ಆಟೋಗಳ ದಾಖಲೆಗಳನ್ನು ಡಿವೈಎಸ್‌ಪಿ ಕೆ. ಬಸವರಾಜ ಪರಿಶೀಲಿಸಿದರು.
Advertisement
ನಂತರ ಮಾತನಾಡಿದ ಅವರು, ಪಟ್ಟಣದಲ್ಲಿಯೇ 200 ಕ್ಕೂ ಹೆಚ್ಚು ಆಟೋಗಳು ಹಾಗೂ ಚಾಲಕರು ಇದ್ದಾರೆ. ಚಾಲಕರು ತಮ್ಮ ಆಟೋಗಳಲ್ಲಿಯೇ ದಾಖಲಾತಿಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಇದರಿಂದ ತಪಾಸಣೆ ವೇಳೆ ಅನುಕೂಲವಾಗುತ್ತದೆ ಎಂದರು.
ಆಟೋ ಚಾಲಕರಿಗೂ ತಮ್ಮ ವಾಹನಗಳಲ್ಲಿ ಕಡ್ಡಾಯವಾಗಿ ವಾಹನಗಳ ದಾಖಲೆ ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಆದರೂ ಕೆಲವರು ದಾಖಲೆಗಳನ್ನು ಸಿದ್ಧಪಡಿಸಿಕೊಂಡಿಲ್ಲ. ರಸ್ತೆ ಸುರಕ್ಷತೆ ನಿಯಮ ಪಾಲನೆ ಕಡ್ಡಾಯ ಎಂದು ಎಚ್ಚರಿಕೆ ನೀಡಿದರು. ವಾಹನ ಚಾಲಕರು ತಮ್ಮ ಪರವಾನಗಿ, ಇನ್ಸುರೆನ್ಸ್, ಮಾಲೀಕತ್ವ ಪತ್ರ, ಆರ್‌ಸಿ ಬುಕ್, ಮಾಲಿನ್ಯ ನಿಯಂತ್ರಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು. ಇದು ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಅಲ್ಲದೇ ವಾಹನ ಚಾಲಕರು ಖಾಕಿ ಬಟ್ಟೆ ಧರಿಸದೇ ಬೇಜವಬ್ದಾರಿ ತೋರುತ್ತಿದ್ದಾರೆ. ಇದು ಸರಿಯಲ್ಲ ಎಂದರು.
Related Articles
Advertisement
ಆಟೋ ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಆಟೋಗಳಲ್ಲಿ ಅಕ್ರಮ ಮಧ್ಯವನ್ನಿಟ್ಟು ಹಳ್ಳಿಗಳಿಗೆ ಸಾಗಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಗಂಭೀರವಾಗಿ ಕೇಳಿ ಬರುತ್ತಿದೆ. ಒಂದು ವೇಳೆ ಈ ರೀತಿ ಮಾಡಿದ್ದೇ ಆದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಆಟೋ ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಟೋ ಚಾಲಕರ ಅಧ್ಯಕ್ಷ ದಿಲೀಪ ಕಾಶಿ ಮಾತನಾಡಿ, ಆಟೋ ಚಾಲಕರು ಬಡವರಾಗಿದ್ದು, ತಮ್ಮ ಆಟೋಗಳ ಕಾಗದ ಪತ್ರ ಮಾಡಿಕೊಳ್ಳಲು ಆರ್ಥಿಕ ಪರಿಸ್ಥಿತಿಯಿಂದ ಸಾಧ್ಯವಾಗುತಿಲ್ಲ. ಹೀಗಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್‌ಐ ನಟರಾಜ ಲಾಡೆ, ವಾಡಿ ಪಿಎಸ್‌ಐ ವಿಜಯಕುಮಾರ ಬಾವುಗೆ, ಎಎಸ್‌ಐ ಕಲಾವತಿ, ಅಂಬುಬಾಯಿ, ಪೇದೆಗಳಾದ ಬಲವಂತರೆಡ್ಡಿ, ಮೇಲಗೇರಿ, ವಿನೊದಕುಮಾರ, ಪ್ರಶಾಂತ ಹೆರೂರ, ಮಲ್ಲೇಶಿ ಹಾಗೂ ಇತರರು ಇದ್ದರು.