Advertisement
ಲಿಗಾಡೆಯವರು ಮಹಾರಾಷ್ಟ್ರದ ಸೊಲ್ಲಾಪೂರದ ಶ್ರೀಮಂತ ಮನೆತನವಾದ ಅರಮನೆಯಂಥ ಇಂದ್ರಭುವನದಲ್ಲಿ 1912 ಜೂ.23ರಂದು ಜನಿಸಿದ್ದರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ್ದ ಈ ಧೀಮಂತ ಮಹಿಳೆ ಶಿಕ್ಷಣ ಮತ್ತುಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನ ಸೊಲ್ಲಾಪೂರ ಮತ್ತು ಇತರೆ ಕನ್ನಡ ಭಾಷಿಕರ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕು ಎಂದು ಸಾಕಷ್ಟು ಪ್ರಯತ್ನ ನಡೆಸಿದವರು.
Related Articles
Advertisement
ಆದರೆ ಈವರೆಗೆ ಸರಕಾರ ಮತ್ತು ಜನಪ್ರತಿನಿಧಿಗಳು ಸಮಾಧಿಸ್ಥಳದತ್ತ ಗಮನ ಹರಿಸಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ಇದರಿಂದ ಪ್ರವಾಸಿ ತಾಣವಾಗಬೇಕಾಗಿದ್ದ ಸಮಾಧಿಸ್ಥಳದಲ್ಲಿ ಗಿಟಗಳು ಬೆಳೆದು ನಿಂತಿವೆ. ಭಕ್ತಿ-ಭವನ ಹಿಂದಿನ ಭಾಗ ಶಿಥಿಲಾವಸ್ಥೆಗೆ ತಲುಪಿದೆ. ಸ್ಥಳಕ್ಕೆ ಭೇಟಿ ನೀಡಿದರೆ, ಲಿಗಾಡೆತಾಯಿ ಸಮಾಧಿಇದೇನಾ ಎನ್ನುವ ಹಂತಕ್ಕೆ ತಲುಪಿದೆ. ಅಲ್ಲಿ ಡಾ| ಲಿಗಾಡೆತಾಯಿ ಅವರನ್ನು ನೆನಪಿಸುವಂತಹ ಯಾವುದೇ ಕುರುಹುಗಳು ಇಲ್ಲ. ಹೀಗೆ ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿಯಾಬೇಕಾದ ಡಾ| ಜಗದೇವಿ ಲಿಗಾಡೆ ತಾಯಿ ಸಮಾ ಸಿದ್ಧಶೈಲ ನಿರ್ಲಕ್ಷಕ್ಕೆ ಒಳಗಾಗಿರುವುದು ವಿಷಾದನೀಯ ಎನ್ನಬಹುದು.
ಡಾ| ಜಗದೇವಿತಾಯಿ ಲಿಗಾಡೆ ಸಮಾಧಿ ಸ್ಥಳ ಸಿದ್ಧಶೈಲದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು. ಮತ್ತು ಗ್ರಂಥಾಲಯಅಥವಾ ವಸ್ತು ಸಂಗ್ರಾಲಯ ನಿರ್ಮಿಸುವ ಮೂಲಕ ಇವರ ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ಮಾದರಿ ಆಗುವಂತೆ ಮಾಡಬೇಕು. ದೇವೇಂದ್ರ ಬರಗಾಲೆ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಅಧ್ಯಕ್ಷ ಡಾ| ಜಯದೇವಿತಾಯಿ ಲಿಗಾಡೆ ಕೃತಿಗಳು ಸಂಪುಟವಾಗಿ ಪುನಃ ಮುದ್ರಣವಾಗಬೇಕು. ಹಾಗೂ ಸಮಾಧಿಸಿದ್ಧಶೈಲ ಸಂರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಸರಕಾರ ವಹಿಸಿಕೊಳ್ಳಬೇಕು. ಕನ್ನಡದ ವಿಮರ್ಶಕರು ಲಿಗಾಡೆ ಅವರ ಸಾಹಿತ್ಯ ಕುರಿತು ಗಂಭೀರ ಚರ್ಚೆ ಮಾಡಬೇಕು.
ಡಾ. ಭೀಮಾಶಂಕರ ಬಿರಾದಾರ್ ವೀರಾರೆಡ್ಡಿ ಆರ್.ಎಸ್.