Advertisement
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಕರ ಸಮಸ್ಯೆ ಬಗೆಹರಿಸಿ ಎಂದರೆ ಶಿಕ್ಷೆ ಕೊಡುತ್ತೇವೆ ಎನ್ನುವುದು ಸರಿಯಲ್ಲ. ಸರ್ಕಾರದ ಈ ನಿರ್ಧಾರವನ್ನು ನೋಡಿದರೆ ಇದು ತುಘಲಕ್ ಸರ್ಕಾರವೋ? ಅಥವಾ ಸದ್ದಾಂ ಹುಸೇನ್ ಸರ್ಕಾರವೋ ಎಂಬ ಅನುಮಾನ ಮೂಡುತ್ತದೆ. ಅರ್ಹತೆ ಇಲ್ಲದವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದರೆ ಇಂತಹ ಸಮಸ್ಯೆ ಎದುರಾಗಲಿದ್ದು, ಅಧಿಕಾರಿ ಹೇಳಿದ್ದಕ್ಕೆ ಸಚಿವರು ಹೆಬ್ಬೆಟ್ಟು ಒತ್ತುತ್ತಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಕಾರ್ಯಕರ್ತರು ಗೊಂದಲಕ್ಕೆ ಸಿಲುಕುತ್ತಾರೆ. ಈ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆ
ಯಿದ್ದು, ಈ ಕುರಿತು ಕಾರ್ಯಕರ್ತರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಕಳಲೆ ಕೇಶವಮೂರ್ತಿ ಅಪಾಯ ಕಾರಿ: ಕಳಲೆ ಕೇಶವಮೂರ್ತಿ ಅಪಾಯ ಕಾರಿ ವ್ಯಕ್ತಿ. ಜೆಡಿಎಸ್ ಬಿಡಲು ಅವರು ನಮ್ಮ ಅನುಮತಿ ಪಡೆದಿಲ್ಲ. ಕೇಶವಮೂರ್ತಿಯನ್ನು ಸಜ್ಜನ ಎಂದುಕೊಂಡಿದ್ದೆ, ಆದರೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಈ ರೀತಿ ಸುಳ್ಳು ಹೇಳುತ್ತಾರೆಂದು ತಿಳಿದಿರಲಿಲ್ಲ. ಅವರ ನಡೆಯಿಂದ ಅವರೊಬ್ಬ ಅಪಾಯಕಾರಿ ವ್ಯಕ್ತಿ ಎನ್ನುವುದು ಸಾಬೀತಾಗಿದೆ ಎಂದು ಆರೋಪಿಸಿದರು.