Advertisement
ನಾನು ಅವರ ಪ್ರಭಾವದಲ್ಲೇ ಇದ್ದೇನೆ ಮಾತ್ರವಲ್ಲದೆ, ಅದೆಷ್ಟೋ ವಿಷಯಗಳ ಬಗ್ಗೆ ಚಕಿತನಾಗಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ನನಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನ ನೀಡಿ ನಾಡಪ್ರಭುಗಳ ವಿಷಯದಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವ ಹಿಸಬೇಕೆಂದು ಸೂಚಿಸಿದ್ದನ್ನು ಶಿರಸಾವಹಿಸಿ ಮಾಡುತ್ತಿದ್ದೇನೆ. ಮೂಲತಃ ಪ್ರಭುಗಳ ವೀರಸಮಾಧಿ ಯುಳ್ಳ ಕೆಂಪಾಪುರಕ್ಕೆ ಅನತಿದೂರದ ಗ್ರಾಮದಲ್ಲಿ ಹುಟ್ಟಿದ ನಾನು ಬಾಲ್ಯದಿಂದಲೇ ಪ್ರಭುಗಳ ಕಥೆಗಳನ್ನು, ಅವರ ಸಾಹಸಗಾಥೆಗಳನ್ನು ಕೇಳುತ್ತ ಬೆಳೆದವನು.
Related Articles
Advertisement
ಅಭಿ ವೃದ್ಧಿಯ ಅಜೆಂಡಾದೊಂದಿಗೆ ಸಾಗಿದ ಅವರು ಓರ್ವ ಸ್ವತಂತ್ರ ದೊರೆ ಅಥವಾ ಚಕ್ರವರ್ತಿಯೂ ಮಾಡಲು ಸಾಧ್ಯವಾಗದ್ದನ್ನು ನಮಗಾಗಿ ಮಾಡಿಟ್ಟುಹೋಗಿದ್ದಾರೆ. 59 ವರ್ಷಗಳ ಅವರ ಅವಿಚ್ಛಿನ್ನ ಆಡಳಿತದಲ್ಲಿ ತಲೆ ತಲೆಮಾರು ಮರೆಯದ ಅದೆಷ್ಟೋ ಮೈಲುಗಲ್ಲುಗಳು ಸ್ಥಾಪನೆಯಾಗಿದ್ದವು. ಇವತ್ತಿನ ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ನಾಯಕನೂ ಕೆಂಪೇ ಗೌಡರಿಂದ ಕಲಿಯಲೇಬೇಕಾದ್ದು ಬಹಳಷ್ಟಿದೆ.
ಕೆಂಪೇಗೌಡ ಬೆಂಗಳೂರು ಮತ್ತದರ ಸುತ್ತಮುತ್ತಲಿನ ಪ್ರದೇಶವನ್ನು ಪ್ರಗತಿಪಥದತ್ತ ಕೊಂಡೊಯ್ದರು. ಅತ್ತ ರಾಜಕೀಯ ಮೌಲ್ಯಗಳಿಗೆ ಬೆಲೆ ಕೊಡುತ್ತಲೇ ಮತ್ತೂಂ ದೆಡೆ ತಮ್ಮ ಪರಿಪಾಲನೆಯ ನೆಲದ ಅಭಿವೃದ್ಧಿಗೆ ಒತ್ತು ನೀಡಿದರು. ಹೀಗಾಗಿ ರಾಜಕೀಯವಾಗಿಯೂ ಕೆಂಪೇ ಗೌಡರು ವರ್ತಮಾನದ ಪ್ರತಿಯೊಬ್ಬ ನಾಯಕನಿಗೂ ಮಾರ್ಗದರ್ಶಿ ಮತ್ತು ಆದರ್ಶ. ರಾಜಕೀಯ ವಿದ್ಯಾರ್ಥಿಗಳು ಈ ಹಿನ್ನೆಲೆಯಲ್ಲಿ ಗೌಡರನ್ನು ಅಧ್ಯಯನ ಮಾಡಬೇಕಿದೆ.
ಹೊಸ ತಲೆಮಾರಿಗೆ ಹೇಳಬೇಕು: ನನ್ನ ಬಹು ಆಸೆ ಎಂದರೆ ಕೆಂಪೇಗೌಡರನ್ನು ಈಗಿನ ಹಾಗೂ ನಂತರದ ತಲೆಮಾರಿನ ಯುವಜನತೆಗೆ ಪರಿಚಯಿಸಬೇಕು. ಅಂತಿಮವಾಗಿ ನನ್ನ ಆಸೆ ಇಷ್ಟೇ. ಮುಂದಿನ ತಲೆಮಾರುಗಳು ಕೆಂಪೇಗೌಡರ ಬಗ್ಗೆ ಮಾತನಾಡಬೇಕು. ನವಯುಗದ ಯುವಕ ಯುವತಿಯರಿಗೆ, ದೇಶ ವಿದೇಶಗಳ ಜನರು ನಾಡಪ್ರಭುಗಳ ಬಗ್ಗೆ ತಿಳಿಯಬೇಕು. ಅವರ ಅಭಿವೃದ್ಧಿಯ ಮಾದರಿ, ಜನಪರ ಆಡಳಿತ, ರಾಜಕೀಯ ಮೌಲ್ಯಗಳು, ವ್ಯಾಪಾರ- ವಾಣಿಜ್ಯ ಚಟುವಟಿಕೆ, ಪರಿಸರ ಪ್ರೀತಿ ಇತ್ಯಾದಿಗಳು ಚಿರಸ್ಥಾಯಿಯಾಗಿ ಉಳಿಯಬೇಕು. ಇಷ್ಟು ಸಾಕಾರವಾದರೆ ಅದಕ್ಕಿಂತ ಧನ್ಯತೆ ಬೇರೆನಿದೆ?
* ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಉಪ ಮುಖ್ಯಮಂತ್ರಿ, ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು