Advertisement

ಚಂದ್ರನತ್ತ ತ್ರಿವರ್ಣ ಧ್ವಜ, ಬಾಳೆಗಿಡ ಕೊಂಡೊಯ್ಯುವ ಆಸೆಯಂತೆ

12:42 AM Jul 14, 2019 | Team Udayavani |

ಹೊಸದಿಲ್ಲಿ: ಚಂದ್ರಯಾನ-2ರ ಅನುಷ್ಠಾನಕ್ಕೆ ಸಿದ್ಧವಾಗುತ್ತಿರುವ ಇಸ್ರೋ, ಟ್ವಿಟರ್‌ನಲ್ಲಿ ಒಂದು ಕುತೂಹಲದ ಪ್ರಶ್ನೆಯನ್ನು ಇತ್ತೀಚೆಗೆ ಜನರ ಮುಂದಿಟ್ಟಿತ್ತು. “ಚಂದ್ರನತ್ತ ನಿಮ್ಮನ್ನು ಕಳುಹಿಸಿದರೆ ನೀವು ನಿಮ್ಮೊಂದಿಗೆ ಏನನ್ನು ಕೊಂಡೊಯ್ಯಲು ಬಯಸುತ್ತೀರಿ?’ ಎಂಬ ಪ್ರಶ್ನೆಯದು.

Advertisement

ಇದಕ್ಕೆ ಟ್ವಿಟರ್‌ ಮಂದಿ ತುಂಬಾ ಕುತೂಹಲಕಾರಿ ಉತ್ತರಗಳನ್ನು ಬರೆದಿದ್ದಾರೆ. ಉತ್ತರಿಸಿರುವ ಅನೇಕರು ತಮ್ಮೊಂದಿಗೆ ಭಾರತದ ತ್ರಿವರ್ಣ ಧ್ವಜವನ್ನು ಕೊಂಡೊಯ್ಯುವುದಾಗಿ ಹೇಳಿದ್ದರೆ, ಇನ್ನೂ ಕೆಲವರು ಚಂದ್ರನಲ್ಲಿ ನೀರಿದೆಯಂತೆ, ಅಲ್ಲಿಂದ ನೀರು ತರುತ್ತೇವೆ ಎಂದಿದ್ದಾರೆ.

ದೇಶಭಕ್ತರ ಆಸೆ!: ಅಭಿಷೇಕ್‌ ನಾಯರ್‌ಎಂಬವರು, ತಮ್ಮೊಂದಿಗೆ ಟಿಪ್ಪು ಸುಲ್ತಾನ್‌, ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂ ಮತ್ತಿತರ ವಿಜ್ಞಾನಿಗಳ ಕೊಲಾಜ್‌ ಮಾದರಿಯ ಫೋಟೋ, ಜನಗಣ ಮನ ಧ್ವನಿಸುವಂತೆ ಮಾಡಲು ಒಂದು ಮ್ಯೂಸಿಕ್‌ ಪ್ಲೇಯರ್‌, ಚಂದ್ರಯಾನ-2 ಯೋಜನೆಗೆ ಕಾರಣವಾದ ಎಲ್ಲ ಕಂಪೆನಿಗಳ ಹೆಸರಿರುವ ಒಂದು ಮೆಟಾಲಿಕ್‌ ಪ್ಲಕಾರ್ಡ್‌ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ. ಧನುಜೋìಯ್‌ ಎಂಬವರು, ತಮ್ಮೊಂದಿಗೆ ತ್ರಿವರ್ಣ ಧ್ವಜ, ಭಗತ್‌ ಸಿಂಗ್‌ ಫೋಟೋವನ್ನು ಹೊತ್ತೂಯ್ಯುವುದಾಗಿ ಹೇಳಿದ್ದಾರೆ.

