Advertisement

ಕವಿಗಳು ಅಭಿವ್ಯಕ್ತಗೊಳಿಸುವ ಪದ್ಯ ಅರ್ಥಪೂರ್ಣ

04:16 PM Dec 02, 2018 | |

ಬಳ್ಳಾರಿ: ನಮ್ಮ ಭಾವನೆಗಳನ್ನು ಭಾಷೆಯ ಮೂಲಕ ಅರ್ಥಪೂರ್ಣವಾಗಿ ಅಭಿವ್ಯಕ್ತಪಡಿಸುವ ಮಾಧ್ಯಮವೇ ಕಾವ್ಯ ಪ್ರಕಾರ ಎಂದು ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಹೇಳಿದರು. ನಗರದ ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಕವಿಗಗಳು ಎಲ್ಲರೂ ಪದ್ಯ ರಚನಾಕಾರು ಆಗಿದ್ದಾರೆ. ಕಾವ್ಯ ಲೋಕದ ಇತಿಹಾಸವನ್ನು ನೋಡಿದಾಗ ಕವಿಗಳು ನುಡಿದು ಕಟ್ಟುವ ಪ್ರಕ್ರಿಯೆಯೆ ಸಾಹಿತ್ಯವಾಗಿದೆ. ಕವಿಗಳು ಅಭಿವ್ಯಕ್ತಿಗೊಳಿಸುವ ಪದ್ಯಗಳು ಭಾವಪೂರ್ಣ ಮತ್ತು ಅರ್ಥಪೂರ್ಣ ಪದಗಳಿಂದ ಕೂಡಿರುತ್ತದೆ ಎಂದರು.

ಕನ್ನಡ ಕಾವ್ಯ ಪರಂಪರೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಏಕಕಾಲದಲ್ಲಿ ಅಕ್ಷರ ವಂಚಿತ ಸಮುದಾಯಗಳು ತೆರೆದುಕೊಂಡಿದ್ದೆ ಕಾವ್ಯ ಜಗತ್ತು ಬೆಳೆಯಲು ಕಾರಣ. ಕಾವ್ಯಾಭ್ಯಾಸ ಮಾಡಲು ತಾಳ್ಮೆ ಬೇಕು. ಧ್ಯಾನಾಸಕ್ತರಾಗಿ ಅಧ್ಯಯನ ಮಾಡಿದರೆ ಮಾತ್ರ ಒಬ್ಬ ಉತ್ತಮ ಕಾವ್ಯಾ ಆಗಲು ಸಾಧ್ಯ. ಪಂಪ, ರನ್ನ ಸೇರಿದಂತೆ ಅವರ ಸಮಕಾಲೀನರು ಸಾರ್ವಕಾಲಿಕರು. ಎಲ್ಲ ಕವಿಗಳನ್ನು ಒಂದೇ ಮಾನದಂಡದಿಂದ ನೋಡಬಾರದು. ಕುವೆಂಪು ಒಬ್ಬ ದಾರ್ಶನಿಕ, ಪ್ರಗತಿಶೀಲ, ಕ್ರಾಂತಿಕಾರಿ ಬಂಡಾಯ ಕವಿಯಾಗಿದ್ದಾರೆ. ಯಾರೂ ದಲಿತ ಕವಿಯಾಗಲು ಸಾಧ್ಯವಿಲ್ಲ. ದಲಿತ ಪರ ಕಾಳಜಿ ಮಾಡಬಹುದು. ಅವರು ಕಂಡ ನೋವನ್ನು ಅವರೇ ವ¤ಕ್ತಪಡಿಸಿದಾಗ ಮಾತ್ರ ಅದು ಸಾಧ್ಯ ಎಂದು ಹೇಳಿದರು.

