Advertisement

ಯು.ಕೆ.ಯಲ್ಲಿ ಹಾರುವ ಕಾರುಗಳ ಏರ್‌ಪೋರ್ಟ್‌

09:44 PM May 03, 2022 | Team Udayavani |

ಲಂಡನ್‌: ಜಗತ್ತಿನ ಸಂಚಾರ ಕ್ಷೇತ್ರದಲ್ಲಿ ಆಗಾಗ ಹೊಸತನ ಮತ್ತು ವಿನೂತ ವಿಚಾರಗಳು ಬೆಳಕಿಗೆ ಬರುತ್ತಿವೆ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಫ್ಲೈಯಿಂಗ್‌ ಟ್ಯಾಕ್ಸಿ (ಹಾರುವ ಕಾರುಗಳು)ಗಳಿಗಾಗಿ ಮತ್ತು ಡ್ರೋನ್‌ಗಳಿಗಾಗಿ ವಿಶೇಷವಾಗಿರುವ ನಿಲ್ದಾಣ ಸ್ಥಾಪಿಸಲಾಗಿದೆ.

Advertisement

ಯು.ಕೆ.ಯ ಕೊವೆಂಟ್ರಿ ಎಂಬ ನಗರದ ಸ್ಥಳೀಯ ಆಡಳಿತ ವ್ಯವಸ್ಥೆ ಮತ್ತು ಏರ್‌-ಒನ್‌ (Air-One) ಎಂಬ ಸ್ಟಾರ್ಟಪ್‌ ಜತೆಗೂಡಿ ಇಂಥ ಒಂದು ವಿಶೇಷವಾಗಿರುವ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿವೆ.

“ವರ್ಟಿಪೋರ್ಟ್‌’ ಎಂದು ಕರೆಯಲಾಗುವ ಈ ನಿಲ್ದಾಣದಲ್ಲಿ ಹಾರುವ ಕಾರುಗಳು ಮತ್ತು ವಾಣಿಜ್ಯಿಕ ಡ್ರೋನ್‌ಗಳ ಟೇಕಾಫ್ ಮತ್ತು ಲ್ಯಾಂಡಿಂಗ್‌ಗೆ ವ್ಯವಸ್ಥೆ ಇರುತ್ತದೆ. ಒಂದು ಕಾರು ನಿಲ್ಲುವ ಜಾಗವನ್ನು ಹಾರುವ ಕಾರುಗಳು ಅಥವಾ ಡ್ರೋನ್‌ಗಳಿಗಾಗಿ ವ್ಯವಸ್ಥೆ ಮಾಡಲಾಗಿರುತ್ತದೆ.

ಸಂಶೋಧನೆಯ ಹಂತದಲ್ಲಿ:
ಹಲವು ದೇಶಗಳಲ್ಲಿ ಹಾರುವ ಕಾರುಗಳ ವಾಣಿಜ್ಯಿಕ ಬಳಕೆಗೆ ಇನ್ನೂ ಅನುಮತಿ ದೊರಕಿಲ್ಲ ಮತ್ತು ಅದರ ಬಳಕೆ ಇನ್ನೂ ಸಂಶೋಧನೆ ಮತ್ತು ಪರೀಕ್ಷೆಯ ವಿವಿಧ ಹಂತಗಳಲ್ಲಿವೆ. ಇದರ ಹೊರತಾಗಿಯೂ ಕಾರು ತಯಾರಕ ಕಂಪನಿ ಹ್ಯುಂಡೈನ “ಸೂಪರ್‌ನಾಲ್‌’ (Supernal) ಎಂಬ ಸಂಸ್ಥೆ 2028ರ ಒಳಗಾಗಿ ಒಂದು ಕುಟುಂಬದ ಸದಸ್ಯರು ಪ್ರಯಾಣ ಮಾಡುವಂಥ ಹಾರುವ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿಯನ್ನು ಹಾಕಿಕೊಂಡಿದೆ.

ಸದ್ಯ ಇಲ್ಲ:
ಕೊವೆಂಟ್ರಿ ನಗರದಲ್ಲಿ ಸ್ಥಾಪನೆಯಾಗಿರುವ ವೆರ್ಟಿಪೋರ್ಟ್‌ನಲ್ಲಿ ಫ್ಲೈಯಿಂಗ್‌ ಕಾರುಗಳು ಅಥವಾ ಡ್ರೋನ್‌ಗಳಿಲ್ಲ. ಏರ್‌ ಒನ್‌ನ ಸಂಸ್ಥಾಪಕ ರಿಕಿ ಸಂಧು ಪ್ರಕಾರ “ನಾಳೆಯ ಬೆಳವಣಿಗೆಗೆ ಈಗಲೇ ಸಿದ್ಧತೆ. ಅದಕ್ಕೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಈಗಿನಿಂದಲೇ ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next