Advertisement
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ವಿರೋಧಿ ಮತದಾರರಿಗೆ ಬಿಜೆಪಿ ಬಿಟ್ಟರೆ ಪರ್ಯಾಯವೇ ಇಲ್ಲ. ಹೀಗಾಗಿ ಬಿಜೆಪಿ- ಕಾಂಗ್ರೆಸ್ ನಡುವೆ ಹೋರಾಟ ನಡೆಯಲಿದೆ. ಮೋದಿ ಮತ್ತು ರಾಹುಲ್ ನಡುವೆ ಸ್ಪರ್ಧೆ ಎಂದಾಗ ಸಹಜವಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
Related Articles
Advertisement
ಬಿಜೆಪಿಯ ಉತ್ತಮ ಆಡಳಿತ, ಅಭಿವೃದ್ಧಿಗಾಗಿ ರಾಜಕೀಯ ಹಾಗೂ ಮೋದಿ ನಾಯಕತ್ವವನ್ನು ದೇಶದ ಜನತೆ ಒಪ್ಪಿದ್ದಾರೆ. ಹೀಗಾಗಿ ಎಲ್ಲ ಚುನಾವ ಣೆಗಳಲ್ಲೂ ದೇಶದ ಜನ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದಾರೆ. ನೋಟು ಅಮಾನ್ಯಿàಕರಣದ ನಂತರವೂ ಬಿಜೆಪಿಯ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದೆ. ಹಿಂದುಳಿದವರು, ಎಸ್ಸಿ-ಎಸ್ಟಿ ಸಮುದಾಯದವರು ಮೋದಿ ನಾಯಕತ್ವದಲ್ಲಿ ವಿಶ್ವಾಸ ಇರಿಸಿದ್ದಾರೆ.
ಉತ್ತರಪ್ರದೇಶ ಚುನಾವಣೆ ಯಲ್ಲಿ ಈ ಸಮುದಾಯಗಳು ಬಿಎಸ್‌ಪಿ, ಎಸ್‌ಪಿಯಿಂದ ಬಿಜೆಪಿಯತ್ತ ಸ್ಥಳಾಂತರವಾಗಿವೆ. ಉತ್ತಮ ಆಡಳಿತ, ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಜನ ಬಿಜೆಪಿಗೆ ಮತ ನೀಡಿದ್ದಾರೆ ಎಂದು ಹೇಳಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದುಳಿದ ವರ್ಗದವರ ಕಲ್ಯಾಣ ಕಾರ್ಯಕ್ರಮಗಳು ಕೇವಲ ಘೋಷಣೇಗಷ್ಟೆ ಸೀಮಿತವಾಗಿದ್ದು, ಎಲ್ಲ ಕಾರ್ಯ ಕ್ರಮಗಳೂ ಕಾಗದದಲ್ಲೇ ಉಳಿದಿವೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಸರ್ಕಾರ ದಲಿತ, ಹಿಂದುಳಿದ ವರ್ಗಗಳ ವಿರೋಧಿ. ತನ್ನ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಅವರಿಗೆ ಮೀಸಲಾತಿಯ ನೆನಪಾಗಿದೆ. ಮೀಸಲಾತಿಯ ಪ್ರಮಾಣ ಶೇ.50 ರಿಂದ ಶೇ.72ಕ್ಕೆ ಹೆಚ್ಚಿಸುವುದು ಅಸಾಧ್ಯ ಎಂಬುದು ಕಾಂಗ್ರೆಸ್ಸಿಗರಿಗೂ ಗೊತ್ತಿದೆ. ಆದರೂ ಚುನಾವಣೆಯ ಗಿಮಿಕ್ ಆಗಿ ಸಿದ್ದರಾಮಯ್ಯ ಮೀಸಲಾತಿ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದರು. ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಮಾಜಿ ಶಾಸಕ ನಂದೀಶ್ ರೆಡ್ಡಿ, ನಗರ ಬಿಜೆಪಿ ಅಧ್ಯಕ್ಷ ಡಾ. ಬಿ.ಎಚ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಫಣೀಶ್, ಎಚ್.ವಿ. ರಾಜೀವ್ ಇತರರು ಇದ್ದರು.