ಬೆಂಗಳೂರು: ನಟ ದರ್ಶನ್ಗೆ ವಿಶೇಷ ಆತಿಥ್ಯ ನೀಡಿದ ಪ್ರಕರ ಣದ ಬಳಿಕವೂ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಜೈಲಿನಲ್ಲಿ ಮತ್ತೆ ಮೊಬೈಲ್ ರಿಂಗಣಿಸಿದ್ದು, ಇಲ್ಲಿಂದಲೇ ವ್ಯಾಪಾರಿಯೊ ಬ್ಬನಿಗೆ ಆರೋಪಿಯೊಬ್ಬ ಹಫ್ತಾ ನೀಡುವಂತೆ ಧಮ್ಕಿ ಹಾಕಿದ್ದಾನೆ. ಅಲ್ಲದೆ ಜೈಲಿನಿಂದಲೇ ಮಾದಕ ವಸ್ತು ಮಾರಾಟಕ್ಕೆ ಸೂಚಿಸಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ವ್ಯಾಪಾರಿಯೊಬ್ಬನಿಗೆ ಹಫ್ತಾ ನೀಡುವಂತೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಸಿಸಿಬಿ ಪೊಲೀ ಸರು, ರೌಡಿಶೀಟರ್ ಸೈಕೋ ವಿಶ್ವನಾಥ್ ಎಂಬಾತ ನನ್ನು ವಶಕ್ಕೆ ಪಡೆದುವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಕೆಲ ತಿಂಗಳ ಹಿಂದೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ವಿಶ್ವನಾಥ್, ಕೆಲ ದಿನಗಳ ಹಿಂದೆ ವ್ಯಾಪಾರಿಯೊಬ್ಬರಿಗೆ ಜೈಲಿನಿಂದಲೇ ಕರೆ ಮಾಡಿ, ಪ್ರತಿ ವಾರ 40 ಸಾವಿರ ರೂ. ಹಫ್ತಾ ಕೊಡಬೇಕು. ಇಲ್ಲವಾದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ವ್ಯಾಪಾರಿಯಿಂದ ಸೈಕೋ ವಿಶ್ವನಾಥ್ ವಿರುದ್ಧ ಸಿಸಿಬಿಗೆ ದೂರು ನೀಡಿದ್ದರು.
ಇತ್ತೀಚೆಗೆ ಸಿಸಿಬಿ ಪೊಲೀಸರು ಹಾಗೂ ಅಶೋಕನಗರ ಠಾಣೆ ಪೊಲೀಸರು 2 ಪ್ರತ್ಯೇಕ ಪ್ರಕರಣಗಳಲ್ಲಿ 6 ಮಂದಿಯನ್ನು ಬಂಧಿಸಿದ್ದರು. ಈ ಆರೋಪಿಗಳ ವಿಚಾರಣೆಯಲ್ಲಿ ಜೈಲಿನಲ್ಲಿ ರುವ ತಮ್ಮ ಸಹಚರರ ಮೂಲಕವೇ ಡ್ರಗ್ಸ್ ಡೀಲಿಂಗ್ ನಡೆಯುತ್ತಿದ್ದರು. ಅವರ ಸೂಚನೆ ಮೇರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಸಿಸಿಬಿ ಪೊಲೀಸರು ಕೆಲ ದಿನಗಳ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರ ವಿಚಾರಣೆಯಲ್ಲಿ ಜೈಲಿನಲ್ಲಿರುವ ಮತ್ತೂಬ್ಬ ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿದೆ. ಆತ ಸೂಚಿಸಿದ ವ್ಯಕ್ತಿಯಿಂದ ಡ್ರಗ್ಸ್ ಪಡೆದು, ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದಾಗಿ ಹೇಳಿಕೆ ನೀಡಿದ್ದಾರೆ. ಜೈಲನಲ್ಲಿರುವ ವ್ಯಕ್ತಿಯನ್ನು ಸದ್ಯದಲ್ಲೇ ವಶಕ್ಕೆ ಪಡೆಯಲಾಗುತ್ತದೆ..
ಮತ್ತೂಂದು ಪ್ರಕರಣದಲ್ಲಿ ಅಶೋಕನಗರ ಠಾಣೆ ಪೊಲೀಸರು ಡ್ರಗ್ಸ್ ಪೆಡ್ಲಿಂಗ್ ಆರೋಪದಡಿ ನಾಲ್ವರು ಆರೋಪಿಗಳ ಬಂಧಿಸಿದ್ದರು. ಈ ಪೈಕಿ ಬಾಲಕೃಷ್ಣ ಎಂಬಾತ ಜೈಲಿನಿಂದಲೇ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಹೀಗಾಗಿ ಸದ್ಯದಲ್ಲೇ ಸಿಸಿಬಿ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.