Advertisement

ಸಂಚಾರ ಪೊಲೀಸರು ಸಂಗ್ರಹಿಸಿದ ದಂಡ 55 ಕೋಟಿ

12:08 PM Sep 09, 2018 | Team Udayavani |

ಬೆಂಗಳೂರು: ಪ್ರಯಾಣಿಕರು ಕರೆದ ಕಡೆ ಹೋಗದ ಆಟೋಗಳು, ಹೆಚ್ಚಿನ ದರ ವಸೂಲಿ ಸೇರಿದಂತೆ ಸಂಚಾರ ನಿಯಮ ಉಲ್ಲಂ ಸಿದ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನಗರ ಸಂಚಾರ ಪೊಲೀಸರು ವಾಹನ ಸವಾರರ ವಿರುದ್ಧ ಆ.31ರವರೆಗೆ 54,00,157 ಪ್ರಕರಣ ದಾಖಲಿಸಿದ್ದು, 55 ಕೋಟಿ ರೂ.ಗಿಂತ ಅಧಿಕ ದಂಡ ಸಂಗ್ರಹಿಸಿದ್ದಾರೆ.

Advertisement

ಕಳೆದ ವರ್ಷ ಆಗಸ್ಟ್‌ ಅಂತ್ಯದಲ್ಲಿ ದಂಡ ಸಂಗ್ರಹ ಮೊತ್ತ 70 ಕೋಟಿ ರೂ. ಗಡಿದಾಟಿತ್ತು. ಆದರೆ, ಈ ಬಾರಿ ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಕೆಲ ರಾಷ್ಟ್ರೀಯ ಪಕ್ಷಗಳ ಸಮಾವೇಶಗಳ ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಆದರೂ, ಪ್ರಸಕ್ತ ವರ್ಷ ಡಿಸೆಂಬರ್‌ ಅಂತ್ಯದೊಳಗೆ ಒಟ್ಟಾರೆ ದಂಡ ಸಂಗ್ರಹ ಮೊತ್ತ 95 ಕೋಟಿ ರೂ. ಸಮೀಪಿಸಲಿದೆ ಎಂದು ಸಂಚಾರ ಪೊಲೀಸರು ಅಂದಾಜಿಸಿದ್ದಾರೆ.

ಪ್ರಮುಖವಾಗಿ ಆಟೋ ಚಾಲಕರ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ನೇರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಆಟೋ ರಿûಾಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಸಂಚಾರ ಪೊಲೀಸರು, ಕರೆದ ಕಡೆ ಹೋಗದಿರುವುದು, ಹೆಚ್ಚುವರಿ ಪ್ರಯಾಣ ದರಕ್ಕೆ ಬೇಡಿಕೆ ಹಾಗೂ ಗುರುತಿನ ಚೀಟಿ ಪ್ರಕಟಿಸದಿರುವ ಕುರಿತು 29,944 ಪ್ರಕರಣಗಳನ್ನು ದಾಖಲಿಸಿದ್ದು, 5,98,88,000 ರೂ. ದಂಡ ಸಂಗ್ರಹಿಸಿದ್ದಾರೆ.

ಹಾಗೇ ಕುಡಿದು ವಾಹನ ಚಾಲನೆ ಮಾಡಿದ ಸವಾರ ವಿರುದ್ಧ 28,925 ಪ್ರಕರಣಗಳನ್ನು ದಾಖಲಿಸಿದ್ದು, 57,850,000 ರೂ. ದಂಡ ಸಂಗ್ರಹಿಸಿದ್ದಾರೆ. ಮೋಟಾರು ಕಾಯ್ದೆ ಅಡಿಯಲ್ಲಿ 47,12,57,900 ರೂ., ಕರ್ನಾಟಕ ಪೊಲೀಸ್‌ ಕಾಯ್ದೆ ಅಡಿಯಲ್ಲಿ 24,400 ರೂ., ಟೋಯಿಂಗ್‌ ಶುಲ್ಕವಾಗಿ 8,06,49,050 ರೂ., ಕೆಟಿಸಿ ಕಾಯ್ದೆ ಅಡಿಯಲ್ಲಿ 4,300 ರೂ. ಹಾಗೂ ಸಿಸಿ ಕ್ಯಾಮರಾ ಆಧರಿಸಿ 45,63,800 ರೂ. ದಂಡ ಸಂಗ್ರಹಿಸಲಾಗಿದೆ. ಒಟ್ಟಾರೆ 55,64,99,450 ರೂ. ಸಂಗ್ರಹಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ನಗರದಾದ್ಯಂತ ಸುಮಾರು 67 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಪ್ರತಿ ನಿತ್ಯ ನಗರದ ವಿವಿಧ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಸಾವಿರಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದು, ಈ  ಕುರಿತು ಹಲವು ಮಾದರಿಯಲ್ಲಿ ಜಾಗೃತಿ ಹಾಗೂ ಅಭಿಯಾನ ನಡೆಸಿದರೂ ವಾಹನ ಸವಾರರು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ದಂಡ ಸಂಗ್ರಹ ಮೊತ್ತ ಅಧಿಕವಾಗುತ್ತಿದೆ.