ಮೊದಲು ಮೋಹನ್‌ದಾಸ್‌ ಕರಮಚಂದಗಾಂಧಿಯಾಗಿದ್ದ ಗಾಂಧ, ಸತ್ಯಹರಿಶ್ಚಂದ್ರ ನಾಟಕದ ಪ್ರೇರಣೆಯಿಂದಾಗಿ ಗಾಂಧೀಜಿಯಾದರು. ಕಾವ್ಯ ಎಂದರೆ ಬಹಿರ್ವಾಣಿಯಲ್ಲ. ವಾಚನ ಮಾಡುವುದು ಕೇವಲ ವಾಣಿ ಆದರೆ, ಕಾವ್ಯ ಅಂತರ್ವಾಣಿ ಮತ್ತು ಆತ್ಮವಾಣಿಯಾಗಿ ಹೊರಮ್ಮಬೇಕು. ಇದರಲ್ಲಿ ಕವಿ ತಾನು ಕಂಡಭಾವನೆಗಳನ್ನು ಸತ್ವಯುತವಾಗಿ ಕಾವ್ಯದ ಮೂಲಕ ಹೊರಹಾಕಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, 21 ನೇ ಶತಮಾನದ ಕಾವ್ಯ ಎಲ್ಲ ಅಕ್ಷರ ವಂಚಿತ ಸಮುದಾಯಗಳು ಅಕ್ಷರಲೋಕಕ್ಕೆ ಪ್ರವೇಶ ಮಾಡುತ್ತಿರುವ ಸಂದರ್ಭ. ಅವರ ಸಾಹಿತ್ಯ ಕೃಷಿ ನೋಡಬಹುದು. ಕಾವ್ಯ ಪರಂಪರೆ ಸಮೃದ್ಧವಾಗಿದೆ. ಕಾವ್ಯ ಅಂತರಂಗದ ಪಿಸುಮಾತು. ಇದಕ್ಕೆ ಎಲ್ಲೆಗಳಿಲ್ಲ ಎಂದು ಹೇಳಿದರು. 

Advertisement

ಸಾಹಿತಿ ಎ. ವೃಷಭೇಂದ್ರ ಆಚಾರ್‌ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಕೂಡ್ಲಿಗಿಯ ಜಿ.ಟಿ. ಸಂಗಮ್‌, ಎನ್‌.ಎಂ. ವಾಮದೇವಯ್ಯ, ಯರ್ರಿಸ್ವಾಮಿ, ಹೊಸಪೇಟೆಯ ದಯಾನಂದ ಕಿನ್ನಾಳ, ಜಿ.ವಿ. ಸುಬ್ಬರಾವ್‌, ಕುರುಗೋಡಿನ ಎಂ.ಬಿ. ಹುಲಿಗೇಶ್‌, ಎಂ.ಎಲ್‌. ಮಂಗಳ, ಹಗರಿಬೊಮ್ಮನಹಳ್ಳಿಯ ನಾಗರಾಜ ತಂಬ್ರಹಳ್ಳಿ, ಶೈಲಾ ಪಿ. ಆಡೂರು ಶೆಟ್ಟರ್‌, ಹಡಗಲಿಯ ಪುಟ್ಟಪ್ಪ ತಂಬೂರಿ, ಹಾಲಪ್ಪ ಚಿಗಟೇರಿ, ಸಿರುಗುಪ್ಪದ ಬಿ. ಮಂಜಣ್ಣ, ಸಂಡೂರಿನ ವೀಣಾ ಮಹೇಶ್‌, ಕೊಟ್ಟೂರಿನ ಸಿದ್ದು ದೇವರಮನಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಿಸಿದರು. 

 ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಎ. ಸತೀಶ್‌ ಹಿರೇಮಠ್…, ಎನ್‌.ಡಿ. ವೆಂಕಮ್ಮ, ಚಂದ್ರಶೇಖರ ಆಚಾರ್‌ ಮತ್ತಿತರರು ಇದ್ದರು. ಕೆ. ದೊಡ್ಡಬಸವ ಗವಾಯಿಗಳಿಂದ ನಡೆದ ಸಂಗೀತ ಕಾರ್ಯಕ್ರಮ ಗಮನಸೆಳೆಯಿತು. ಅಮಾತಿ ಬಸವರಾಜ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next