Advertisement

ಪ್ರತಿಭೆ ಕಾಪಾಡುವುದೇ ನಿಜ ಪ್ರಶಸ್ತಿ: ದೇಗಾಂವ್‌

07:03 AM Jan 14, 2019 | Team Udayavani |

ಶಹಾಬಾದ: ಪ್ರತಿಭೆಗಳು ನಶಿಸಿ ಹೋಗದಂತೆ ಕಾಪಾಡಿಕೊಳ್ಳುವುದೇ ನಿಜವಾದ ಪ್ರಶಸ್ತಿ ಎಂದು ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಹಣಮಂತರಾಯ ದೇಗಾಂವ್‌ ಹೇಳಿದರು.

Advertisement

ರವಿವಾರ ನಗರದ ಜಗದಂಬಾ ಮಂದಿರದಲ್ಲಿ ಚವ್ಹಾಣ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ವಿಜಯ ಕಂಪ್ಯೂಟರ್‌ ಶಿಕ್ಷಣ ಕೇಂದ್ರ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ನಿಮಿತ್ತ ರಾಷ್ಟ್ರೀಯ ಯುವದಿನ ಹಾಗೂ ದಿ. ಸಂತೋಷಕುಮಾರ ಇಂಗಿನಶೆಟ್ಟಿ ಸ್ಮರಣಾರ್ಥ ಆಯೋಜಿಸಲಾಗಿದ್ದಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇಲ್ಲಿನ ಚವ್ಹಾಣ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ವಿಜಯ ಕಂಪ್ಯೂಟರ್‌ ಸಂಚಾಲಕ ಸ್ಥಳೀಯ ಸಾಧನೆ ಮಾಡಿದ ಪ್ರತಿಭೆಗಳನ್ನು ಸತ್ಕರಿಸುವ ಮೂಲಕ ಅವರಿಗೆ ಇನ್ನು ಸಾಧನೆ ಮೆಟ್ಟಿಲೇರಲು ನೀರೆರೆಯುತ್ತಿದ್ದಾರೆ ಎಂದರು.

ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಮಾತನಾಡಿ, ಸಿಮೆಂಟ ನಗರಿಗೆ ಹೆಸರುವಾಸಿಯಾದ ನಗರದಲ್ಲಿಂದು ಕಾರ್ಖಾನೆಗಳು ಒಂದೊಂದಾಗಿ ಮುಚ್ಚುತ್ತಿವೆ. ಇದರಿಂದ ಇಲ್ಲಿನ ಜನರ ಬದುಕು ಬೀದಿ ಪಾಲಾಗಿದೆ. ಆದ್ದರಿಂದ ಯುವಕರು ಕಂಪ್ಯೂಟರ್‌ ಶಿಕ್ಷಣ ಜತೆಗೆ ಉನ್ನತ ಶಿಕ್ಷಣ ಪಡೆದರೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಸಾಹಿತಿ ಪ್ರಸನ್ನ ಮಂಡಲಗಿರಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಡಾ| ಅಹ್ಮದ್‌ ಪಟೇಲ್‌, ಉದ್ದಿಮೆದಾರ ಅಮರ ಮುತ್ತಟ್ಟಿ, ಜಗದಂಬಾ ದೇವಸ್ಥಾನ ಕಮಿಟಿ ಅಧ್ಯಕ್ಷ ದತ್ತಾ ಜಿಂಗಾಡೆ ಅತಿಥಿಗಳಾಗಿದ್ದರು.

Advertisement

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆನಂದ ದೊಡಮನಿ, ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಗರಾಜ ಸಾಲೊಳ್ಳಿ ಅವರಿಗೆ 2018 ನೇ ಸಾಲಿನ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಮೇಶ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು, ವಾಸು ಚವ್ಹಾಣ ನಿರೂಪಿಸಿದರು, ನಿರೀಕ್ಷಿತಾ ಹಾಗೂ ಸ್ಪೂರ್ತಿ ಮೋರೆ ಪ್ರಾರ್ಥಿಸಿದರು, ಸುಜಾತಾ ಬೇವಿನಹಳ್ಳಿ ಸ್ವಾಗತಿಸಿದರು, ವಿಜಯಲಕ್ಷ್ಮೀ ಭೀಮಶಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next