Advertisement
ಹೊಸಂಗಡಿ ಕೆಪಿಸಿಯ ಕಚೇರಿಗೆ ಗುತ್ತಿಗೆ ಆಧಾರದ ಮೇಲೆ ಬಾಡಿಗೆ ನೀಡಿದ ಬೊಲೆರೋ ವಾಹನವು ಮಾಸ್ತಿಕಟ್ಟೆಯ ಕೆಪಿಸಿ ಕಚೇರಿಯಿಂದ ಹೊಸಂಗಡಿ ಕಡೆಗೆ ಬರುವಾಗ ಈ ಘಟನೆ ನಡೆದಿದೆ. ವಾಹನದಲ್ಲಿ ಚಾಲಕ ಮತ್ತು ಇಬ್ಬರು ಕೆಪಿಸಿ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು. ಯಾರಿಗೂ ಅಪಾಯವಾಗಿಲ್ಲ. ಸುಮಾರು ಅರ್ಧ ತಾಸು ಕಾಲ ಹೆದ್ದಾರಿ ಬಂದ್ ಆಗಿದ್ದು, ಇತರ ವಾಹನ ಸವಾರರು ಮರ ತೆರವು ಕಾರ್ಯದಲ್ಲಿ ಪಾಲ್ಗೊಂಡರು.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗುರುವಾರ ಮಧ್ಯರಾತ್ರಿ ಸುರಿದ ಭಾರೀ ಗಾಳಿ ಮಸಂದರ್ಭ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಂಬಟ್ಟು ರತ್ನಾವತಿ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅಪಾರ ನಷ್ಟ ಸಂಭವಿಸಿದೆ.
ಮನೆಯಲ್ಲಿ ರತ್ನಾವತಿ ಶೆಟ್ಟಿ ಸಹಿತ ನಾಲ್ಕು ಜನ ವಾಸವಾಗಿದ್ದರು. ಘಟನೆ ಸಂದರ್ಭ ಎಲ್ಲರೂ ನಿದ್ದೆಯಲ್ಲಿದ್ದರು. ಮನೆಯವರು ಸಿಡಿಲಿನ ಆಘಾತಕ್ಕೆ ಒಳಗಾಗಿದ್ದಾರೆ. ಸೂರಪ್ಪ ಶೆಟ್ಟಿ (82) ಅವರ ಕೈಗೆ ಸಿಡಿಲಿನ ಶಾಕ್ ತಾಗಿದೆ. ಮನೆಯ ವಿದ್ಯುತ್ ಉಪಕರಣಗಳು, ಯುಪಿಎಸ್ ಮತ್ತು ಐಬಿಎಸ್ ವಿದ್ಯುತ್ ಬೇಲಿಯ ಬ್ಯಾಟರಿಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಉಳ್ಳೂರು-ಮಚ್ಚಟ್ಟು ಗ್ರಾಮ ಕರಣಿಕರು ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.