Advertisement

ಬ್ರಹ್ಮಾವರದ ಸಾಧಕಿ ಗೌರಿ ಕೊರಗ ಅವರಿಗೆ ವಾಲ್ಮೀಕಿ ಪ್ರಶಸ್ತಿ

01:43 AM Oct 20, 2021 | Team Udayavani |

ಬ್ರಹ್ಮಾವರ/ಬೆಂಗಳೂರು: ರಾಜ್ಯ ಸರಕಾರ ನೀಡುವ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಘೋಷಣೆಯಾಗಿದೆ.

Advertisement

ಕೊರಗ ಜನಾಂಗದ ಅಭ್ಯುದಯಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ, ಚಳವಳಿಗಳ ಮೂಲಕ ಸರಕಾರದ ಗಮನ ಸೆಳೆದು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ಕೆಂಜೂರು ಕಲ್ಲುಗುಡ್ಡೆಯ ಗೌರಿ ಕೊರಗ ಅವರಿಗೆ 2020ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಯನ್ನು ಬುಧವಾರ ಪ್ರದಾನ ಮಾಡಲಾಗುತ್ತದೆ.

ಅ. 20ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 20 ಗ್ರಾಂ ಚಿನ್ನದ ಪದಕ ಮತ್ತು 5 ಲಕ್ಷ ರೂ. ಒಳಗೊಂಡಿದೆ.

2000ರಲ್ಲಿ ಸಮುದಾಯದವರಿಗೆ ಭೂಮಿ ಮಂಜೂರಾತಿಗಾಗಿ ಭೂಮಿ ಚಳವಳಿ ಪ್ರಾರಂಭಿಸಿದ್ದರು. ಅಜಲು ಪದ್ಧತಿ ನಿರ್ಮೂಲನೆಗಾಗಿ ಅಜಲು ಚಳವಳಿ ಹಮ್ಮಿಕೊಂಡಿ ದ್ದರು. ಮಹಿಳಾ ಸಶಕ್ತೀಕರಣಕ್ಕಾಗಿ ಸ್ವ ಸಹಾಯ ಸಂಘಟನೆ ಪ್ರಾರಂಭಿಸಿದರು. ಸಮುದಾಯದ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದಂತೆ ಶ್ರಮಿಸಿದ್ದರು.

ಕೊರಗ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಅವರ ಆರೋಗ್ಯ ಸುಧಾರಣೆಗೆ ಸರಕಾರದಿಂದ ಪೌಷ್ಟಿಕಾಂಶದ ಆಹಾರ ದೊರೆಯುವಲ್ಲಿ ಶ್ರಮಿಸಿದ್ದರು.

Advertisement

ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಕರ್ನಾಟಕ, ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟಅಧ್ಯಕ್ಷರಾಗಿ, ರಾಜ್ಯ ಬುಡಕಟ್ಟು ಅರಣ್ಯ ಕಾಯ್ದೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 38ನೇ ಕಳ್ತೂರು ಗ್ರಾ.ಪಂ. ಸದಸ್ಯರಾಗಿದ್ದರು. ಗೌರಿ ಕೊರಗ ತಮಗೆ ಮಂಜೂರಾದ 1ಎಕ್ರೆ ಭೂಮಿಯಲ್ಲಿ ಅಡಿಕೆ, ತೆಂಗು, ಬಾಳೆ, ಗೇರು ಕೃಷಿ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next