Advertisement

ಶರನ್ನವರಾತ್ರಿ ಉತ್ಸವಕ್ಕೆ ಸಾಂಪ್ರದಾಯಿಕ ತೆರೆ

10:40 PM Oct 10, 2019 | Team Udayavani |

ಸೋಮವಾರಪೇಟೆ: ಪಟ್ಟಣದ ಬಸವೇಶ್ವರ ದೇವಾಲಯ ಹಾಗೂ ಸೋಮೇಶ್ವರ ದೇವಾಲಯಗಳಲ್ಲಿ ನಡೆಯುತ್ತಿದ್ದ ಶರನ್ನವರಾತ್ರಿ ಉತ್ಸವ ಮಂಗಳವಾರ ಸಾಂಪ್ರದಾಯಿಕ ತೆರೆ ಕಂಡಿದೆ. ನವರಾತ್ರಿಯ ಅಂಗವಾಗಿ ಕಳೆದ ಹತ್ತು ದಿನಗಳಿಂದ ಈ ದೇವಾಲಯಗಳಲ್ಲಿ ಶರನ್ನವರಾತ್ರಿ ಉತ್ಸವ ನಡೆಸಲಾಗುತ್ತಿತ್ತು. 9 ದಿನ ಪ್ರತಿನಿತ್ಯ ಒಂದೊಂದು ಅಲಂಕಾರ ವಿಶೇಷ ಪೂಜೆಗಳಿಂದ ದೇವಿ ಚಾಮುಂಡೇಶ್ವರಿ ಆರಾಧನೆ ನಡೆಸಲಾಗಿತ್ತು. 10ನೇ ದಿನ ವಿಜಯ ದಶಮಿಯಂದು ಸೋಮೇಶ್ವರ ದೇವಾಲಯದಲ್ಲಿ ಪ್ರತಿಪ್ರತಿಷ್ಠಾಪಿಸಿದ ದೇವಿಯ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ ಮಂಗಳವಾದ್ಯ ಘೋಷ ಹಾಗೂ ವಿವಿಧ ಕಲಾ ತಂಡಗಳೊಡನೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಆನೆಕೆರೆಯಲ್ಲಿ ವಿಸರ್ಜಿಸಿ ಬನ್ನಿ ಮರ ಕಡಿಯುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಯಿತು.

Advertisement

ಬಸವೇಶ್ವರ ದೇವಾಲಯದಲ್ಲಿ ದೇವಿ ಚಾಮುಂಡೇಶ್ವರಿ ಮೂರ್ತಿಗೆ ಪಂಚಾಮೃತಾಭಿಷೇಕ, ಅಷ್ಟೋತ್ತರ, ಕುಂಕುಮಾರ್ಚನೆಯೊಂದಿಗೆ ದೇವಿ ಮಹಾತೆ¾ ಪಾರಾಯಣ ನಡೆಯಿತು. ಅನಂತರ ಬಾಳೆ ಕಡಿದು, ಬನ್ನಿ ಮುಡಿದು, ವಿಜಯ ದಶಮಿ ಆಚರಿಸಿ ದೇವಿಗೆ ಉಯ್ನಾಲೊತ್ಸವದ ಅನಂತರ ವಿಶೇಷ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಿತು. ಈ ಸಂಧರ್ಭ ದೇವಿಗೆ ವಿವಿಧ ವಿಶೇಷ ತಿನಿಸುಗಳ ಆಲಂಕಾರ ಮಾಡಲಾಗಿತ್ತು. ಎರಡು ದೇವಾಲಯಗಳಲ್ಲೂ ಕಳೆದ ಹತ್ತು ದಿನಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಶರನ್ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾದರು.

Advertisement

Udayavani is now on Telegram. Click here to join our channel and stay updated with the latest news.

Next