Advertisement

ಜತೆಗೆ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆಗೆ ದಂಡದ ಮೊತ್ತವನ್ನು ದ್ವಿಚಕ್ರ ವಾಹನಕ್ಕೆ 750 ರೂ. ಹಾಗೂ ಕಾರಿಗೆ 1,100 ರೂ. ನಿಗದಿ ಮಾಡಲಾಗಿದೆ. ಈ ಬಾರಿ ಈ ಮೊತ್ತವೂ ಹೆಚ್ಚಾಗಿದೆ ಎಂದರು. ಅಲ್ಲದೆ, ನಗರದಲ್ಲಿ ಸಂಚಾರ ನಿಯಮ ಉಲ್ಲಂ ಸಿದ ಸ್ಥಳೀಯ ಜಿಲ್ಲೆಗಳ ಸವಾರರ ಮನೆ ವಿಳಾಸ ಪತ್ತೆ ಹಚ್ಚಿ ನೋಟಿಸ್‌ ನೀಡಲಾಗಿದೆ. ಒಂದು ವೇಳೆ ನೋಟಿಸ್‌ಗೆ ಪ್ರತಿಕ್ರಿಯೆ ನೀಡದಿದ್ದರೆ, ಖುದ್ದು ಸಿಬ್ಬಂದಿ ಮನೆಗೆ ತೆರಳಿ ದಂಡ ಸಂಗ್ರಹಿಸುತ್ತಾರೆ ಎಂದು ಅಧಿಕಾರಿ ಹೇಳಿದರು.

60 ಸಾವಿರ ಅಕ್ರಮ ಆಟೋಗಳು: ಸಾರಿಗೆ ಇಲಾಖೆ ಮಾಹಿತಿ ಪ್ರಕಾರ ನಗರದಲ್ಲಿ 1.70 ಲಕ್ಷ ಆಟೋಗಳು ಸಂಚರಿಸುತ್ತಿವೆ. ಈ ಪೈಕಿ 60 ಸಾವಿರ ಆಟೋಗಳು ಅಕ್ರಮವಾಗಿ ನೊಂದಣಿಯಾಗಿವೆ ಎಂಬ ಮಾಹಿತಿಯಿದೆ. ಈ ಆಟೋಗಳ ಚಾಲಕರು ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸುವುದಲ್ಲದೆ, ಅಧಿಕ ಪ್ರಯಾಣ ದರಕ್ಕೆ ಬೇಡಿಕೆ ಇಡುತ್ತಿದ್ದಾರೆ. ಮತ್ತೂಂದೆಡೆ ಪ್ರಯಾಣಿಕರ ಒತ್ತಡಕ್ಕೆ ಮಣಿದು ಕೆಲ ಆಟೋ ಚಾಲಕರು ಸಂಚಾರ ನಿಯಮ ಉಲ್ಲಂ ಸುತ್ತಾರೆ ಎಂದು ಆಟೋ ಚಾಲಕರ ಅಸೋಸಿಯೇಷನ್‌ ಮುಖ್ಯಸ್ಥ ಶ್ರೀನಿವಾಸ್‌ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಸೂಚನೆಯಂತೆ 8ನೇ ತರಗತಿ ತೇರ್ಗಡೆಯಾಗದಿದ್ದರೆ ಚಾಲನಾ ಪರವಾನಗಿ ನೀಡುವುದಿಲ್ಲ. ಇದರಿಂದ ನೂರಾರು ಮಂದಿ ಚಾಲಕರು ಅನಗತ್ಯವಾಗಿ ದಂಡ ಕಟ್ಟುತ್ತಿದ್ದಾರೆ. ಮತ್ತೂಂದೆಡೆ ಸಣ್ಣ ಪ್ರಮಾಣದ ಸಂಚಾರ ನಿಯಮ ಉಲ್ಲಂಘನೆಗೆ ಸಂಚಾರ ಪೊಲೀಸರು ಪ್ರತಿ ಪ್ರಕರಣಕ್ಕೂ ಕನಿಷ್ಠ 2 ಸಾವಿರ ರೂ. ದಂಡ ವಿಧಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next