Advertisement

ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

06:52 PM Dec 18, 2020 | Suhan S |

ಚಿತ್ರದುರ್ಗ: ನಗರದ ಹೊಳಲ್ಕೆರ ರಸ್ತೆ ಮತ್ತಿತರೆಡೆ ರಸ್ತೆ ಅಗಲೀಕರಣ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಪಾದಚಾರಿಗಳು ಹಾಗೂ ವಾಹನಸವಾರರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಗುರುವಾರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತಿಭಟಿಸಿದರು.

Advertisement

ಸ್ಥಳಕ್ಕೆ ಆಗಮಿಸಿದ ಕೋಟೆ ಠಾಣೆ ಪೊಲೀಸರು ಪ್ರತಿಭಟನಾಕಾರರನ್ನು ಬಂ ಧಿಸಿ ಬಿಡುಗಡೆ ಮಾಡಿದರು. ರಸ್ತೆಯಒಂದು ಬದಿಯನ್ನು ಅಗೆದು ಯುಜಿಡಿಕಾಮಗಾರಿ ಮತ್ತು ರಸ್ತೆ ಅಗಲೀಕರಣದಕೆಲಸ ಮೂರ್‍ನಾಲ್ಕು ತಿಂಗಳಿಂದನಡೆಯುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಜೀವ ಭಯದಿಂದ ಓಡಾಡುವಂತಾಗಿದೆ. ರಸ್ತೆಮಧ್ಯದಲ್ಲೇ ಯುಜಿಡಿ ಗುಂಡಿಗಳು ಅಲ್ಲಲ್ಲಿ ತೆರೆದುಕೊಂಡಿದ್ದು, ಸುತ್ತಲೂ ಕಲ್ಲುಗಳನ್ನಿಟ್ಟು ಕೈ ತೊಳೆದುಕೊಳ್ಳಲಾಗಿದೆ. ಇದರಿಂದ ನಾಗರಿಕರ ಜೀವಕ್ಕೆ ತೊಂದರೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ತುರುವನೂರು ರಸ್ತೆ, ಆರ್‌ಟಿಒ ಕಚೇರಿ ರಸ್ತೆ, ತರಾಸು ರಂಗಮಂದಿರದ ಬಳಿ ಯುಜಿಡಿ ಕಾಮಗಾರಿ ಕಳಪೆಯಾಗಿದೆ. ಇದನ್ನು ಸರಿಪಡಿಸಿ ರಸ್ತೆ ಕಾಮಗಾರಿಯಿಂದಆಗುತ್ತಿರುವ ಧೂಳಿನ ಸಮಸ್ಯೆಗೆ ಆದಷ್ಟಬೇಗ ಇತಿಶ್ರೀ ಹಾಡಬೇಕು ಎಂದು  ಒತ್ತಾಯಿಸಿದರು.

ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್‌, ನಗರಾಧ್ಯಕ್ಷಎಂ. ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಗೌರಣ್ಣ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ್‌, ನಗರ ಉಪಾಧ್ಯಕ್ಷಓಬಳೇಶ್‌ ಸೇರಿದಂತೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next