Advertisement

ಕದ್ರಿ ಪಾರ್ಕ್‌ನಲ್ಲಿ ಓಡಲು ಸಿದ್ಧವಾಗಿದೆ ಪುಟಾಣಿ ರೈಲು

11:39 PM Jun 20, 2019 | sudhir |

ಮಹಾನಗರ: ಕೆಲವು ತಿಂಗಳುಗಳಿಂದ ಕದ್ರಿ ಪಾರ್ಕ್‌ನ ‘ಬಾಲ ಮಂಗಳ ಎಕ್ಸ್‌ಪ್ರೆಸ್‌’ ಪುಟಾಣಿ ರೈಲು ತಾಂತ್ರಿಕ ಕಾರಣಗಳಿಗೆ ತನ್ನ ಸಂಚಾರವನ್ನು ರದ್ದುಗೊಳಿಸಿದ್ದು, ಇದೀಗ ಮತ್ತೂಮ್ಮೆ ತನ್ನ ಓಡಾಟ ಆರಂಭಿಸಲು ಸಿದ್ಧವಾಗಿದೆ.

Advertisement

ರೈಲಿನ ವಾಲ್ ಜತೆಗೆ ಹೈಡ್ರೋಲಿಂಕ್‌ ಎಂಜಿನ್‌ನಲ್ಲಿ ತೊಂದರೆಯಿಂದಾಗಿ ಇದರ ಬಿಡಿಭಾಗಗಳು ಬೆಂಗಳೂರಿನಿಂದ ಬರಬೇಕಿತ್ತು. ಇದೇ ಕಾರಣಕ್ಕೆ ಮಕ್ಕಳ ಮನೋರಂಜನೆಗೆ ಲಭ್ಯವಾಗಬೇಕಾಗಿದ್ದ ಈ ರೈಲು ಅನ್ನು ಕೆಲವು ತಿಂಗಳಿನಿಂದ ಕೋಣೆಯೊಳಗೆ ಇರಿಸಿ ಬೀಗ ಹಾಕಲಾಗಿತ್ತು.

ಇದೀಗ ತಾಂತ್ರಿಕ ಪರಿಣತರು ಬಂದು ರೈಲು ದುರಸ್ತಿಗೊಳಿಸಿದ್ದು, ಬುಧವಾರ ಸಂಜೆ ಪ್ರಾಯೋಗಿಕವಾಗಿ ಓಡಾಟ ನಡೆಸಲಾಯಿತು. ಆದರೆ, ಬಳಿಕ ಕೆಲವು ಸಣ್ಣ ಪುಟ್ಟ ತೊಂದರೆಗಳಿದ್ದ ಕಾರಣ ತಂತ್ರಜ್ಞರು ಗುರುವಾರ ಬೆಳಗ್ಗಿನಿಂದಲೇ ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಸಂಜೆ ವೇಳೆಗೆ ಸರಿಯಾಗಿ ಓಡಾಟಕ್ಕೆ ಸಿದ್ಧವಾಗಿದೆ.

ವಾರಪೂರ್ತಿ ಸೇವೆ

ಸೋಮವಾರದಿಂದ ಶನಿವಾರದವರೆಗ ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಮತ್ತು ರವಿವಾರ ಪೂರ್ತಿದಿನ ರೈಲು ಓಡಲಿದೆ. ಮಕ್ಕಳಿಗೆ 10 ರೂ. ಮತ್ತು ವಯಸ್ಕರಿಗೆ 20 ರೂ.ದರ ನಿಗದಿ ಪಡಿಸಲಾಗಿದೆ.

Advertisement

ಈಗ 1.2 ಕಿ.ಮೀ. ಟ್ರ್ಯಾಕ್‌ ನಿರ್ಮಾಣಗೊಂಡಿದ್ದು, ಎರಡು ಅಡಿ ಅಗಲವನ್ನು ಹೊಂದಿದೆ. ಸುಮಾರು 75 ಮಂದಿ ಮಕ್ಕಳನ್ನು ಹೊತ್ತೂಯ್ಯುವ ಸಾಮರ್ಥ್ಯವನ್ನು ಈ ಪುಟಾಣಿ ರೈಲನ್ನು ಸುಮಾರು 1.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳಿಸಲಾಗಿದೆ. ಈ ರೈಲಿನಲ್ಲಿ ಮೂರು ಬೋಗಿಗಳಿವೆ.

ರೈಲು ಓಡಾಟಕ್ಕೆ ಸಿದ್ಧ

ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಕದ್ರಿಯಲ್ಲಿನ ಬಾಲಮಂಗಳ ಎಕ್ಸ್‌ಪ್ರೆಸ್‌ ಪುಟಾಣಿ ರೈಲು ಸಂಚಾರ ನಿಲ್ಲಿಸಲಾಗಿತ್ತು. ಇದೀಗ ತಾಂತ್ರಿಕ ಪರಿಣತರು ಆಗಮಿಸಿ ದುರಸ್ತಿಗೊಳಿಸಿದ್ದು, ಸಂಚಾರಕ್ಕೆ ಯೋಗ್ಯವಾಗಿದೆ.
– ಸುಂದರ ಪೂಜಾರಿ,

ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ರೈಲಿನ ವೈಶಿಷ್ಟ್ಯ

ಈಗ 1.2 ಕಿ.ಮೀ. ಟ್ರ್ಯಾಕ್‌ ನಿರ್ಮಾಣಗೊಂಡಿದ್ದು, ಎರಡು ಅಡಿ ಅಗಲವನ್ನು ಹೊಂದಿದೆ. ಸುಮಾರು 75 ಮಂದಿ ಮಕ್ಕಳನ್ನು ಹೊತ್ತೂಯ್ಯುವ ಸಾಮರ್ಥ್ಯವನ್ನು ಈ ಪುಟಾಣಿ ರೈಲನ್ನು ಸುಮಾರು 1.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳಿಸಲಾಗಿದೆ. ಈ ರೈಲಿನಲ್ಲಿ ಮೂರು ಬೋಗಿಗಳಿವೆ.
Advertisement

Udayavani is now on Telegram. Click here to join our channel and stay updated with the latest news.

Next