Advertisement

ಸಭೆ ಬಹಿಷ್ಕರಿಸಿದ ವಾಲ್ಮೀಕಿ ಜನಾಂಗ

02:11 PM Oct 05, 2019 | Team Udayavani |

ಬಾದಾಮಿ: ಪ್ರತಿವರ್ಷವೂ ವಾಲ್ಮೀಕಿ ಜಯಂತಿ ಅಂಗವಾಗಿ ನಡೆಸಲಾಗುವ ಸಭೆಗೆ ಎಲ್ಲ ಇಲಾಖಾಧಿಕಾರಿಗಳು ಹಾಜರಿರಬೇಕು. ಆದರೆ ಇಲ್ಲಿ ಅಧಿಕಾರಿಗಳಿಗೆ ಹೇಳುವರು-ಕೇಳುವರು ಯಾರೂ ಇಲ್ಲದಂತಾಗಿ ವಾಲ್ಮೀಕಿ ಜನಾಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಮಾಜದ ಪ್ರಮುಖರು ಆರೋಪಿಸಿ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟಿಸಿದರು.

Advertisement

ಅ. 13 ರಂದು ನಡೆಸಬೇಕಿದ್ದ ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಹಾಗೂ ಸಮಾಜದಲ್ಲಿನ ಕುಂದು ಕೊರತೆ ಸಭೆಗೆ ಅಧಿಕಾರಿಗಳ ಗೈರು ಹಾಜರಿಗೆ ಆಕ್ರೋಶಗೊಂಡು ಪ್ರತಿಭಟನೆಗೆ ಮುಂದಾದರು.

ಕಳೆದ ಮೂರು ವರ್ಷಗಳಿಂದಲೂ ಸರಿಯಾಗಿ ಸಭೆ ಆಯೋಜಿಸದೇ ಬೇಕಾಬಿಟ್ಟಿ ಕರೆದು ತುರ್ತಾಗಿ ಮುಗಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಇದರಿಂದ ಸಮುದಾಯದ ಜನರ ಕುಂದು ಕೊರತೆ ಆಲಿಸುವ ಹಾಗೂ ಸರಕಾರದಿಂದ ಬರುವ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸೇರಿದಂತೆ ಅಗತ್ಯ ಅನುದಾನದ ಬಳಕೆಮಾಹಿತಿಯೂ ತಿಳಿಸದೇ ತಮ್ಮಿಷ್ಟದಂತೆ ನಡೆಯುತ್ತಿದ್ದಾರೆ. ಸಮುದಾಯದ ಜನರಿಗೆ ಮೊದಲು ಕುಂದು ಕೊರತೆ ಯೋಜನೆಗಳ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ತಹಶೀಲ್ದಾರ್‌ ಪ್ರತಿಭಟನೆಗೆ ಮುಂದಾದ ಮುಖಂಡರಿಗೆ ಅ. 9 ರಂದು ನಡೆಸುವ ಭರವಸೆ ನೀಡಿದರು.

ಸಿದ್ದಣ್ಣ ತಳವಾರ, ಪ್ರಕಾಶ ನಾಯ್ಕರ್‌, ಕನಕಪ್ಪ ಪರಸನ್ನವರ, ಹುಚ್ಚಪ್ಪ ಹದ್ದನ್ನವರ, ರಮೇಶ ಗೌಡರ, ಚಿದಾನಂದ ತಳವಾರ, ಗುಡದೇಶ ರಂಗನ್ನವರ, ಮಾರುತಿ ತಳವಾರ, ಮಾರುತಿ ವಾಲಿಕಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next