ಇಂಟರ್ನೆಟ್‌ಗಾಗಿ ಸಿದ್ಧತೆ!: ಗೌರವ್‌ ಎಂಬ ಅಂತರ್ಜಾಲ ವ್ಯಾಮೋಹಿಯು, ತಮ್ಮೊಂದಿಗೆ, ಆಹಾರ, ಆಮ್ಲಜನಕ ಕೊಂಡೊಯ್ಯುವುದರ ಜತೆಗೆ, ರೀಚಾರ್ಜಿಂಗ್‌ ಸ್ಟೇಷನ್‌, ಅಂತರ್ಜಾಲ ಸೆಟಪ್‌ ಪರಿಕರ ಕೊಂಡೊಯ್ಯುವುದಾಗಿ ಹೇಳಿದ್ದಾರೆ.

ಎಲ್ಲರ ಹೆಸರು ಪ್ರತಿಷ್ಠಾಪನೆ?: ಹಿರೋಕಿಯೋಟಿ ಕಾಲಿಟಾ ಎಂಬವರು, ತಮ್ಮೊಂದಿಗೆ ಧ್ವಜ ಸೇರಿದಂತೆ ಭಾರತದ ಮಣ್ಣು, ಎಲ್ಲಾ ರಾಜ್ಯಗಳ ಹೆಸರು- ಅವುಗಳ ಭಾಷೆ- ಎಲ್ಲಾ ನಾಗರಿಕರ ಹೆಸರುಗಳುಳ್ಳ ಮೆಮೊರಿ ಕಾರ್ಡನ್ನು ಹೊತ್ತೂಯ್ಯುವುದಾಗಿ ತಿಳಿಸಿದ್ದಾರೆ.

Advertisement

ಕಾರು, ಬೈಕ್‌ ರೈಡಿಂಗ್‌ ಹಾಗೂ ಲೇಸರ್‌ ಶೋ!
ಬಹುಶಃ ವಾಹನ ಸವಾರಿಯನ್ನು ಇಷ್ಟಪಡುವ ಪ್ರಾಶ್‌ ಎಂಬವರು, ತಮ್ಮೊಂದಿಗೆ ಧ್ವಜ ಹಾಗೂ ಕಾರು, ಬೈಕು, ಯಾವುದೇ ವಾಹನ ಕೊಂಡೊಯ್ಯುವುದಾಗಿ ತಿಳಿಸಿದ್ದು, ಸೂರ್ಯನ ಬೆಳಕು ಬೀಳುವ ಕಡೆ ಇಳಿದರೆ ಸನ್‌ಕ್ರೀಂ, ಕತ್ತಲೆಯಿರುವ ಕಡೆ ಇಳಿದರೆ ಬೇಕಾಗುವ ನೈಟ್‌ ವಿಷನ್‌ ಬೈನಾಕ್ಯುಲರ್‌ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ. ಇವರೇ ತಮ್ಮ ಮತ್ತೂಂದು ಟ್ವೀಟ್‌ನಲ್ಲಿ, “ಮೇರಾ ಭಾರತ್‌ ಮಹಾನ್‌’ ಎಂಬ ಲೇಸರ್‌ ಲೈಟ್‌ ಶೋ ಏರ್ಪಡಿಸುವುದಾಗಿ ತಿಳಿಸಿದ್ದಾರೆ.

ಬಿಂದಿಗೆ ಒಯ್ತಾರಂತೆ!
ಸುಮಂತ್‌ ಎಸ್‌ಎ ಎಂಬವರು, ಭಾರತೀಯ ಧ್ವಜ, ಮೇಕ್‌ ಇನ್‌ ಇಂಡಿಯಾ ಬ್ಯಾನರ್‌, ಬಾಳೆಗಿಡ, ಚಂದ್ರನ ನೀರು ಸಂಗ್ರಹಿಸಲು ಬಿಂದಿಗೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದಾರೆ.

ಚಂದ್ರಯಾನಕ್ಕೂ ಮುನ್ನಾದಿನವಾದ ಶನಿವಾರ ಇಸ್ರೋ ಮುಖ್ಯಸ್ಥ ಕೆ. ಶಿವನ್‌ ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next