Advertisement

ಗ್ರಾಮೀಣ ಕಲೆ ಜೀವನದ ಮೌಲ್ಯ: ಶ್ರೀ

12:39 PM Oct 18, 2021 | Team Udayavani |

ಸೇಡಂ: ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಪೌರಾಣಿಕ ಕಥೆಗಳ ಮೂಲಕ ಪ್ರಚಾರಗೊಳಿಸುವ ಗಂಡು ಕಲೆ ಬಯಲಾಟ. ಬಯಲಾಟ ಗ್ರಾಮೀಣ ಕಲೆಗಳ ಜೀವನದ ಮೌಲ್ಯಗಳನ್ನು ಎತ್ತಿ ಸಾರುತ್ತದೆ ಎಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ ನುಡಿದರು.

Advertisement

ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕಲಬುರಗಿ ರಂಗಾಯಣ ಕಲಾವಿದರು ಅಭಿನಯಿಸಿದ ರಾಮ ರಾವಣ ಯುದ್ಧ ಬಯಲಾಟ ಪ್ರದರ್ಶನದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಬಯಲಾಟ ಪ್ರದರ್ಶಿಸುವ ಪರಂಪರೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮನೋರಂಜನೆ ಜತೆಗೆ ಭಾರತೀಯ ಸಂಸ್ಕೃತಿಯನ್ನು ಬಯಲಾಟ ಹೊಂದಿದೆ. ಇದರಿಂದ ನೂರಾರು ಬಡ ಕಲಾವಿದರ ಬಾಳಿಗೂ ಬೆಳಕು ದೊರೆಯುವಂತಾಗಿದೆ ಎಂದರು.

ಇದೇ ವೇಳೆ ನಡೆದ ರಾಮ-ರಾವಣ ಯುದ್ಧ ಬಯಲಾಟ ಹಲವಾರು ವೈಶಿಷ್ಟ್ಯ ಒಳಗೊಂಡಿತ್ತು. ಕಲಾವಿದರ ಅತ್ಯದ್ಭುತ ನಟನಾ ಕಲೆ ವೇದಿಕೆಯಲ್ಲಿ ಅನಾವರಣವಾಯಿತು. ರುದ್ರರಮಣೀಯ ವೇಷಭೂಷಣ ನೆರೆದವರ ಗಮನ ಸೆಳೆದವು. ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ವಿಕಾಸ ಅಕಾಡೆಮಿಯ ಪಿ. ಭೀಮರೆಡ್ಡಿ, ಜಿಲ್ಲಾ ಸಂಯೋಜಕ ಶಂಕರ ಸುಲೇಗಾಂವ, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಡಾ| ಸದಾನಂದ ಬೂದಿ, ಜಗನ್ನಾಥ ತರ್ನಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next