Advertisement
ಶೃಂಗಸಭೆಯ ಸಮಾರೋಪದಲ್ಲಿ ಮಾತನಾಡಿದ ಪ್ರಧಾನಿ, ಬದಲಾಗು ತ್ತಿರುವ ಜಗತ್ತಿಗೆ ಅನುಗುಣವಾಗಿ ಈಸಂಸ್ಥೆಗಳ ನಿಲುವುಗಳಲ್ಲಿಯೂ ಪರಿವರ್ತನೆ ಆಗಬೇಕು. ಇಲ್ಲದಿದ್ದರೆ ಅವು ತಮ್ಮ ಮೌಲ್ಯವನ್ನೇ ಕಳೆದು ಕೊಳ್ಳುತ್ತವೆ ಎಂದು ಹೇಳಿದ್ದಾರೆ.
ನವೆಂಬರ್‌ನಲ್ಲಿ ಜಿ20 ರಾಷ್ಟ್ರಗಳ ವರ್ಚುವಲ್ ಸಮ್ಮೇಳನ ನಡೆಯಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿ ದ್ದಾರೆ. ಈ ಸಂದರ್ಭ ಜಗತ್ತಿನ ಪ್ರಮುಖ ನಾಯಕರು ನೀಡಿರುವ ಸಲಹೆಗಳ ಅನುಷ್ಠಾನದ ಸಾಧನೆಯ ಪರಾಮರ್ಶೆ ನಡೆಸಲು ಸಾಧ್ಯವಾಗುತ್ತದೆ ಎಂದರು. ಜಗತ್ತಿನಲ್ಲಿ ಶಾಂತಿ ನೆಲೆಸಲಿ
ಜಗತ್ತಿನಲ್ಲಿ ಶಾಂತಿ ನೆಲೆಸುವುದಕ್ಕಾಗಿ “ಸ್ವಸ್ತಿ ಅಸ್ತು ವಿಶ್ವ’ ಶಾಂತಿಮಂತ್ರವನ್ನು ಪ್ರಧಾನಿ ಪಠಿಸಿದ್ದಾರೆ. ಬ್ರೆಜಿಲ್ ಅಧ್ಯಕ್ಷ ರಿಗೆ ಅಧಿಕಾರ ದಂಡ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವು ವಿಚಾರಗಳ ಬಗ್ಗೆ ಧನಾತ್ಮಕ ಚರ್ಚೆಗಳನ್ನು ನಡೆಸಿದ್ದೇವೆ. “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಧ್ಯೇಯವಾಕ್ಯದ ಅನ್ವಯ ನಡೆದ ಚರ್ಚೆಗಳು ಪರಿಣಾಮ ಕಾರಿಯಾಗಿದ್ದವು. ಮುಂದೆಯೂ ಈ ತಣ್ತೀ ಮುಂದುವರಿಯಲಿದೆ ಎಂಬ ಆಶಯವಿದೆ. ಈ ಸಮ್ಮೇಳನ ಮುಕ್ತಾಯಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು.
Related Articles
ಬ್ರೆಜಿಲ್‌ನ ಅಧ್ಯಕ್ಷ ಲೂಯಿಜ್ ಇನಾಸಿಯೋ ಲೂಲ ಡ ಸಿಲ್ವ ಮಾತ ನಾಡಿ, ಹಸಿವು, ಇಂಧನ ಕ್ಷೇತ್ರದಲ್ಲಿ ಪರಿವರ್ತನೆ ಮತ್ತು ಸಹ್ಯ ಅಭಿವೃದ್ಧಿ ಕ್ಷೇತ್ರಗಳು ಜಿ20 ರಾಷ್ಟ್ರಗಳ ಒಕ್ಕೂಟದ ಆದ್ಯತೆಗಳಾಗಬೇಕು. ವಿಶ್ವಬ್ಯಾಂಕ್, ಐಎಂಎಫ್ನಲ್ಲಿ ಅಭಿವೃದ್ಧಿ ಹೊಂದುತ್ತಿ ರುವ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಬೇಕಾಗಿದೆ ಎಂದಿದ್ದಾರೆ. ಡಿ. 1ರಿಂದ ಬ್ರೆಜಿಲ್ ಅಧಿಕೃತವಾಗಿ ಜಿ20 ರಾಷ್ಟ್ರಗಳ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ.
Advertisement
ಕಳೆದ ವರ್ಷ ಸಮ್ಮೇಳನದ ನೇತೃತ್ವ ವಹಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೂಡು ಮತ್ತು ಮುಂದಿನ ವರ್ಷದ ಸಮ್ಮೇಳನದ ಅಧ್ಯಕ್ಷತೆ ವಹಿಸ ಲಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೋ ಲೂಲ ಡ ಸಿಲ್ವ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಸಿಗಳನ್ನು ಹಸ್ತಾಂತರಿಸಿದರು.
ಬ್ರೆಜಿಲ್‌ಗೆ ಅಧಿಕಾರ ಹಸ್ತಾಂತರ
ಜಿ20 ರಾಷ್ಟ್ರಗಳ ಮುಂದಿನ ಸಮ್ಮೇಳನ ಬ್ರೆಜಿಲ್‌ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು “ಒಂದು ಭೂಮಿ, ಒಂದು ಕುಟುಂಬ’ ಅಧಿಕಾರ ದಂಡವನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೋ ಲೂಲ ಡ ಸಿಲ್ವ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬ್ರೆಜಿಲ್ ಅಧ್ಯಕ್ಷರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಅರ್ಥವ್ಯವಸ್ಥೆಗಳ ಬೇಡಿಕೆಗಳನ್ನು ಪ್ರಮುಖವಾಗಿ ಪ್ರಸ್ತಾವಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಮರ್ಪಿಸಿದರಲ್ಲದೆ ಹೊಸದಿಲ್ಲಿ ಸಮ್ಮೇಳನವನ್ನು ಸಮರ್ಥವಾಗಿ ನಡೆಸಿಕೊಟ್ಟದ್ದಕ್ಕಾಗಿ ಮೋದಿಯವರನ್ನು ಶ್ಲಾಘಿಸಿದರು.
ವಿಶ್ವಸಂಸ್ಥೆಯ ಭದ್ರತ ಮಂಡಳಿ ಎಂದರೆ ಕೇವಲ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನ, ರಷ್ಯಾ ಮಾತ್ರವಲ್ಲ. ಜಗತ್ತು ಅದಕ್ಕಿಂತ ವಿಸ್ತಾರವಾಗಿದೆ. ವಿಶ್ವಸಂಸ್ಥೆಯ ಭದ್ರತ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನಮಾನ ಸಿಗಬೇಕು. –ರೀಪ್ ತಯ್ಯಿಪ್ ಎರ್ಡೋಗನ್, ಟರ್ಕಿ ಅಧ್ಯಕ್ಷ