಕಣ್ಣೀರಿಟ್ಟ ಸಂತ್ರಸ್ತರು: ಗುಡ್ಡ ಕುಸಿದು, ಹಳ್ಳದ ನೀರು ಉಕ್ಕಿ ಹರಿದ ಪರಿಣಾಮ ಮನೆಗಳು ಬಿದ್ದುಹೋದವು. ನೀರಿನಲ್ಲಿ ಸಿಲುಕಿದ್ದ ನಮ್ಮನ್ನು ನಮ್ಮ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರೇ ಬಹಳ ಕಷ್ಟಪಟ್ಟು ಕಾಪಾಡಿದ್ದಾರೆ. ಕಷ್ಟದಲ್ಲಿರುವವರಿಗೆ ನಾವು ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವು. ಈಗ ನಾವೇ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಲುಪಿದ್ದೇವೆ ಎಂದು ಕಣ್ಣೀರಿಟ್ಟರು.

ಈಗ ಪುನಃ ಈ ಗ್ರಾಮದಲ್ಲಿ ಬದುಕಲು ಸಾಧ್ಯವಿಲ್ಲ. ಗುಡ್ಡ ಕುಸಿತ ಮುಂದುವರಿಯುವ ಭೀತಿ ಎದುರಾಗಿದೆ. ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿಕೊಡಿ ಎಂದು ಆಗ್ರಹಿಸಿದರು. ಸಂತ್ರಸ್ತರ ಸಮಸ್ಯೆ ಆಲಿಸಿದ ಯಡಿಯೂರಪ್ಪ, ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಯಾರೂ ಅತೃಪ್ತರಿಲ್ಲ
ಚಿಕ್ಕಮಗಳೂರು: 17 ಜನ ಮಂತ್ರಿಗಳಿಗೆ ಖಾತೆ ಹಂಚಿದ್ದೇನೆ. ಅವರಲ್ಲಿ ಯಾರೂ ಅತೃಪ್ತರಿಲ್ಲ ಎಂದು ಮುಖ್ಯಮಮತ್ರಿ ಯಡಿಯೂರಪ್ಪ ಹೇಳಿ ದರು. ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿಯಿಂ ದಾದ ಹಾನಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ನಂತರ ಅಲ್ಪ ಸ್ವಲ್ಪ ಅಸಹನೆ, ಅಸಮಾಧಾನ ಇವೆಲ್ಲ ಸಹಜ. ಅತೃಪ್ತಿ ಎಲ್ಲ ಕಾಲದಲ್ಲೂ ಇದ್ದೇ ಇರುತ್ತದೆ. ಆದರೆ, ಈ ಸಾರಿ ರಚನೆಯಾದ ಸಂಪುಟ ಹಾಗೂ ಖಾತೆ ಹಂಚಿಕೆ ಯಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಒಡಕು ಮಾತ ನಾಡಿರ ಬಹುದು. ಅದೆಲ್ಲ ಇರುತ್ತದೆ ಎಂದರು.

Advertisement

ಹದಿನೆಂಟೇ ನಿಮಿಷದಲ್ಲಿ ಮುಗೀತು ವೀಕ್ಷಣೆ
ಚಿಕ್ಕಮಗಳೂರು: ಸಿಎಂ ಯಡಿಯೂರಪ್ಪ ನಡೆಸಿದ ಹಾನಿಯ ವೀಕ್ಷಣಾ ಕಾರ್ಯಕ್ರಮ ಮಂಗಳವಾರ ಕೇವಲ 18 ನಿಮಿಷಗಳಲ್ಲಿ ಪೂರ್ಣಗೊಂಡಿತು.
ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ವೀಕ್ಷಿಸಲು ಮಂಗಳವಾರ ಮಧ್ಯಾಹ್ನ 3.11ಕ್ಕೆ ಆಗಮಿಸಿದ ಮುಖ್ಯ ಮಂತ್ರಿ, 3.29 ಕ್ಕೆ ಮಲೆಮನೆ ಗ್ರಾಮದಿಂದ ವಾಪಸ್ಸಾದರು.

ಮಲೆಮನೆ ಗ್ರಾಮದಲ್ಲಿ ಸೋಮವಾರದಿಂದ ಪುನ: ಮಳೆ ಆಗುತ್ತಿರು ವುದರಿಂದ ಗ್ರಾಮದಲ್ಲಿ ಕೆಸರು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅತಿವೃಷ್ಟಿಯಿಂದ ಹಾನಿ ಯಾಗಿರುವ ಪ್ರದೇಶವನ್ನು ದೂರದಿಂದಲೇ ಮುಖ್ಯಮಂತ್ರಿಗೆ ತೋರಿಸಲು ಜಿಲ್ಲಾಡಳಿತ ತೀರ್ಮಾನಿಸಿತ್ತು. ಅದರಂತೆ ದೂರದಿಂದಲೇ ಹಾನಿಯಾಗಿರುವ ಪ್ರದೇಶವನ್ನು ಯಡಿಯೂರಪ್ಪ ವೀಕ್ಷಿಸಿದರು.

ಮೂಡಿಗೆರೆ ತಾಲೂಕಿನ ಮಲೆಮನೆ, ಅಲೆಖಾನ್‌ ಹೊರಟ್ಟಿ, ಮಧುಗುಂಡಿ ಸೇರಿ 6 ಗ್ರಾಮಗಳಲ್ಲಿ ಅತಿವೃಷ್ಟಿಯಿಂದ ಭಾರೀ ಅನಾಹುತವಾಗಿದೆ.ಈ ಗ್ರಾಮಗಳನ್ನು ಸಂಪೂರ್ಣ ವಾಗಿ ಸ್ಥಳಾಂತರಿಸಬೇಕಿದೆ.
-ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next