Advertisement

ಸುಗಮ ಸಂಚಾರಕ್ಕೆ ಬಂತು ಆಪತ್ತು

03:53 PM Oct 29, 2019 | Suhan S |

ಹೊಸನಗರ: ಭೀಕರ ಮಳೆಗೆ ರಾಣಿಬೆನ್ನೂರು-ಕೊಲ್ಲೂರು, ಬೈಂದೂರು ಹೆದ್ದಾರಿ ಮಾರ್ಗದ ಮಡೋಡಿ ಸೇತುವೆ ದಂಡೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದ್ದು, ಈಗಾಗಲೇ ದುರಸ್ತಿಗೊಂಡಿದೆ. ಆದರೆ ಆ ವೇಳೆ ಪರ್ಯಾಯ ಮಾರ್ಗವಾಗಿ ಕಂಡುಬಂದ ಮತ್ತಿಕೈಯಿಂದ ಮಡೋಡಿ ಗ್ರಾಮೀಣ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರವೇ ಕಷ್ಟ ಎಂಬಂತಾಗಿದೆ.

Advertisement

2012ರಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಹೊಂದಿದ ಹೊಸನಗರ ತಾಲೂಕಿನ ಹೊಸೂರು ಗ್ರಾಪಂ ವ್ಯಾಪ್ತಿಯ ಮತ್ತಿಕೈ-ಮಡೋಡಿ ವರೆಗಿನ ಮೂರುವರೆ ಕಿಮೀ ರಸ್ತೆಯ ಹದಗೆಟ್ಟ ವ್ಯವಸ್ಥೆ ಇದು.

ಮಡೋಡಿ ಎಫೆಕ್ಟ್: ನಗರ ಹೋಬಳಿಯಲ್ಲಿ ಸುರಿದ ಭೀಕರ ಮಳೆಯಿಂದಾಗಿ ರಾತ್ರೋರಾತ್ರಿ ರಾಣಿಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಮಡೋಡಿ ಸೇತುವೆ ದಂಡೆ ಸುಮಾರು 60 ಮೀ ನಷ್ಟು ಕೊಚ್ಚಿಹೋಗಿ ಪ್ರಮುಖ ಸಂಪರ್ಕ ಕಡಿತವಾಗಿತ್ತು. ಅಲ್ಲದೆ ಕೊಲ್ಲೂರು, ಸಿಗಂದೂರು ಸಂಪರ್ಕಕ್ಕೂ ಸಂಚಕಾರ ಬಂದಿದ್ದು, ಈ ವೇಳೆ ಪರ್ಯಾಯ ಮಾರ್ಗವಾಗಿ ಉಪಯೋಗಕ್ಕೆ ಬಂದಿದ್ದು ಕಟ್ಟಿನಹೊಳೆ-ಗೌರಿಕೆರೆ ಮಾರ್ಗ ಮತ್ತು ಮತ್ತಿಕೈ-ಮಡೋಡಿ ಮಾರ್ಗ. ಸುಮಾರು ಎರಡು ತಿಂಗಳ ಕಾಲ ವಾಹನಗಳ ನಿರಂತರ ಸಂಚಾರದಿಂದಾಗಿ ಇದೀಗ ಮಾರ್ಗಕ್ಕೆ ಕುತ್ತು ತಂದಿದೆ.

ಸ್ಥಳೀಯರ ಸಂಪರ್ಕ ಕೊಂಡಿ: ಮತ್ತಿಕೈ ಮಡೋಡಿ ಗ್ರಾಮೀಣ ರಸ್ತೆ ನೂರಾರು ಕುಟುಂಬಗಳ ಸಂಪರ್ಕ ಸೇತುವಾಗಿದೆ. 2012ರಲ್ಲಿ ಅಭಿವೃದ್ಧಿಗೊಂಡು 7 ವರ್ಷ ಕಳೆದರೂ ರಸ್ತೆ ಉತ್ತಮವಾಗಿತ್ತು. ಸುತ್ತಮುತ್ತಲಿನ ಹಳ್ಳಿಗರಿಗೆ ಪ್ರಮುಖ ಮಾರ್ಗವಾಗಿತ್ತು. ಇದೀಗ ಮಾರ್ಗ ಹದಗೆಟ್ಟಿದ್ದು ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next