ಇಡೀ ದೇಶದಲ್ಲೇ ಕರ್ನಾಟಕದ ಶಾಸಕರೇ ಅತ್ಯಂತ ಶ್ರೀಮಂತರು. 223 ಶಾಸಕರ ಒಟ್ಟಾರೆ ಆಸ್ತಿ ಸೇರಿಸಿದರೆ 14,359 ಕೋಟಿ ರೂ.ಗಳಾಗುತ್ತವೆ. ಇದು ಮಿಜೋರಾಂ ಮತ್ತು ಸಿಕ್ಕಿಂನ ಬಜೆಟ್‌ಗಿಂತಲೂ ಹೆಚ್ಚು! ದೇಶದಲ್ಲಿ ಒಟ್ಟು 4,001 ಶಾಸಕರ ಆಸ್ತಿ ಪರಿಶೀಲನೆ ಮಾಡಲಾಗಿದ್ದು, ಒಟ್ಟಾರೆ ಆಸ್ತಿ 54,545 ಕೋಟಿ ರೂ.ಗಳಾಗಿದೆ.
ಕರ್ನಾಟಕವೇ ಫಸ್ಟ್
ಕರ್ನಾಟಕದ 223 ಶಾಸಕರ ಆಸ್ತಿ ಬಗ್ಗೆ ಎಡಿಆರ್ ಪರಿಶೀಲನೆ ನಡೆಸಿದೆ. ಒಟ್ಟಾರೆಯಾಗಿ 14,359 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು ಇಲ್ಲಿನ 284 ಶಾಸಕರು 6,679 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಆಂಧ್ರ ಪ್ರದೇಶವಿದ್ದು, 4,914 ಕೋಟಿ ರೂ. ಆಸ್ತಿ ಮೌಲ್ಯವಿದೆ.
ಕರ್ನಾಟಕ,ರಾಜಸ್ಥಾನ, ಪಂಜಾಬ್, ಅರುಣಾಚಲ ಪ್ರದೇಶ, ಬಿಹಾರ, ದಿಲ್ಲಿ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಲ, ಗೋವಾ, ಮೇಘಾಲಯ, ಒಡಿಶಾ, ಅಸ್ಸಾಂ, ನಾಗಾಲ್ಯಾಂಡ್, ಉತ್ತರಾಖಂಡ, ಕೇರಳ, ಪುದುಚೇರಿ, ಝಾರ್ಖಂಡ್, ಸಿಕ್ಕಿಂ, ಮ ಣಿಪುರ, ಮಿಜೋರಾಂ ಮತ್ತು ತ್ರಿಪುರಾ. ಅಂದರೆ ಕರ್ನಾಟಕದ ಶಾಸಕರ ಆಸ್ತಿ ಈ ಎಲ್ಲ ರಾಜ್ಯಗಳ ಶಾಸಕರ ಒಟ್ಟಾರೆ ಆಸ್ತಿಗೆ ಸಮನಾಗಿದೆ.
ತ್ರಿಪುರಾ ಕಡಿಮೆ
ತ್ರಿಪುರಾದ 59 ಶಾಸಕರು ಒಟ್ಟಾರೆಯಾಗಿ 90 ಕೋಟಿ ರೂ.ನಷ್ಟು ಮಾತ್ರ ಆಸ್ತಿ ಹೊಂದಿದ್ದಾರೆ. ಅನಂತರದ ಸ್ಥಾನದಲ್ಲಿ ಮಿಜೋರಾಂ 160 ಕೋಟಿ ರೂ., ಮಣಿಪುರದ ಶಾಸಕರು 225 ಕೋಟಿ ರೂ. ಆಸ್ತಿ ಹೊಂದಿದ್ದಾರೆ.