Advertisement

ಇಬ್ಬರು ಗುರುಗಳು ಜೀವನದ ಕಣ್ಣುಗಳಂತೆ

11:26 PM Sep 04, 2019 | Team Udayavani |

ಕ್ರೀಡೆಯಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಹಂಬಲ ಇತ್ತು. ಆದರೆ ಯೋಗದಲ್ಲಿ ಈ ಹಂತ ತಲುಪುತ್ತೇನೆ ಎಂದು ಕನಸು ಇರಲಿಲ್ಲ. ಇದಕ್ಕೆ ಕಾರಣ ನನ್ನ ಜೀವನದ ಎರಡು ಕಣ್ಣುಗಳಾದ ಪ್ರಾಥಮಿಕ ಶಾಲಾ ಶಿಕ್ಷಕ ಎಂ.ವಿ. ಲಂಬಾಣಿ ಮತ್ತು ಮರವಂತೆ ಪ್ರೌಢಶಾಲೆ ಹಿಂದಿ ಶಿಕ್ಷಕಿ ಯಶೋದಾ- ವಿಯೆಟ್ನಾಂನಲ್ಲಿ ಯೋಗ ಶಿಕ್ಷಕರಾಗಿರುವ ಕುಶ ಪೂಜಾರಿ ಹೇಳುತ್ತಾರೆ.

Advertisement

ಕುಶ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಲಂಬಾಣಿ ಅವರು ಗುರುತಿಸಿ ಯೋಗ ತರಬೇತಿ ನೀಡಿದರು. ಆಗ ಕುಶರಿಗೆ ಏನೂ ಸಾಧಿಸಲಾಗಲಿಲ್ಲ. ಪ್ರೌಢಶಿಕ್ಷಣದ ಹಂತದಲ್ಲಿ ಯಶೋದಾ ಮೇಡಂ ಮತ್ತಷ್ಟು ಸ್ಫೂರ್ತಿ ತುಂಬಿದರು. ಇನ್ನಷ್ಟು ತರಬೇತಿ ನೀಡಿದರು.

‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಇವರಿಬ್ಬರು ನನ್ನ ಜೀವನದ ತಳಪಾಯವನ್ನು ಗಟ್ಟಿ ಮಾಡಿದ ಕಾರಣ ನಾನಿಂದು ವಿದೇಶದಲ್ಲಿ ಯೋಗ ತರಬೇತುದಾರನಾಗಿದ್ದೇನೆ. ಯೋಗ ಎಂದರೇನು, ಹೇಗೆ ಅಭ್ಯಸಿಸಬೇಕು, ಇದನ್ನು ಅಕಾಡೆಮಿಕ್‌ ಆಗಿ ಹೇಗೆ ಸ್ವೀಕರಿಸಬೇಕು ಎಂದು ತಿಳಿ ಹೇಳಿದವರು ಇವರೇ’ ಎಂದು ಕುಶ ಪೂಜಾರಿ ಸ್ಮರಿಸಿಕೊಳ್ಳುತ್ತಾರೆ.

ಕುಶ ಪೂಜಾರಿ ಅವರ ತಂದೆ ಹೋಟೆಲ್ ಉದ್ಯೋಗಿ, ತಾಯಿ ಗೃಹಿಣಿ. ಸಾಮಾನ್ಯ ಕುಟುಂಬದಿಂದ ಬಂದು ಈಗ ಅಸಾಮಾನ್ಯ ಸಾಧನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next