Advertisement

ಕೈಗೆ ಒಂದು-ದಳಕ್ಕೆ ಎರಡು ಅಧ್ಯಕ್ಷ ಸ್ಥಾನ

03:48 PM Oct 23, 2018 | |

ರಾಯಚೂರು: ಜಿಲ್ಲಾ ಪಂಚಾಯಿತಿ ವಿವಿಧ ಸ್ಥಾಯಿ ಸಮಿತಿ ಸ್ಥಾನಗಳಿಗೆ ಸದಸ್ಯರ ಆಯ್ಕೆ ಬಳಿಕ ಜೆಡಿಎಸ್‌ನ ಇಬ್ಬರು, ಕಾಂಗ್ರೆಸ್‌ನ ಒಬ್ಬರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. 

Advertisement

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಐದು ಸ್ಥಾಯಿ ಸಮಿತಿಗಳಿಗೆ ಸೋಮವಾರ ಚುನಾವಣೆ ನಡೆಯಿತು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಖಾಸಿಂ ನಾಯಕ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಬಸನಗೌಡ ಕಂಬಳಿ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಬಸವರಾಜ ಹಿರೇಗೌಡ್ರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಹ್ಮದ್‌ ಯೂಸೂಫ್‌ ಘೋಷಿಸಿದರು.

ಜಿಪಂ ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಗೆ ತಲಾ 6 ಜನ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ತಲಾ 7 ಜನ ಸದಸ್ಯರ ಆಯ್ಕೆ ಪ್ರಕ್ರಿಯೆ ಮೊದಲು ನಡೆಯಿತು.
 
ಸಾಮಾನ್ಯ ಸ್ಥಾಯಿ ಸಮಿತಿ: ಆರು ಸದಸ್ಯರುಳ್ಳ ಸಾಮಾನ್ಯ ಸ್ಥಾಯಿ ಸಮಿತಿ ಸದಸ್ಯತ್ವಕ್ಕಾಗಿ ಸಂದೀಪ ನಾಯಕ, ಕಿರಿಲಿಂಗಪ್ಪ ಕವಿತಾಳ, ಸಾಹೀರಾ ಬೇಗಂ, ಶರಣ ಬಸವರಾಜ ಪಾಟೀಲ ಅನ್ವರಿ ನಾಮಪತ್ರ ಸಲ್ಲಿಸಿದ್ದರು. ಯಾರೂ ನಾಮಪತ್ರ ಹಿಂಪಡೆಯದ ಕಾರಣ ಎಲ್ಲರನ್ನು ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ಏಳು ಜನ ಸದಸ್ಯರುಳ್ಳ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಖಾಸಿಂ ನಾಯಕ, ಮಹಾಂತೇಶ ಪಾಟೀಲ ಅತ್ತನೂರು, ಗೌರಿ ನಾಡಗೌಡ, ರೇಣುಕಾ ಚಂದ್ರಶೇಖರ, ದುರುಗಪ್ಪ, ಎಂ.ಪದ್ಮಾವತಿ, ಸಾಹೀರಾ ಬೇಗಂ, ಬಾಬುಗೌಡ ಬಾದರ್ಲಿ ಸೇರಿ ಎಂಟು ಜನ ನಾಮಪತ್ರ ಸಲ್ಲಿಸಿದರು. ಕೊನೆ ಕ್ಷಣದಲ್ಲಿ ಬಾಬುಗೌಡ ಬಾದರ್ಲಿ ನಾಮಪತ್ರ ಹಿಂಪಡೆದರು. ಇದರಿಂದ ಉಳಿದ ಏಳು ಜನರನ್ನು ಸದಸ್ಯರನ್ನಾಗಿ ಸಮಿತಿಗೆ ಆಯ್ಕೆ ಮಾಡಲಾಯಿತು. ಬಳಿಕ ಈ ಸದಸ್ಯರೆಲ್ಲ ಸೇರಿ ಖಾಸಿಂ ನಾಯಕರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ: ಒಟ್ಟು ಆರು ಜನ ಸದಸ್ಯರ ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಗೆ ಗೌರಿ ನಾಡಗೌಡ ಮತ್ತು ಮಹಾಂತೇಶ ಪಾಟೀಲ ಅತ್ತನೂರು, ಸಂದೀಪ ನಾಯಕ, ಬಸವರಾಜೇಶ್ವರಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Advertisement

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಏಳು ಸದಸ್ಯರ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಬಸನಗೌಡ ಕಂಬಳಿ, ಸಂಗಪ್ಪ ದೇಸಾಯಿ, ರಾಣಿ ಜಯಲಕ್ಷ್ಮೀ, ಎಂ.ಅನ್ನಪೂರ್ಣ, ಕಿರಿಲಿಂಗಪ್ಪ, ಎನ್‌.ಶಿವನಗೌಡ, ಅಮರೇಗೌಡ ಮಾಲಿಪಾಟೀಲ ಅವರು ನಾಮಪತ್ರ ಸಲ್ಲಿಸಿದರು. ಇವರಲ್ಲಿ ಯಾರೂ ನಾಮಪತ್ರ ಹಿಂಪಡೆಯದ ಕಾರಣಕ್ಕೆ ಎಲ್ಲರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಬಳಿಕ ಸಂಕ್ಷಿಪ್ತ ಸಭೆ ನಡೆಸಿದ ಸದಸ್ಯರು ಬಸನಗೌಡ ಕಂಬಳಿ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ: ಏಳು ಜನ ಸದಸ್ಯರ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಬಸವರಾಜ ಹಿರೇಗೌಡ್ರು, ಬಾಬುಗೌಡ ಬಾದರ್ಲಿ, ಗಂಗಣ್ಣ ಸಾಹುಕಾರ, ಬಸವರಾಜೇಶ್ವರಿ, ಜಯಶ್ರೀ, ಎನ್‌. ಶಿವನಗೌಡ, ಅಮರಮ್ಮ, ದುರುಗಪ್ಪ, ರೇಣುಕಾ, ಕಿರಿಲಿಂಗಪ್ಪ ಸೇರಿ ಒಟ್ಟು 10
ಜನರು ನಾಮಪತ್ರಗಳನ್ನು ಸಲ್ಲಿಸಿದ್ದರು. ಇದರಲ್ಲಿ ಕಿರಿಲಿಂಗಪ್ಪ, ಬಸವರಾಜೇಶ್ವರಿ ಮತ್ತು ದುರುಗಪ್ಪ ಅವರು ನಾಮಪತ್ರ ಹಿಂಪಡೆದ ಕಾರಣ ಉಳಿದವರ ಆಯ್ಕೆ ನಡೆಯಿತು. ಬಳಿಕ ಸದಸ್ಯರು ಬಸವರಾಜ ಹಿರೇಗೌಡ್ರು ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದರು.
ಸಂಸದ ಬಿ.ವಿ.ನಾಯಕ, 

Advertisement

Udayavani is now on Telegram. Click here to join our channel and stay updated with the latest news.

Next