Advertisement

ವಚನ ವಿಜಯೋತ್ಸವ ಪ್ರಚಾರ ರಥಕ್ಕೆ ಚಾಲನೆ

08:34 AM Jan 25, 2019 | Team Udayavani |

ಬೀದರ: ನಗರದ ಲಿಂಗಾಯತ ಮಹಾಮಠ, ಬಸವ ಸೇವಾ ಪ್ರತಿಷ್ಠಾನ ವತಿಯಿಂದ ಫೆ.17, 18 ಮತ್ತು 19ರಂದು ವಚನ ವಿಜಯೋತ್ಸವ ನಡೆಯಲಿರುವ ನಿಮಿತ್ತ ಬಸವ ಜ್ಯೋತಿ ಪ್ರಚಾರ ಯಾತ್ರೆಗೆ ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಬ್ಟಾಳೆ ಚಾಲನೆ ನೀಡಿದರು.

Advertisement

ಈ ವೇಳೆ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ವಚನ ವಿಜಯೋತ್ಸವ ನಿಮಿತ್ತ ಒಟ್ಟು ಐದು ಬಸವ ಜ್ಯೋತಿ ಪ್ರಚಾರ ರಥಗಳ ಏರ್ಪಾಡು ಮಾಡಲಾಗಿದ್ದು, ಜಿಲ್ಲೆಯ ಐದು ತಾಲೂಕುಗಳ ಪ್ರತಿಯೊಂದು ಗ್ರಾಮಗಳಿಗೆ ರಥ ಯಾತ್ರೆ ಸಂಚರಿಸಿ ಅಲ್ಲಿನ ಜನರಿಗೆ ಕಾರ್ಯಕ್ರಮದ ವಿವರಣೆ ನೀಡುವ ಕಾರ್ಯ ಮಾಡಲಿವೆ ಎಂದರು.

ಔರಾದ(ಬಿ), ಭಾಲ್ಕಿ, ಬಸವಕಲ್ಯಾಣ, ಬೀದರ ಮತ್ತು ಹುಮನಾಬಾದ ತಾಲೂಕುಗಳ ಪ್ರಚಾರ ಯಾತ್ರೆಯ ನೇತೃತ್ವವನ್ನು ಚನ್ನಬಸವಾನಂದ ಶರಣರು ಹಿರೆಹೊನ್ನಾಳ್ಳಿ, ಪ್ರಭುದೇವರು, ಡಾ|ಗಂಗಾಂಬಿಕೆ ಅಕ್ಕ, ಸುವರ್ಣಾ ಶರಣಪ್ಪ ಚಿಮಕೊಡೆ, ಸಿದ್ರಾಮಪ್ಪ ಕಪಲಾಪುರೆ, ಚನ್ನಬಸವಪ್ಪ ವಡ್ಡನಕೇರಿ, ಮಡಿವಾಳಯ್ಯು ಸ್ವಾಮಿ, ಬಸವರಾಜ ರುದ್ರವಾಡಿ ವಹಿಸಲ್ಲಿದ್ದಾರೆ ಎಂದು ತಿಳಿಸಿದರು.

ಕಲ್ಯಾಣ ಕ್ರಾಂತಿಯ ನಂತರ ಪಟ್ಟಭದ್ರಹಿತಾಶಕ್ತಿಗಳಿಂದ ವಚನ ಸಾಹಿತ್ಯ ಸುಡಲ್ಪಟ್ಟಿತ್ತು. ಅಂದು ಶರಣರು ಬೆಳಗಿಸಿದ ಜ್ಯೋತಿ ನಂದಿತ್ತೆಂದು ನೊಂದುಕೊಂಡಿದ್ದರು. ಆ ಬಸವ ಜ್ಯೋತಿ ಮತ್ತೆ ನಾಡೆಲ್ಲ ಬೆಳಗಲೆಂಬ ಸಂಕೇತದಿಂದ ಪ್ರತಿ ಗ್ರಾಮಗಳಲ್ಲಿಯೂ ಬಸವ ಜ್ಯೋತಿ ಹೊತ್ತಿಸಿ, ವಚನ-ಪ್ರವಚನ ನೀಡಿ ಅರಿವು ಮೂಡಿಸಲಾಗುವುದು. ವಚನ ವಿಜಯೋತ್ಸವದ ಮೂರನೇ ದಿನ ವಚನ ಸಾಹಿತ್ಯದ ಮೆರವಣಿಗೆ ಸಂದರ್ಭದಲ್ಲಿ ಆ ಎಲ್ಲಾ ಗ್ರಾಮಗಳಿಂದ ಬಸವ ಜ್ಯೋತಿ ಯಾತ್ರೆಯಲ್ಲಿ ಹೊತ್ತಿಸಿದ ಜ್ಯೋತಿಯನ್ನೆ ಆಯಾ ಗ್ರಾಮಸ್ಥರು ಭಕ್ತಿ ಭಾವದಿಂದ ಹೊತ್ತು ತಂದು ಮೆರವಣಿಗೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಬಸವ ಜ್ಯೋತಿ ಸಂಚರಿಸುವಾಗ ಭಕ್ತಿ-ಗೌರವಗಳಿಂದ ಆಯಾ ಗ್ರಾಮದವರು ಸ್ವಾಗತಿಸಬೇಕು. ಬಸವಜ್ಯೋತಿ ಯಾತ್ರೆಯ ರಥಗಳು ಕಲಬುರಗಿ ಜಿಲ್ಲೆ ಮತ್ತು ನೆರೆಯ ರಾಜ್ಯಗಳಾದ ತೆಲಂಗಾಣ, ಮಹಾರಾಷ್ಟ್ರಗಳಲ್ಲೂ ಸಂಚರಿಸಲಿವೆ ಎಂದರು. ಡಾ| ಗಂಗಾಂಬಿಕೆ ಮಾತನಾಡಿ, ಶರಣರ ಬಲಿದಾನದ ಸ್ಮರಣೆಗಾಗಿ ಈ ಕಾರ್ಯಕ್ರಮವನ್ನು ಪ್ರತಿವರ್ಷ ಏರ್ಪಡಿಸಲಾಗುತ್ತಿದೆ ಎಂದರು.

Advertisement

ಸಿ.ಎಸ್‌. ಪಾಟೀಲ, ವಿಶ್ವನಾಥ ಕಾಜಿ, ರಾಜಕುಮಾರ ಪಾಟೀಲ, ಸಿ.ಎಸ್‌. ಗಣಾಚಾರಿ, ಅನೀಲ ದೇಶಮುಖ, ಗಿರೀಶ ಖೇಣಿ, ಮಾಣಿಕಪ್ಪ ಗೋರನಾಳೆ, ವಿವೇಕಾನಂದ ಧನ್ನೂರ, ಹಾವಯ್ಯ ಸ್ವಾಮಿ, ಮಲ್ಲಿಕಾರ್ಜುನ ಔರಾದೆ, ಅಮೃತ ಚಿಮಕೋಡ, ಶಿವರಾಜ ಮದಕಟ್ಟಿ, ರಾಜೇಂದ್ರಕುಮಾರ ಗಂದಗೆ, ಜಗನ್ನಾಥ ರಟಕಲೆ, ಬಸವರಾಜ ಚಾಂಗಲೇರಾ, ಅಶೋಕ ಎಲಿ, ಡಾ|ವಿಜಯಶ್ರೀ, ಡಾ| ಸುಭಾಷ ಬಶೆಟ್ಟಿ, ಶಾಂತಾ ಖಂಡ್ರೆ, ನೀಲಮ್ಮ ರೂಗನ್‌ ಮುಂತಾದ ಗಣ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next