Advertisement
ಇದನ್ನೂ ಓದಿ: ಎಸ್.ಎಂ.ಕೆ. ಅಳಿಯ ಸಿದ್ದಾರ್ಥ ಮೃತದೇಹ ಪತ್ತೆ : ಊಹಾಪೋಹಕ್ಕೆ ತೆರೆ
Related Articles
Advertisement
ಇದನ್ನೂ ಓದಿ: ಕಿಂಗ್ ಇಲ್ಲದ ಕಾಫೀ ಡೇಯಲ್ಲಿ ಮೌನ
ಶವ ಸಂಸ್ಕಾರಕ್ಕೂ ಮುನ್ನ ಚಿಕ್ಕಮಗಳೂರು ನಗರದಲ್ಲಿರುವ ಎಬಿಸಿ ಕಾಫಿ ಗ್ಲೋಬಲ್ ಲಿ. ಕಂಪೆನಿ ಆವರಣದಲ್ಲಿ ಸಿದ್ದಾರ್ಥ ಅವರ ಪಾರ್ಥಿವ ಅಂತಿಮ ದರ್ಶನ ನಡೆಯಲಿದ್ದು, ಅಂತಿಮ ದರ್ಶನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಅಕಲ ಸಿದ್ಧತೆ ಕಾರ್ಯ ಭರದಿಂದ ಸಾಗುತ್ತಿದೆ.
ಇದನ್ನೂ ಓದಿ: ಸಿದ್ಧಾರ್ಥ್ ವಿತ್ ಕೆಫೆ ಕಾಫಿ ಡೇ…
ಅಂತಿಮ ದರ್ಶನಕ್ಕೆ ನಾಡಿನ ಪ್ರಮುಖ ರಾಜಕಾರಣಿಗಳು, ಕಲಾವಿದರು, ಉದ್ಯಮಿಗಳೂ, ಸಿದ್ದಾರ್ಥ ಒಡೆತನದ ಸಂಸ್ಥೆಗಳ ಸಿಬ್ಬಂದಿ, ಕಾರ್ಮಿಕರು ಹಾಗೂ ಸಾವಿರಾರು ಮಂದಿ ಸಾರ್ವಜನಿಕರು ಆಗಮಿಸುವ ಹಿನ್ನೆಯಲ್ಲಿ ವ್ಯವಸ್ಥಿತ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಸಿದ್ದಾರ್ಥ ಅವರ ಸಾವಿನ ಹಿನ್ನೆಲೆಯಲ್ಲಿ ನಗರದ ಎಬಿಸಿ ಕಂಪೆನಿ ಸಿಬ್ಬಂದಿ, ಕಾಫಿ ಡೇ, ಅಂಬರ್ ವ್ಯಾಲಿ, ಸೆರಾಯ್ ರೆಸಾರ್ಟ್, ಹೊಟೇಲ್ ಮ್ಯಾನೇಜ್ಮೆಂಟ್ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈಗಾಗಲೆ ಎಬಿಸಿ ಕಂಪೆನಿ ಅವರಣದಲ್ಲಿ ಜಮಾಯಿಸಲಾರಂಭಿಸಿದ್ದಾರೆ.
ಇದನ್ನೂ ಓದಿ: ಕಾಫಿ ಡೇ ಶುರು ಮಾಡಿದ ಕಥೆ…
ಜಿಲ್ಲಾದ್ಯಂತ ಇರುವ ಸಿದ್ದಾರ್ಥ ಸಂಬಂಧಿಗಳು, ಕಾಫಿಬೆಳೆಗಾರರೂ ಅಂತಿಮ ದರ್ಶನ ಪಡೆಯಲು ದೌಡಾಯಿಸುತ್ತಿದ್ದಾರೆ. ಸ್ಥಳದಲ್ಲಿ ಬಾರಿ ವಾಹನಗಳು ಹಾಗೂ ಸಾರ್ವಜನಿಕರು ಜಮಾಯಿಸುತ್ತಿರುವುದರಿಂದ ಚಿಕ್ಕಮಗಳೂರು -ಮೂಡಿಗೆರೆ ಹೆದ್ದಾರಿಯಲ್ಲಿ ಬಾರಿ ವಾಹನದಟ್ಟಣೆ ಉಂಟಾಗಿದ್ದು, ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಲು ಬ್ಯಾರಿಕೇಡ್ ಗಳ ಮೂಲಕ ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: ಕಾಫಿಯ ಡೇ ಬದಲಿಸಿದ ಸಿದ್ಧಾರ್ಥ
ಎಬಿಸಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರು ಹಾಗೂ ವಿಐಪಿಗಳಿಗೆ ಪ್ರತ್ಯೇಕ ದಾರಿ, ವ್ಯವಸ್ಥೆ ಮಾಡಲಾಗುತ್ತಿದೆ.