Advertisement

ಮಳೆಗೆ ಧರೆಗುರುಳಿದ ಮರ

05:31 AM Jun 30, 2020 | Lakshmi GovindaRaj |

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಸಂಜೆ ಗಾಳಿ ಮಳೆಗೆ ವಿವಿಧೆಡೆ ಮರಗಳು ಧರೆ ಗುರುಳಿ ಮನೆಗಳು ಜಖಂಗೊಂಡು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ತೀವ್ರ ತೊಂದರೆಯಾಯಿತು. ಎರಡೂವರೆ ಗಂಟೆಗಳಿಗೂ ಅಧಿಕ ಸಮಯ ಜೋರಾಗಿ ಗುಡುಗು ಸಹಿತ ಮಳೆಯಾಗಿದೆ.

Advertisement

ಪಟ್ಟಣದ ಕಾರಾಪುರ ವಿರಕ್ತಮಠದ ರಸ್ತೆಯಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಪಕ್ಕದಲ್ಲಿದ್ದ ವಿದ್ಯುತ್‌ ತಂತಿ ಮೇಲೆ ಬಿದ್ದು ತಂತಿ ಹಾಗೂ ಕಂಬ ತುಂಡಾಗಿದೆ. ತಾಲೂಕಿನ ಕಂದಹಳ್ಳಿ, ಮೆಳ್ಳಹಳ್ಳಿ, ದುಗಹಟ್ಟಿ ಗ್ರಾಮದಲ್ಲಿ ಕೆರೆಕಟ್ಟೆಗಳಿಗೆ ನೀರು ಹರಿದು ಬಂದಿದೆ. ಪಟ್ಟಣದ ಬಳೇಪೇಟೆ¿ ಹಳ್ಳದ ಬೀದಿ, ಜನತಾ ಕಾಲೋನಿನಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು  ನುಗ್ಗಿ ವಾಸಿಗಳು ಪರದಾಡು ವಂತಾಯಿತು.

ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯ ಭೂಲಕ್ಷ್ಮೀ ವರಾಹ ಸ್ವಾಮಿ ದೇಗುಲದ ಮುಂದೆ ಮಳೆ ನೀರು ನಿಂತಿದ್ದರಿಂದ ತಳ್ಳುಗಾಡಿಗಳು, ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಗ್ರಾಮಗಳಲ್ಲಿ  ಹಳೆಮನೆ ಗೋಡೆ, ಕೊಟ್ಟಿಗೆಗಳ ಗೋಡೆಗಳು ಮಳೆಗೆ ಕುಸಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next